ಸುಳ್ಯ: ಪಿಎಸ್ಆರ್ ಸಿಲ್ಕ್ & ಸಾರೀಸ್‌ನ ಸಾರಿಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ

ಸುಳ್ಯ:ಮಂಗಳೂರಿನಲ್ಲಿ ಕಳೆದ ಹಲವಾರು ವರ್ಷಗಳಿಂದ ಜವಳಿ ಉದ್ಯಮದಲ್ಲಿ ಜನರ ಮನಗೆದ್ದ ಪಿ.ಎಸ್.ಆರ್.ಸಿಲ್ಕ್ ವತಿಯಿಂದ ಸುಳ್ಯದ ಜ್ಯೂನಿಯರ್ ಕಾಲೇಜು ರಸ್ತೆಯ ಲಯನ್ಸ್ ಸೇವಾ ಸದನದಲ್ಲಿ ಸಾರಿಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ನಡೆಯುತ್ತಿದ್ದು ಜನರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆ.22ರಿಂದ ಆರಂಭಗೊಂಡ ಸಾರಿಗಳ ಪ್ರದರ್ಶನ ಎರಡು ದಿನ ಮುಗಿದಿದ್ದು ಇನ್ನು ಒಂದು ದಿನ ಮಾತ್ರ ಲಭ್ಯವಿದೆ.ಆ.24 ರಂದು ಭಾನುವಾರ ರಾತ್ರಿ 8 ಗಂಟೆಯ ತನಕ ಪ್ರದರ್ಶನ ಮತ್ತು ಮಾರಾಟ ಇರಲಿದೆ. ಬೆಳಿಗ್ಗೆ 10ರಿಂದ ರಾತ್ರಿ 8 ಗಂಟೆಯ ತನಕ ಮೇಳ ನಡೆಯುತ್ತಿದ್ದು. ಅಪೂರ್ವ ಸಾರಿಗಳ ಖರೀದಿಗಾಗಿ ಎರಡು ದಿನದಲ್ಲಿ ಸಾವಿರಾರು ಮಂದಿ ಹರಿದು ಬಂದರು. 400 ರೂಗಳಿಂದ ಒಂದು ಸಾವಿರ ರೂಗಳ ತನಕ ವೈವಿಧ್ಯಮಯ ಸೀರೆಗಳ ಪ್ರದರ್ಶನ ಮತ್ತು ಮಾರಾಟ ನಡೆಯುತ್ತಿದ್ದು. ಆಕರ್ಷಕ ಡಿಸ್ಕೌಂಟ್ ಸೇಲ್ ನಡೆಯುತ್ತಿದ್ದು ಡಿಸ್ಕೌಂಟ್ ಸಾರಿಗಳ ಪ್ರತ್ಯೇಕ ಕೌಂಟರ್ ತೆರೆಯಲಾ್ಇದೆ. ಅತ್ಯುತ್ತಮ ಗುಣಮಟ್ಟದ ಬ್ರಾಂಡೆಡ್ ಸಿಲ್ಕ್ ಸಾರೀಸ್, ಕಾಟನ್ ಸಾರೀಸ್, ಫ್ಯಾನ್ಸಿ ಸಾರೀಸ್, ಸೆಲ್ವಾರ್ ಮೇಟೀರಿಯಲ್ಸ್ ಸೇರಿದಂತೆ ಎಲ್ಲಾ ರೀತಿಯ ವೈವಿಧ್ಯಮಯ ಸಾರಿಗಳ ಅಪೂರ್ವ ಸಂಗ್ರಹ ಇಲ್ಲಿದೆ. ಇದೀಗ ಕೆಲವೇ ತಿಂಗಳ ಅಂತರದಲ್ಲಿ ಎರಡನೇ ಬಾರಿ ನಡೆಯುತ್ತಿರುವ ಸಾರಿ ಮೇಳಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಉಂಟಾಗಿದೆ.

ಈ ಹಿಂದೆ ಸುಳ್ಯದಲ್ಲಿ ಪಿಎಸ್ಆರ್ ಸಿಲ್ಕ್ ಸಾರೀಸ್ ಪ್ರದರ್ಶನ ಮತ್ತು ಮಾರಾಟ ನಡೆದ ಸಂದರ್ಭದಲ್ಲಿ ಸುಳ್ಯದ ಜನತೆಯಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಗ್ರಾಹಕರ ನಿರಂತರ ಬೇಡಿಕೆಯ ಹಿನ್ನಲೆಯಲ್ಲಿ ಮತ್ತೆ 3 ದಿನಗಳ ಸಾರಿಗಳ ಪ್ರದರ್ಶನ ಮತ್ತು ಮಾರಾಟ ನಡೆಯುತ್ತಿದ್ದು ಸುಂದರ ಸೀರೆಗಳ ವರ್ಣಮಯ ಸಾರಿ ಲೋಕವನ್ನು ಕಣ್ತುಂಬಿಕೊಳ್ಳಲು.. ಖರೀದಿಸಿ ಆನಂದಿಸಲು.. ಇನ್ನೊಂದೇ ದಿನ ಬಾಕಿ..
