ಕ್ಯಾನ್‌ಕೋಸ್ ಗೀವ್‌ಅವೇ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ

ಮೂಲ್ಕಿಯ ಕ್ಯಾನ್‌ಕೋಸ್ ಡ್ರೈಫ್ರೂಟ್ಸ್ ಸ್ಟೋರ್ ಸೋಶಿಯಲ್ ಮೀಡಿಯಾದಲ್ಲಿ ಆಯೋಜಿಸಿದ ಸ್ಪರ್ಧೆ ಕ್ಯಾನ್‌ಕೋಸ್ ಗೀವ್‌ಅವೇಯಲ್ಲಿ ಸುರೇಶ್ ಪೂಜಾರಿ ಬೈಲೂರುರವರು ವಿಜೇತರಾದರು.


ಬಹುಮಾನವನ್ನು ಮೂಲ್ಕಿಯ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಹರ್ಷರಾಜ್ ಶೆಟ್ಟಿ ಜಿ.ಎಂ ಹಾಗೂ ಮೂಲ್ಕಿ ನಾಲ್ಕು ಪಟ್ಣ ಮೊಗವೀರ ಸಭಾ ಅಧ್ಯಕ್ಷರಾದ ಚಂದ್ರಕಾಂತ ಶ್ರಿಯಾನ್ ವಿತರಿಸಿದರು.
ಈ ಸಂದರ್ಭದಲ್ಲಿ ಹೊಸಅಂಗಣ ಪತ್ರಿಕೆಯ ಸಂಪಾದಕರಾದ ಹರೀಶ್ಚಂದ್ರ ಸಾಲ್ಯನ್, ಉದಯ ಅಮೀನ್ ಮಟ್ಟು, ಹೆಜಮಾಡಿ ಪಂಚಾಯತ್ ಸದಸ್ಯರಾದ ಜನಾರ್ಧನ ಕೋಟ್ಯಾನ್, ವಿಜಯ ರೈತ ಸೇವಾ ಸಂಘದ ನಿರ್ದೇಕರಾದ ಪ್ರಭಾಕರ ದೇವಾಡಿಗ, ಕ್ಯಾನ್‌ಕೋಸ್ ವೆಂಕಟೇಶ ಬಂಗೇರ, ವಿ ಮೀಡಿಯಾದ ರಕ್ಷಿತ್ ಬೆಳ್ಮಣ್ ಇನ್ನಿತರರು ಉಪಸ್ಥಿತರಿದ್ದರು. ದಿನೇಶ್ ಕೋಲ್ನಾಡ್ ಕಾರ್ಯಕ್ರಮ ನಿರೂಪಿಸಿದರು.
ಕ್ಯಾನ್‌ಕೋಸ್ ಡ್ರೈಪ್ರುಡ್ಸ್ ಸ್ಟೋರ್ ನಲ್ಲಿ ದೇಶ-ವಿದೇಶದ ವಿವಿದ ಬಗೆಯ ಉತ್ತಮ ಗುಣಮಟ್ಟದ ಡ್ರೈಫ್ರೂಟ್ಸ್, ನಟ್ಸ್, ಬೀಜಗಳು ಮತ್ತು ಡ್ರೈಫ್ರೂಟ್ಸ್ ಬರ್ಫಿ ಸ್ವೀಟಗಳು ಲಭ್ಯವಿದ್ದು, ಊರಿನ ಮತ್ತು ಪರವೂರಿನ ಗ್ರಾಹಕರನ್ನು ತನ್ನತ್ತ ಸೆಳೆಯುತ್ತದೆ ಹಾಗೆಯೇ ಕ್ಯಾಟರಿಂಗ್ ಮತ್ತು ಸಮಾರಂಭಗಳಿಗೆ ಬೇಕಾದ ಬೀಜ, ದಾಕ್ಷಿ ಇತ್ಯಾದಿ ಹೋಲ್‌ಸೇಲ್ ದರದಲ್ಲಿಯೂ ಲಭ್ಯವಿದ್ದು, ಗ್ರಾಹಕರ ನೆಚ್ಚಿನ ಸಂಸ್ಥೆಯಾಗಿ ಜನಮನ್ನಣೆ ಪಡೆದಿದೆ

Related Posts

Leave a Reply

Your email address will not be published.