ಮೂಡುಬಿದಿರೆಗೆ ಆಗಮಿಸಿದ ಶ್ರೀರಾಮ ದಿಗ್ವಿಜಯ ರಥಯಾತ್ರೆ

ಮೂಡುಬಿದಿರೆ :ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠ, ಗೋವಾ ಅಧೀನದಲ್ಲಿ ನಡೆಯುತ್ತಿರುವ ಶ್ರೀ ರಾಮ ದಿಗ್ವಿಜಯ ರಥಯಾತ್ರೆಯು ಮಂಗಳೂರಿನ ಮಂಗಲರಾಮ ಜಪಕೇಂದ್ರದಿಂದ ಬುಧವಾರ ಮೂಡುಬಿದಿರೆಗೆ ಆಗಮಿಸಿತು. ಆಗಮಿಸಿದ ರಥವನ್ನು ಭಜಕರು ಹನುಮಂತ ದೇವಳದ ಎದುರು ಪೂರ್ಣಕುಂಭ, ಮಂಗಳವಾದ್ಯ, ಭಜನೆ ಸಂಕೀರ್ತನೆಯೊಂದಿಗೆ ವೆಂಕಟರಮಣ ದೇವಳದ ಎದುರು ಬರಕೊಂಡರು.

ಮೂಡುವೇಣುಪುರದ ಶ್ರೀ ವೆಂಕಟರಮಣ ಮತ್ತು ಶ್ರೀ ಹನುಮಂತ ದೇವಸ್ಥಾನದ ವಿದ್ಯಾನಿಧಿ ಜಪ ಕೇಂದ್ರದಲ್ಲಿ ರಥವನ್ನು ಸ್ವಾಗತಿಸಿ ಅಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಲಾಯಿತು. ಶ್ರೀ ವೆಂಕಟರಮಣ ಮತ್ತು ಶ್ರೀ ಹನುಮಂತ ದೇವಸ್ಥಾನ ಆಡಳಿತ ಮೊಕ್ತೇಸರ, ವಿದ್ಯಾನಿಧಿ ಜಪಕೇಂದ್ರದ ಜಿ.ಉಮೇಶ್ ಪೈ ಹಾಗೂ ಮೊಕ್ತೇಸರರು, ಪೊನ್ನೆಚಾರಿ ಉಪ ಜಪ ಕೇಂದ್ರದ ಅಶೋಕ್ ಕಾಮತ್ ವೇಣೂರು ಉಪ ಜಪ ಕೇಂದ್ರದ ಭಾಸ್ಕರ್ ಪೈ, ಕೆಸರುಗದ್ದೆ ಉಪ ಜಪ ಕೇಂದ್ರದ ವಿಠಲ ನಾಯಕ್ ಹಾಗೂ ಭಕ್ತರು ಉಪಸ್ಥಿತರಿದ್ದರು.
ಮೂಡುಬಿದಿರೆ ವಿಧ್ಯಾನಿಧಿ ಜಪಕೇಂದ್ರದಿಂದ ಮಿತ್ತಬೈಲು ಸತ್ಯ ವಿಕ್ರಮ ಜಪಕೇಂದ್ರಕ್ಕೆ ರಥವನ್ನು ಬೀಳ್ಕೊಡಲಾಯಿತು.

Related Posts

Leave a Reply

Your email address will not be published.