ಮಂಜೇಶ್ವರ: ರಾಮಯ್ಯ ನಾಯ್ಕ್ ನಿಧನ

ಮಂಜೇಶ್ವರ ಸಮೀಪ ವರ್ಕಾಡಿ ಕೆಳಗಿನ ಪಾಡ ರಾಮಯ್ಯ ನಾಯ್ಕ್ (80)ರವರು ಅಲ್ಪ ಕಾಲೀನ ಅನಾರೋಗ್ಯ ದಿಂದ ಮೃತ ಪಟ್ಟಿರುತ್ತಾರೆ. ಅವರು ಜನಸಂಘ ಕಾಲದಿಂದ ಬಿಜೆಪಿ ಸದಸ್ಯರು ಹಾಗೂ ಆರ್ ಎಸ್ ಎಸ್ ಕಾರ್ಯಕರ್ತರು ಮತ್ತು ವರ್ಕಾಡಿ ದುರ್ಗಾಪರಮೇಶ್ವರಿ ಭಜನಾ ಮಂದಿರ ಮತ್ತು ಸಾರ್ವಜನಿಕ ಗಣೇಶೋತ್ಸವ ಸಮಿತಿ ಹಾಗೂ ಗುಡ್ಡೋಡಿ ದೈವಸ್ಥಾನ ದ ಗೌರವಾಧ್ಯಕ್ಷರಾಗಿದ್ದು ಅವರು ಉತ್ತಮ ಸಮಾಜಸೇವಕರಾಗಿದ್ದರು. ಅವರು ಹೆಂಡತಿ, ಮಗಳು ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿರುತ್ತಾರೆ.