ಚಿತ್ರದುರ್ಗ ಕ್ಷೇತ್ರದ ಕಾಂಗ್ರೆಸ್ ಶಾಸಕ ವೀರೇಂದ್ರ ಮಾಲಿಕತ್ವದ ಜೂಜು ಮನೆಗಳು,ಜಾರಿ ನಿರ್ದೇಶನಾಲಯದಿಂದ ಸಮಗ್ರ ದಾಳಿ

ಚಿತ್ರದುರ್ಗ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿರುವ ವೀರೇಂದ್ರ ಮಾಲಿಕತ್ವದ ಮನೆ, ಕಚೇರಿ, ಜೂಜು ಅಡ್ಡೆಗಳು ಸೇರಿ ಇಡಿ- ಜಾರಿ ನಿರ್ದೇಶನಾಲಯವು 30 ಕಡೆ ದಾಳಿ ನಡೆಸಿ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿತ್ತು.ಶಾಸಕ ವೀರೇಂದ್ರ ಮತ್ತು ಅವರ ಸಹೋದರ ಬೆಟ್ಟಿಂಗ್ ಜಾಲ ನಡೆಸುತ್ತಿರುವುದಾಗಿ ಹೇಳಲಾಗಿದೆ. ಗೋವಾದಲ್ಲಿ ಕ್ಯಾಸಿನೋ ಹೊಂದಿರುವುದಾಗಿಯೂ, ಕ್ಯಾಸಿನೋಗಳ ಪಾಲುದಾರಿಕೆ ಹೊಂದಿರುವುದಾಗಿಯೂ, ಜೂಜು ಅಡ್ಡೆಗಳ ಮಾಲಕತ್ವ ಹೊಂದಿರುವುದಾಗಿಯೂ ಹೇಳಲಾಗುತ್ತಿದೆ. ಜಾರಿ ನಿರ್ದೇಶನಾಲಯದಿಂದ ಈ ನಿಟ್ಟಿನಲ್ಲಿ ಸಮಗ್ರ ದಾಳಿ ನಡೆದಿದೆ.

ಗೋವಾದಲ್ಲಿ ಕ್ಯಾಸಿನೋ ಹೊಂದಿರುವುದಾಗಿಯೂ, ಕ್ಯಾಸಿನೋಗಳ ಪಾಲುದಾರಿಕೆ ಹೊಂದಿರುವುದಾಗಿಯೂ, ಜೂಜು ಅಡ್ಡೆಗಳ ಮಾಲಕತ್ವ ಹೊಂದಿರುವುದಾಗಿಯೂ ಹೇಳಲಾಗುತ್ತಿದೆ. ಜಾರಿ ನಿರ್ದೇಶನಾಲಯದಿಂದ ಈ ನಿಟ್ಟಿನಲ್ಲಿ ಸಮಗ್ರ ದಾಳಿ ನಡೆದಿದೆ. ಚಿತ್ರದುರ್ಗದ 6, ಬೆಂಗಳೂರಿನ 10, ಗೋವಾದ ಹಾಗೂ ಸಿಕ್ಕಿಂನ 5, ಹುಬ್ಬಳ್ಳಿ, ಮುಂಬಯಿ, ಜೋಧಪುರದ ತಲಾ 1 ಕಡೆ ಜಾರಿ ನಿರ್ದೇಶನಾಲಯದವರು ಒಂದೇ ಸಮಯದಲ್ಲಿ ದಾಳಿ ನಡೆಸಿದರು.

ಶಾಸಕರಾದ ವೀರೇಂದ್ರ, ಅವರ ಸಹೋದರರಾದ ಕೆ. ಸಿ. ತಿಪ್ಪೆಸ್ವಾಮಿ, ಕೆ. ಸಿ. ನಾಗರಾಜು ಇವರೆಲ್ಲ ಹಲವೆಡೆ ಕ್ಯಾಸಿನೋ ಹಾಗೂ ವಿಡಿಯೋ ಗೇಮ್ಸ್ ಅಡ್ಡೆಗಳನ್ನು ನಡೆಸುತ್ತಿರುವುದಾಗಿ ಆಪಾದಿಸಲಾಗಿದೆ. ಒಂದು ರದ್ದಾಗಿರುವ ನೋಟಿನ ಕಟ್ಟುಗಳು ಸಿಕ್ಕಿದ್ದಾಗಿಯೂ ಹೇಳಲಾಗಿದೆ.
