ಕನ್ನಡ ಜಾಗೃತಿ ಸಮಿತಿ ದ.ಕ. ಜಿಲ್ಲಾ ಸದಸ್ಯರಾಗಿ ರಾಜೇಶ್ ಕಡಲಕೆರೆ ಆಯ್ಕೆ

ಮೂಡುಬಿದಿರೆ : ಬ್ಲಾಕ್ ಕಾಂಗ್ರೆಸ್ ವಕ್ತಾರ, ರಂಗನಟ,ವಾಗ್ಮಿ ರಾಜೇಶ್ ಕಡಲಕೆರೆ ಅವರು ಕನ್ನಡ ಜಾಗೃತಿ ಸಮಿತಿ ದ.ಕ.ಜಿಲ್ಲಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ರಾಜ್ಯದಲ್ಲಿ ಕನ್ನಡ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ರಾಜ್ಯ ಸರಕಾರ ಪ್ರತೀ ಜಿಲ್ಲಾ ಮಟ್ಟದಲ್ಲಿ ಈ ಸಮಿತಿಯನ್ನು ರಚಿಸಿದ್ದು ದ.ಕ.ಜಿಲ್ಲೆಯಿಂದ 5 ಮಂದಿ ಸದಸ್ಯರ ಪೈಕಿ ಮೂಡುಬಿದಿರೆಯಿಂದ ರಾಜೇಶ್ ಕಡಲಕೆರೆ ಅವರನ್ನು ನೇಮಕ ಮಾಡಲಾಗಿದೆ.
ಹಲವಾರು ತುಳು,ಕೊಂಕಣಿ ನಾಟಕಗಳಲ್ಲಿ ನಟನೆ,ನಿರೂಪಣೆ, ತರಬೇತಿ ಮೂಲಕ ಮೂಲಕ ಜನಪ್ರಿಯರಾಗಿರುವ ಕಡಲಕೆರೆ ಅವರು ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಸೇವೆಯಲ್ಲಿ ಸಕ್ರಿಯರಾಗಿದ್ದು
ಕಳೆದ ಕೆಲ ವರ್ಷಗಳಿಂದ ಕಾಂಗ್ರೆಸ್ ಪಕ್ಷ ಸಂಘಟನೆ ಮೂಲಕ ಗಮನಸೆಳೆದಿದ್ದು ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ವಕ್ತಾರರಾಗಿ ಪಕ್ಷವನ್ನು ಬಲಪಡಿಸುವಲ್ಲಿ ಶ್ರಮಿಸಿದ್ದಾರೆ.