ರಾಜ್ಯದಲ್ಲಿ ಸೀಸನಲ್ ಫ್ಲೂ(ಶೀತಜ್ವರ) ಹೆಚ್ಚಳ: ಆರೋಗ್ಯ ಸೇವೆಗಳ ಆಯುಕ್ತಾಲಯದಿಂದ ಮಾರ್ಗಸೂಚಿ ಬಿಡುಗಡೆ

ಹವಾಮಾನ ಬದಲಾವಣೆಯಿಂದಾಗಿ ರಾಜ್ಯದಲ್ಲಿ ಸೀಸನಲ್ ಫ್ಲೂ(ಶೀತಜ್ವರ) ಹೆಚ್ಚಳ ಆಗುತ್ತಿದ್ದು, ಡಿಸೆಂಬರ್, ಜನವರಿಯಿಂದ ಮಾರ್ಚ್ ತನಕ ಸೀಸನಲ್ ಫ್ಲೂ ಹೆಚ್ಚಳದ ಭೀತಿ ಇದೆ. ಹೀಗಾಗಿ ಆರೋಗ್ಯ ಸೇವೆಗಳ ಆಯುಕ್ತಾಲಯವು ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಸೀಸನಲ್ ಫ್ಲೂ ಸಾಮಾನ್ಯವಾಗಿ ಒಂದು ವಾರಗಳ ಕಾಲ ಕಾಡಲಿದ್ದು, ಕೆಲವೊಮ್ಮೆ 3 ವಾರಗಳ ವರೆಗೂ ಮುಂದುವರಿಯುತ್ತದೆ. ಹೀಗಾಗಿ ಶೀತಜ್ವರ ಹರಡುವುದನ್ನು ತಡೆಗಟ್ಟಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಆಯುಕ್ತಾಲಯವು ಸೂಚನೆ ನೀಡಿದೆ.

ಸೋಂಕಿತರ ಎಂಜಲಿನಿಂದ ಹರಡುವ ಸೋಂಕು ಇದಾಗಿದ್ದು, ಸೀನುವಿಕೆಯಿಂದ(sneezing) ಸೀಸನಲ್ ಫ್ಲೂ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ. ಜ್ವರ, ಕೆಮ್ಮು, ಕೆಂಪು ಗುಳ್ಳೆ, ಹಸಿವು ಆಗದಿರುವುದು, ಮೈ-ಕೈ ನೋವು, ಶೀತ, ಒಣ ಕೆಮ್ಮು ಇದರ ಪ್ರಮುಖ ಗುಣಲಕ್ಷಣಗಳಾಗಿವೆ.

ಮಕ್ಕಳು, ಹಿರಿಯರು, ಗರ್ಭಿಣಿಯರು, ಕೋಮಾರ್ಬಿಟೀಸ್ ರೋಗಿಗಳಿಗೆ ಹೆಚ್ಚಿನ ಅಪಾಯ ಉಂಟಾಗುವ ಸಾಧ್ಯತೆಯಿದ್ದು, ಮುನ್ನೆಚ್ಚರಿಕೆ ವಹಿಸುವಂತೆ ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.

ಐಎಲ್ಐ, ಸಾರಿ(SARI) ಪ್ರಕರಣಗಳ ಬಗ್ಗೆ ಗಮನ ಹರಿಸಬೇಕು. ಪ್ರತಿ ದಿನ ಕನಿಷ್ಠ 5ರಷ್ಟು ಐಎಲ್ಐ ಕೇಸ್, 100ರಷ್ಟು ಸಾರಿ ಕೇಸ್ ಗಳ ಪರೀಕ್ಷೆ ಮಾಡಬೇಕು.ಎಲ್ಲ ಪ್ರಯೋಗಾಲಯಗಳಲ್ಲಿ ಸೂಕ್ತ ಟೆಸ್ಟಿಂಗ್ ಕಿಟ್ ಇರಿಸಿಕೊಳ್ಳಬೇಕು. ಅಗತ್ಯ ಔಷಧಗಳ ಶೇಖರಣೆ, ಪಿಪಿಇ ಕಿಟ್ ಗಳು, ಎನ್95 ಮಾಸ್ಕ್ ಸೇರಿ ಅಗತ್ಯ ಔಷಧಗಳ ದಾಸ್ತಾನಿರಿಸಬೇಕು. oseltamivir ಮಾತ್ರೆಗಳನ್ನು ದಾಸ್ತಾನು ಮಾಡಿ ಅಗತ್ಯಕ್ಕೆತಕ್ಕಂತೆ ಪ್ರಿಸ್ಕ್ರೈಬ್ ಮಾಡಬೇಕು. ಇನ್ಫ್ಲುಯೆನ್ಝ ಲಸಿಕೆ ಶೇಖರಣೆ, ಹೆಲ್ತ್ ಕೇರ್ ವರ್ಕರ್ಸ್, ಗರ್ಭಿಣಿಯರು, ಹೈ ರಿಸ್ಕ್ ರೋಗಿಗಳು ಸೂಕ್ತ ಲಸಿಕೆ ಪಡೆಯುವಂತೆ ಸಲಹೆ ನೀಡಬೇಕು. ಕ್ಲಿನಿಕಲ್ ಮ್ಯಾನೇಜ್ಮೆಂಟ್ ಹಾಗೂ ಕ್ರಿಟಿಕಲ್ ಕೇರ್ ಸಿದ್ಧತೆ, ವೆಂಟಿಲೇಟರ್ ಗಳನ್ನು ಸಿದ್ಧ ಮಾಡಬೇಕು. ಸಮುದಾಯದಲ್ಲಿ ಅರಿವು ಮೂಡಿಸಲು ಕ್ರಮ ಕೈಗೊಳ್ಳಬೇಕು

Related Posts

Leave a Reply

Your email address will not be published.