ಅತಿ ಹೆಚ್ಚು ಜೀರಿಗೆ ಬೆಳೆಯುವ ದೇಶ

ಜೀರಿಗೆ ಬೆಳೆಯ ಹಳೆಯ ದಾಖಲೆ ಈಜಿಪ್ತಿನಲ್ಲಿ ಸಿಕ್ಕಿದ್ದರೂ ಲೋಕದಲ್ಲಿ ಈಗ ಅತಿ ಹೆಚ್ಚು ಜೀರಿಗೆ ಬೆಳೆಯುವ ಹಾಗೂ ರಫ್ತು ಮಾಡುವ ದೇಶವಾಗಿದೆ ಭಾರತ.ಭಾರತವು ಜಾಗತಿಕ ಉತ್ಪಾದನೆಯ 60 ಶೇಕಡಾ ಜೀರಿಗೆ ಬೆಳೆಯುತ್ತದೆ. ಭಾರತದ ಒಟ್ಟು ಜೀರಿಗೆ ಬೆಳೆಯಲ್ಲಿ 65 ಶೇಕಡಾ ರಾಜಸ್ತಾನದಲ್ಲಿ ಬೆಳೆಯುತ್ತದೆ. ಭಾರತವು ಬೆಳೆದ ಜೀರಿಗೆಯಲ್ಲಿ ೬೦ ಶೇಕಡಾದಷ್ಟನ್ನು ಬ್ರಿಟನ್, ಯುಎಸ್‌ಎ ಮೊದಲಾದ ದೇಶಗಳಿಗೆ ರಫ್ತು ಮಾಡುತ್ತದೆ. ಐದು ಪ್ರಮುಖ ಜೀರಿಗೆ ಬೆಳೆಯುವ ದೇಶಗಳು ಮತ್ತು ಪ್ರಮಾಣ ಮುಂದಿನಂತಿದೆ

ಭಾರತ 9ಲಕ್ಷ ಟನ್, ಸಿರಿಯಾ 40 ಸಾವಿರ ಟನ್, ಟರ್ಕಿ 35 ಸಾವಿರ ಟನ್, ಇರಾನ್ 25 ಸಾವಿರ ಟನ್, ಚೀನಾ 10 ಸಾವಿರ ಟನ್. ಈಜಿಪ್ತ್, ಪಾಕಿಸ್ತಾನ, ಅಫಘಾನಿಸ್ತಾನ, ಮೊರಾಕೊ ಇತರ ಪ್ರಮುಖ ಜೀರಿಗೆ ಬೆಳೆಯುವ ದೇಶಗಳಾಗಿವೆ. ಅಡುಗೆ ಮನೆಯ ಜೀರಿಗೆ, ಮನೆ ಮದ್ದಾಗಿಯೂ ಎಲ್ಲ ಕಡೆ ಬಳಕೆಯಾಗುತ್ತದೆ.
