ಅಂತರ್‌ಜಿಲ್ಲಾ ಮಾಸ್ಟರ್ಸ್ ಕ್ರೀಡಾಕೂಟ: ಪುತ್ತೂರಿನ ಧೀರಜ್ ಕೆಮ್ಮಿಂಜೆರವರಿಗೆ 1 ಚಿನ್ನ, 1 ಬೆಳ್ಳಿಪದಕ
ಪುತ್ತೂರು: ಮಂಗಳೂರು ಮಂಗಳಾ ಕ್ರೀಡಾಂಗಣದಲ್ಲಿ ನಡೆದ ದ.ಕ, ಉಡುಪಿ ಹಾಗೂ ಕೊಡಗು ಜಿಲ್ಲೆಗಳನ್ನೊಳಗೊಂಡ ಅಂತರ್ ಜಿಲ್ಲಾ ಮಾಸ್ಟರ್ಸ್ ಕ್ರೀಡಾ ಕೂಟದಲ್ಲಿ ಪುತ್ತೂರಿನ ಧೀರಜ್ ಕೆಮ್ಮಿಂಜೆಯವರು ಶಾಟ್‌ಪುಟ್ ಮತ್ತು 100 ಮೀ ಓಟದಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕವನ್ನು ಪಡೆದಿರುತ್ತಾರೆ. ಇವರು ಜಯಪ್ರಕಾಶ್ ಮರೀಲ್ ಮತ್ತು ಉಷಾರಾಣಿ ದಂಪತಿಯ ಪುತ್ರ.
ಇವರು ರಾಮಕ್ಷತ್ರಿಯ ಸೇವಾ ಸಂಘ ಪುತ್ತೂರಿನ ಸದಸ್ಯ ಹಾಗೂ ರಾಮಕ್ಷತ್ರಿಯ ಯುವ ವೃoದದ ಸದಸ್ಯರು ಆಗಿರುತ್ತಾರೆ.


















