ಮರ್ದಾಳ: ಕೆರೆಗೆ ಬಿದ್ದು ಮಹಿಳೆ ಮೃತ್ಯು

ಕಡಬ: ಕೆರೆಗೆ ಬಿದ್ದು ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಕಡಬ ತಾಲೂಕಿನ ಐತ್ತೂರು ಗ್ರಾಮದಲ್ಲಿಸೆ.9ರಂದು ನಡೆದಿದೆ.

ಐತ್ತೂರು ನಿವಾಸಿ ಲಿಂಗಪ್ಪ ಗೌಡ ಎಂಬವರ ಪತ್ನಿ ಜಾನಕಿ(60ವ.) ಮೃತಪಟ್ಟವರಾಗಿದ್ದಾರೆ. ಜಾನಕಿ ಅವರು ಸೆ.9ರಂದು ಮಧ್ಯಾಹ್ನ 3.30ಕ್ಕೆ ತೋಟಕ್ಕೆ ಅಡಿಕೆ ಹೆಕ್ಕಲು ಹೋದವರು ಸಂಜೆ 6 ಗಂಟೆಯಾದರೂ ಮನೆಗೆ ಬಾರದೇ ಇದ್ದುದರಿಂದ ಲಿಂಗಪ್ಪ ಗೌಡ ಅವರು ಪತ್ನಿಯನ್ನು ಹುಡುಕಿಕೊಂಡು ತೋಟದ ಬಳಿಗೆ ಹೋದಾಗ ತೋಟದಲ್ಲಿರುವ ಕೆರೆಯಲ್ಲಿ ನೀರಿನ ಮೇಲೆ ಜಾನಕಿ ಅವರ ಚಪ್ಪಲಿಗಳು ತೇಲುತ್ತಿರುವುದು ಕಂಡು ಬಂದಿದೆ. ಬಳಿಕ ನೆರೆಕರೆಯವರ ಸಹಾಯದಿಂದ ಕೆರೆಯ ನೀರಿನಲ್ಲಿ ಮುಳುಗಿ ಹುಡುಕಾಟ ನಡೆಸಿ ಜಾನಕಿಯವರ ಶವವನ್ನು ಹೊರ ತೆಗೆಯಲಾಗಿದೆ ಎಂದು ವರದಿಯಾಗಿದೆ. ಜಾನಕಿಯವರು ನೀರಿನಲ್ಲಿ ಬಿದ್ದು ಮೃತಪಟ್ಟಿರುವುದಾಗಿದೆ ಎಂದು ಅವರಪತಿ ಲಿಂಗಪ್ಪಗೌಡ ಅವರು ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಕೇಸು ದಾಖಲಾಗಿದೆ

Related Posts

Leave a Reply

Your email address will not be published.