ಅತಿ ಹೆಚ್ಚು ಬಣ್ಣಗಳು ಇರುವ ಬಾವುಟ ಯಾವ ದೇಶದ್ದು

ಬೆಲಿಜ್ ದೇಶದ ಬಾವುಟವು ಹನ್ನೆರಡು ಬಣ್ಣಗಳನ್ನು ಹೊಂದಿದೆ. ಭಾರತದ ಧ್ವಜದಲ್ಲಿ ನಾಲ್ಕು ಬಣ್ಣಗಳು ಇವೆ.ಸಾಮಾನ್ಯವಾಗಿ ಜಗತ್ತಿನ ಬಾವುಟಗಳು ಎರಡು ಇಲ್ಲವೇ ಮೂರು ಬಣ್ಣಗಳಲ್ಲಿ ಇರುತ್ತವೆ. ಅತಿ ಹೆಚ್ಚು ಬಣ್ಣಗಳ ವರ್ಣಮಯ ಬಾವುಟ ಬೆಲಿಜ್ ದೇಶದ್ದಾಗಿದೆ. ಇದರಲ್ಲಿ ಹನ್ನೆರಡು ಬಣ್ಣಗಳನ್ನು ಗುರುತಿಸಬಹುದು.

ನೀಲಿ, ಕೆಂಪು, ಬಿಳಿ, ಕಪ್ಪು, ಕಂದು, ಹಳದಿ, ಹಸಿರು ಅಲ್ಲದೆ ಮಿಶ್ರ ಬಣ್ಣಗಳ ಧ್ವಜವಿದು.ಡೊಮಿನಿಕಾ, ಪೋರ್ಚುಗಲ್, ಸೌತ್ ಆಫ್ರಿಕಾದ ಧ್ವಜಗಳು ಆರು ಬಣ್ಣ ಹೊಂದಿವೆ. ಡೊಮಿನಿಕಾ ಬಾವುಟವು ಹೆಚ್ಚುವರಿ ಮಿಶ್ರ ಶೇಡ್‌ಗಳನ್ನು ಹೊಂದಿದೆ. ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್ ಹಾಗೂ ಸೆಚೆಲಸ್ ಕೊಡಿಗಳು ಐದು ಬಣ್ಣಗಳಿಂದ ಕೂಡಿವೆ.

ಭಾರತದ ಬಾವುಟವನ್ನು ಸಾಮಾನ್ಯವಾಗಿ ಮುಬ್ಬಣ್ಣ ಎನ್ನುವುದು ರೂಢಿ. ಆದರೆ ನಡುವೆ ನೀಲಿ ಬಣ್ಣದ ಅಶೋಕ ಚಕ್ರ ಈ ಕೊಡಿಯಲ್ಲಿ ಇದೆ. ಭಾರತ, ಆಂಡೋರಾ, ವನಾವಟು ಮಾರಿಶಿಯಸ್ ದೇಶಗಳು ತಲಾ ನಾಲ್ಕು ಬಣ್ಣಗಳನ್ನು ಹೊಂದಿದವುಗಳಾಗಿವೆ.
