ಕಾಪು : ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘ (ರಿ) ಪಡು ಕುತ್ಯಾರು ಆರನೇ ವಾರ್ಷಿಕ ಮಹಾಸಭೆ
ಕಾಪು ತಾಲೂಕು ಪಡುಕುತ್ಯಾರು ಗ್ರಾಮದ ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘದ ” ಆರನೇ ವಾರ್ಷಿಕ ಮಹಾಸಭೆಯು” ದಿನಾಂಕ: 16.11.2025ರಂದು ಸಂಘದ ಅಧ್ಯಕ್ಷರಾದ ನಾಗೇಶ ಆರ್ ಆಚಾರ್ಯರವರ ಅಧ್ಯಕ್ಷತೆಯಲ್ಲಿ ದುರ್ಗಾ ಮಂದಿರದಲ್ಲಿ ಜರಗಿತು.
ಮಹಾಸಭೆಯು ಸುರೇಶ್ ಆರ್ ಆಚಾರ್ಯ ರವರ ಸ್ವಾಗತದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಮುಖ್ಯ ಅತಿಥಿಯಾಗಿ ಶ್ರೀ ಶಶಿಧರ್ ಪುರೋಹಿತರು, ಸಮಾಜ ಸೇವಕರು ಸಮಾನ ಮನಸ್ಕರ ತಂಡದ ರೂವಾರಿ ರವರು ಭಾಗವಹಿಸಿದ್ದರು. ಭಾಗವಹಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಗ್ರಾಮೀಣ ಪ್ರದೇಶದಲ್ಲಿ ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘವು ಉತ್ತಮ ರೀತಿಯಲ್ಲಿಕಾರ್ಯನಿರ್ವಹಿಸುತ್ತಿದ್ದು,ಸಂಘವು ಉತ್ತರೋತರ ಅಭಿವೃದ್ದಿ ಹೊಂದಲಿ ಹಾಗೂ ಮಂದಿರದ ಜೀರ್ಣೋದ್ದಾರ ಕೆಲಸ ಶ್ರೀಘ್ರ ಪ್ರಾರಂಭವಾಗಲೀ ಎಂದು ಹಾರೈಸಿದರು.
ಪ್ರಾಸ್ತಾವಿಕವಾಗಿ ಗೌರವಾಧ್ಯಕ್ಷರಾದ ಹರಿಶ್ಚಂದ್ರ ಎಚ್ ಆಚಾರ್ಯ ಮತ್ತು ಸದಾಶಿವ ವಿ ಆಚಾರ್ಯ ರವರು ಮಾತನಾಡಿದರು .
ಈ ಸಂದರ್ಭ ಮುಖ್ಯ ಅತಿಥಿ ಶ್ರೀ ಶಶಿಧರ ಆಚಾರ್ಯ, ಪುರೋಹಿತರು,ಸಮಾಜ ಸೇವಕರು ಮತ್ತು ಸಮಾನ ಮನಸ್ಕರ ತಂಡದ ರೂವಾರಿ ಯವರನ್ನು ಮತ್ತು ಹುಟ್ಟೂರಿನ ರಂಗಭೂಮಿ ಕಲಾವಿದ, ಚಲನಚಿತ್ರ ನಟ ಹಾಗೂ ಸಂಘದ ಪದಾಧಿಕಾರಿ ಶಶಿರಾಜ ಪಿ ಆಚಾರ್ಯ ರವರನ್ನು ಸನ್ಮಾನಿಸಲಾಯಿತು. ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ಮತ್ತು ಕಲಾ ನೈಪುಣ್ಯತೆ ಹೊಂದಿದ ಸಮಾಜದ ಆರು ವಿದ್ಯಾರ್ಥಿಗಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ನೀಡಲಾಯಿತು ಹಾಗೂ ಕ್ರೀಡಾಪಟು,ರಂಗೋಲಿ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕೋಶಾಧಿಕಾರಿಯಾದ ಗಂಗಾಧರ ಎಸ್ ಆಚಾರ್ಯರವರು ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿ ಅನುಮೋದನೆ ಪಡೆಯಲಾಯಿತು.
ಮುಂಬೈ ಕಮಿಟಿ ಅಧ್ಯಕ್ಷರಾದ ಮಾಧವ ಎಸ್ ಆಚಾರ್ಯ, ಕಾರ್ಯಾಧ್ಯಕ್ಷರಾದ ಜಯರಾಮ ಆಚಾರ್ಯ, ಗೌರವ ಸಲಹೆಗಾರರು, ಮೊಕ್ತೆಶ್ವರರಾದ ಪ್ರಕಾಶ್ ಎಸ್ ಆಚಾರ್ಯಮತ್ತು ಚಂದ್ರಯ್ಯ ಪಿ ಆಚಾರ್ಯ, ಉಪಾಧ್ಯಕ್ಷರಾದ ಕೆ ವಿವೇಕಾನಂದ ಆಚಾರ್ಯ, ಪದಾಧಿಕಾರಿಗಳಾದ,ಪ್ರವೀಣ ಎಸ್ ಆಚಾರ್ಯ, ಪ್ರಕಾಶ್ ಎಸ್ ಆಚಾರ್ಯ, ಉದಯಕುಮಾರ್, ಶ್ರೀಮತಿ ಹೇಮಾವತಿ ಪಿ ಆಚಾರ್ಯ,ಪ್ರಸನ್ನ ಎಸ್ ಆಚಾರ್ಯ ಸುರೇಂದ್ರ ಎ ಆಚಾರ್ಯರವರು ಉಪಸ್ಥಿತರಿದ್ದರು. ಕಾರ್ಯದರ್ಶಿ ದಿನೇಶ್ ಎಸ್ ಆಚಾರ್ಯ ವರದಿ ಮಂಡಿಸಿದರು.
ಅಧ್ಯಕ್ಷರ ಭಾಷಣದೊಂದಿಗೆ ಸಭೆಯು ಮುಕ್ತಾಯಗೊಂಡಿತು. ಮುಂದಿನ 3 ವರುಷದ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಮಾಡಲಾಯಿತು. ಶ್ರೀಮತಿ ಲತಾ ಪ್ರಸಾದ್ ಆಚಾರ್ಯ, ಶ್ರೀ ಶಶಿರಾಜ್ ಆಚಾರ್ಯ ಮತ್ತು ಗಂಗಾಧರ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿ, ಶ್ರೀ ಗಂಗಾಧರ ಎಸ್ ಆಚಾರ್ಯ ರವರ ವಂದನಾರ್ಪಣೆಗಳೊಂದಿಗೆ ಸಭೆಯು ಮುಕ್ತಾಯಗೊಂಡಿತು.ಮಹಾ ಸಭೆಯಲ್ಲಿ ಸಂಘದ ಎಲ್ಲಾ ಸದಸ್ಯರು ಪಾಲ್ಗೊಂಡಿದ್ದರು.


















