ನೆತ್ತರಕೆರೆ ಸಿನಿಮಾದ ಟ್ರೈಲರ್ ಬಿಡುಗಡೆ

ತುಳು ಮತ್ತು ಕನ್ನಡ ಬಹುನಿರೀಕ್ಷೆಯ ಸಿನಿಮಾ ನೆತ್ತರಕೆರೆ.. ಆಗಸ್ಟ್ 29ರಂದು ಸಿನಿಮಾ ತೆರೆಕಾಣಲಿದ್ದು, ಅಸ್ತ್ರಪ್ರೊಡಕ್ಷನ್ ಯೂಟ್ಯೂಬ್ ಚಾನೆಲ್‌ನಲ್ಲಿ ಸಿನಿಮಾದ ಟ್ರೈಲರ್ ಬಿಡುಗಡೆಗೊಂಡಿತು.
ತುಳು ಮತ್ತು ಕನ್ನಡದ ಬಹು ನಿರೀಕ್ಷೆಯ ಸಿನಿಮಾ ನೆತ್ತರಕೆರೆ… ಈಗಾಗಲೇ ಟೀಸರ್ ಬಿಡುಗಡೆಗೊಂಡು ಸಾಕಷ್ಟು ಕುತೂಹಲವನ್ನು ಮೂಡಿಸಿತ್ತು. ಅಸ್ತ್ರ ಪ್ರೋಡಕ್ಷನ್ ಯುಟ್ಯೂಬ್ ಚಾನೆಲ್ ನಲ್ಲಿ ಸಿನಿಮಾದ ಸಾಂಗ್ ಬಿಡುಗಡೆಯಾಗಿದ್ದು, ಸಖತ್ ಸೌಂಡ್ ಮಾಡುತ್ತಿದೆ. ಇದೀಗೆ ಸಿನಿಮಾದ ಟ್ರೈಲರ್ ಬಿಡುಗಡೆಗೊಂಡಿದ್ದು, ಸಿನಿ ಪ್ರೇಕ್ಷಕರಲ್ಲಿ ಇನ್ನಷ್ಟು ಕುತೂಹಲವನ್ನೇ ಕೆರಳಿಸಿದೆ. ವಿಭಿನ್ನ ಕಥಾಹಂದರ ಹೊಂದಿರುವ ಸಿನಿಮಾ ಆಗಿದ್ದು, ತುಳು ಸಿನಿಮಾದ ಇತಿಹಾಸದಲ್ಲೇ ಮಾಸ್ ಸಿನಿಮಾವಾಗಿದೆ.

ಅಸ್ತ್ರ ಪ್ರೊಡಕ್ಷನ್ ಲಾಂಛನದಲ್ಲಿ ಸ್ವರಾಜ್ ಶೆಟ್ಟಿ ನಿರ್ದೇಶನದಲ್ಲಿ ಲಂಚುಲಾಲ್ ಕೆ ಎಸ್ ನಿರ್ಮಾಣದಲ್ಲಿ ನೆತ್ತರೆಕೆರೆ ಸಿನಿಮಾ ಇದೇ ಆಗಸ್ಟ್ ೨೯ರಂದು ಬಿಡುಗಡೆಯಾಗಲಿದೆ.. ಈಗಾಗಲೇ ತುಳು ಸಿನಿಮಾದ ಟೀಸರ್ ಬಿಡುಗಡೆಗೊಂಡಿತ್ತು. ಇದೀಗ ಸಿನಿಮಾದ ಟ್ರೈಲರ್ ಬಿಡುಗಡೆಗೊಂಡಿದ್ದು, ಸಿನಿಮಾರಂಗದಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿದೆ. ನೆತ್ತರಕೆರೆ ವಿಭಿನ್ನ ಬಗೆಯ ಸಿನಿಮಾವಾಗಿದ್ದು, ಪಾತ್ರಗಳು ಭಿನ್ನವಾಗಿದೆ. ಸಿನಿಮಾದ ಬಗ್ಗೆ ಪ್ರೇಕ್ಷಕರಲ್ಲಿ ಕಾತರ, ಕುತೂಹಲ ಹೆಚ್ಚಿದೆ.

ಸ್ವರಾಜ್ ಶೆಟ್ಟಿ ಸಿನಿಮಾಕ್ಕೆ ಚಿತ್ರಕತೆ , ಸಂಭಾಷಣೆಯೊಂದಿಗೆ ನಿರ್ದೇಶನದ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದಾರಲ್ಲದೆ ನಾಯಕ ನಟನಾಗಿಯೂ ಅಭಿನಯಿಸಿದ್ದಾರೆ. ನಾಯಕಿಯಾಗಿ ದಿಶಾಲಿ ಪೂಜಾರಿ ನಟಿಸಿದ್ದಾರೆ. ವಿಶೇಷ ಪಾತ್ರದಲ್ಲಿ ಲಂಚುಲಾಲ್ ಕೆ.ಎಸ್, ನಟ ಸುಮನ್ ತಲ್ವಾರ್, ಅಭಿನಯಿಸಿದ್ದಾರೆ.
ಸಿನಿಮಾದಲ್ಲಿ ಪೃಥ್ವಿನ್ ಪೊಳಲಿ, ಯುವ ಶೆಟ್ಟಿ, ಅನಿಲ್ ಉಪ್ಪಳ, ಪುಷ್ಪರಾಜ್ ಬೊಳ್ಳೂರು, ವಿಜಯ ಮಯ್ಯ, ನೀತ್ ಪೂಜಾರಿ, ಉತ್ಸವ ವಾಮಂಜೂರು, ಚಂದ್ರಶೇಖರ ಸಿದ್ದಕಟ್ಟೆ, ಮನೀಶ್ ಶೆಟ್ಟಿ ಉಪಿರ, ಭವ್ಯಾ ಪೂಜಾರಿ, ನಮಿತ ಕಿರಣ್, ಸುನೀತಾ, ವಿನಾಯಕ್ ಜಪ್ಪು, ಭಗವಾನ್, ಕೀರ್ತನ್ ಮುಲ್ಕಿ ಭೂಮಿಕೆಯಲ್ಲಿದ್ದಾರೆ.