ಮೊಹಮ್ಮದನ್ ಹೆಲ್ಪಿಂಗ್ ಹ್ಯಾಂಡ್ಸ್ ವತಿಯಿಂದ 79ನೇ ಸ್ವಾತಂತ್ರೋತ್ಸವ ಭಾಷಣ ಸ್ಪರ್ಧೆ, ವಿಜೇತರಿಗೆ ಪ್ರಶಸ್ತಿ ವಿತರಣೆ
ಪಡುಬಿದ್ರಿ:
ಮೊಹಮ್ಮದನ್ ಹೆಲ್ಸಿಂಗ್ ಹ್ಯಾಂಡ್ ದೀನ್ ಸ್ಟ್ರೀಟ್, ಪಡುಬಿದ್ರಿ ಇವರ ವತಿಯಿಂದ 79ನೇ ಸ್ವಾತಂತ್ರೋತ್ಸವದ ಪ್ರಯುಕ್ತ ಆನ್ಲೈನ್ (Online) ವೀಡಿಯೊ ಭಾಷಣ ಸ್ಪರ್ಧೆ ಹಾಗೂ ಪ್ರಶಸ್ತಿ ವಿತರಣಾ ಸಮಾರಂಭ ಸುಜ್ಲಾನ್ ಕಾಲೊನಿ ಸಭಾಂಗಣದಲ್ಲಿ 17 ರ ಭಾನುವಾರದಂದು ಸಂಜೆ ಜರುಗಿತು.
ಮೊಹಮ್ಮದನ್ ಹೆಲ್ಪಿಂಗ್ ಹ್ಯಾಂಡ್ಸ್ ಅಧ್ಯಕ್ಷರಾದ ನಿಯಾಜ್ ಸ್ವಾಗತಿಸಿ ಮಾತನಾಡಿ, “ಮೊಹಮ್ಮದನ್ ಹೆಲ್ಪಿಂಗ್ ಹ್ಯಾಂಡ್ಸ್ ಸಂಸ್ಥೆ ಸಮಾಜಮುಖಿ ಚಟುವಟಿಕೆಗಳಿಗೆ ಸದಾ ಬದ್ಧವಾಗಿದೆ. ಶಿಕ್ಷಣ, ಸಾಮಾಜಿಕ ಸೇವೆ ಹಾಗೂ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಕಾರ್ಯಗಳಲ್ಲಿ ಈ ಸಂಘಟನೆ ಮುಂದಾಳತ್ವ ವಹಿಸಿದೆ. ಮಕ್ಕಳ ಪ್ರತಿಭೆಯನ್ನು ಬೆಳಗಿಸಲು ಹಾಗೂ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗೆ ಕಾರಣವಾಗಲು ನಾವು ನಿರಂತರ ಪ್ರಯತ್ನಿಸುತ್ತೇವೆ” ಎಂದು ಹೇಳಿದರು.

ಕಾಪು ಬ್ಲಾಕ್ ಕಾಂಗ್ರೆಸ್ ದಕ್ಷಿಣ ಅಧ್ಯಕ್ಷರಾದ ವೈ. ಸುಕುಮಾರ್ ಅವರು ಮಕ್ಕಳ ಭಾಷಣ ಸ್ಪರ್ಧೆಯ ಕುರಿತು ಮಾತನಾಡಿ, “ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವುದರ ಜೊತೆಗೆ ಅವರ ಪ್ರತಿಭೆಯನ್ನು ಹೊರಹಾಕಲು ವೇದಿಕೆಯಾಗುತ್ತವೆ. ಭಾಷಣ ಕಲೆಯ ಮೂಲಕ ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆದು ರಾಷ್ಟ್ರಪ್ರೇಮವೂ ವೃದ್ಧಿಸುತ್ತದೆ” ಎಂದು ಹೇಳಿದರು.
ಕೆಪಿಸಿಸಿ ಕೋಆರ್ಡಿನೇಟರ್ ನವೀನ್ ಜೆ. ಶೆಟ್ಟಿ ಅವರು ಸ್ವಾತಂತ್ರ್ಯದ ವಿಷಯವಾಗಿ ಮಾತನಾಡಿ, “ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ಮಹಾನರ ತ್ಯಾಗ ಮತ್ತು ಬಲಿದಾನದ ಫಲವಾಗಿ ಇಂದು ನಾವು ಸ್ವತಂತ್ರ ಭಾರತದಲ್ಲಿ ಬದುಕುತ್ತಿದ್ದೇವೆ. ಈ ಸ್ವಾತಂತ್ರ್ಯವನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ. ಯುವ ಪೀಳಿಗೆಯವರು ದೇಶಾಭಿಮಾನ ಮತ್ತು ಸಮಾಜಸೇವೆಯ ಮನೋಭಾವದಿಂದ ಮುಂದುವರಿಯಬೇಕು” ಎಂದು ಹೇಳಿದರು.
ವಿಜೇತರ ಪಟ್ಟಿ:
ವರ್ಗ 1 (0ರಿಂದ 2ನೇ ತರಗತಿ):
ಪ್ರಥಮ ಸ್ಥಾನ – ಮುಝಮಿಲ್
ದ್ವಿತೀಯ ಸ್ಥಾನ – ಮುದ್ದಸಿರ್
ವರ್ಗ 2 (3ರಿಂದ 5ನೇ ತರಗತಿ):
ಪ್ರಥಮ ಸ್ಥಾನ – ಫಾತಿಮಾ ಹೂರೈನ್
ದ್ವಿತೀಯ ಸ್ಥಾನ – ನವ್ಯಾ ಪಿ. ಓಲೇಕಾ
ವರ್ಗ 3 (6ರಿಂದ 8ನೇ ತರಗತಿ):
ಪ್ರಥಮ ಸ್ಥಾನ – ಆಶಿಕ್
ದ್ವಿತೀಯ ಸ್ಥಾನ – ಜಝೀಲಾ ಮತ್ತು ವಂಶಿ
ವರ್ಗ 4 (9ರಿಂದ 12ನೇ ತರಗತಿ):
ಪ್ರಥಮ ಸ್ಥಾನ – ಫಾತಿಮಾತ್ ಇನಹ್ ಮತ್ತು ಮುಹಮ್ಮದ್ ಅಫ್ಲಾಮ್
ದ್ವಿತೀಯ ಸ್ಥಾನ – ಆಯಿಶತ್ ಅಫ್ರಾ
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರುಗಳಾದ ರಮೀಜ್ ಹುಸೇನ್, ಸಂಜೀವಿ ಪೂಜಾರ್ತಿ ,ಶಾಫಿ ಎಂ ಎಸ್, ಮಾಜಿ ಗ್ರಾಮ ಪಂಚಾಯತ್ ಸದಸ್ಯ ಬುಡನ್ ಸಾಹೇಬ್, ಯೂತ್ ಫೌಂಡೇಶನ್ ಇದರ ಅಧ್ಯಕ್ಷ ಅಬ್ದುಲ್ ಹಮೀದ್, ಜಹೀರ್ ಪಡುಬಿದ್ರಿ ,ಮೊಹಮ್ಮದ ಹೆಲ್ಪಿಂಗ್ ಹ್ಯಾಂಡ್ ಸದಸ್ಯರುಗಳಾದ ಇಕ್ಬಾಲ್, ಮರುವನ್ , ಜಹೀರ್ , ಕಂಚಿನಡ್ಕ ,ನಜೀರ್ ಟೈಲರ್ ,ದಾವುದ್ ,ಅಶ್ರಫ್, ಅಲಿ, ಸಿಯಾನ್ ,ಹಕೀಮ್ ,ರಜಾಕ್ ,ಮತ್ತಿತರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಮೊಹಮ್ಮದ್ ಅಶ್ರಫ್ ಧನ್ಯವಾದ ಸಮರ್ಪಿಸಿದರು. ಬಿ.ಎಸ್. ಆಚಾರ್ಯ ಕಾರ್ಯಕ್ರಮವನ್ನು ನಿರೂಪಿಸಿದರು.


















