ಸುಳ್ಯ:ಲಿಟ್ಲ್ ಫ್ಲವರ್ ಶಾಲೆಗೆ ಬೆಥನಿ ಸಂಸ್ಥೆಯ ಜನರಲ್ ಕೌನ್ಸಿಲರ್ ಡಾ.ಮಾರಿಯೆಟ್ ಬಿ ಎಸ್ ಭೇಟಿ: ಶಾಲಾ ಮಕ್ಕಳ ಶಿಸ್ತು ಕಂಡು ಅಚ್ಚರಿ

ಶತಮಾನದ ಸನಿಹದಲ್ಲಿರುವ ಲಿಟ್ಲ್ ಫ್ಲವರ್ ಶಾಲೆಗೆ ಬೆಥನಿ ಸಂಸ್ಥೆಯ ಜನರಲ್ ಕೌನ್ಸಿಲರ್ ವಂದನೀಯ ಭಗಿನಿ ಡಾ. ಮಾರಿಯೆಟ್ ಬಿ ಎಸ್ ಭೇಟಿ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು. ಶಾಲಾ ಮುಖ್ಯ ಶಿಕ್ಷಕಿ ಭಗಿನಿ ವೆನಿಶಾ ಬಿ ಎಸ್ ಹಾಗೂ ನಿಯೋಜಿತ ಮುಖ್ಯಶಿಕ್ಷಕಿ ಐರಿನ್ ವೇಗಸ್ ರವರ ನೇತೃತ್ವದಲ್ಲಿ ಮಕ್ಕಳು ಆರತಿ ಎತ್ತಿ ಸ್ವಾಗತಿಸಿದರು. ಬಳಿಕ ಶಾಲಾ ನಾಯಕ ಆಕಾಶ್ ನೇತೃತ್ವದಲ್ಲಿ ಬ್ಯಾಂಡ್ ಮೂಲಕ ಸ್ವಾಗತಿಸಿ ವೇದಿಕೆಗೆ ಕರೆತರಳಾಯಿತು. ಸ್ವಾಗತ ನೃತ್ಯದೊಂದಿಗೆ ಸ್ವಾಗತ ಕೋರಿ. ಶಾಲಾ ಮುಖ್ಯ ಶಿಕ್ಷಕಿ ಭಗಿನಿ ವೆನಿಶಾ ಬಿ ಎಸ್ ಮಾತಿನಲ್ಲಿ ಸ್ವಾಗತಿಸಿದರು. ಮಕ್ಕಳಿಂದ ಬೆಥನಿ ಸಂಸ್ಥೆಯ ಪ್ರಮುಖ ಆದ್ಯತೆಗಳ ಕಿರು ನಾಟಕ ಪ್ರದರ್ಶನ ನಡೆಯಿತು.
ವೇದಿಕೆಯಲ್ಲಿ ಬೆಥನಿ ಸಂಸ್ಥೆಯ ಜನರಲ್ ಪ್ರೊಕ್ಯುರೇಟರ್ ವಂದನಿಯ ಭಗಿನಿ ವೈಲೆಟ್ ಬಿ ಎಸ್, ಶಾಲಾ ಸಂಚಾಲಕಿ ವಂದನೀಯ ಭಗಿನಿ ಪ್ರಶಾಂತಿ ಬಿ ಎಸ್, ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾದ ವಿನಯ ಸುವರ್ಣ, ಶಾಲಾ ಸುರಕ್ಷಾ ಸಮಿತಿ ಅಧ್ಯರಾದ ಚೇತನ್ ಕುಮಾರ್ ಮೊಟ್ಟೆತಡ್ಕ,ಶಾಲಾ ಮುಖ್ಯ ಶಿಕ್ಷಕಿ ಭಗಿನಿ ವೆನಿಶಾ ಬಿ ಎಸ್, ನಿಯೋಜಿತ ಮುಖ್ಯ ಶಿಕ್ಷಕಿ ಭಗಿನಿ ಐರಿನ್ ವೇಗಸ್ ಉಪಸ್ಥಿತರಿದ್ದರು.ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿ, ಶಾಲಾ ನಿಯೋಜಿತ ಮುಖ್ಯ ಶಿಕ್ಷಕಿ ಐರಿನ್ ವೇಗಸ್ ವಂದಿಸಿದರು. ಬಳಿಕ ಶಿಕ್ಷಕರ ಜೊತೆ ಸಂವಾದ ನಡೆಯಿತು.

Related Posts

Leave a Reply

Your email address will not be published.