ತಾಲಿಬಾನ್ ತರ ಯೋಚಿಸಿದರೆ ಮಟ್ಟ ಹಾಕುವುದಕ್ಕೂ ಗೊತ್ತಿದೆ : ಡಾ. ವೈ ಭರತ್ ಶೆಟ್ಟಿ ಹೇಳಿಕೆ
ತಾಲಿಬಾನ್ ಮತಾಂಧ ಸಂಘಟನೆಯಿಂದ ಪ್ರೇರಿತರಾಗಿ ಆಂತರಿಕವಾಗಿ ನಮ್ಮ ದೇಶದಲ್ಲಿಯೂ ಕಾನೂನು ಮುರಿಯುವ ದುಸ್ಸಾಹಕ್ಕೆ ಕೈ ಹಾಕಿದರೆ ನಿಮ್ಮ ಮತಾಂಧ ತೆಯನ್ನು ಮಟ್ಟ ಹಾಕಲು ಸರಕಾರ ಬದ್ದವಾಗಿದೆ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಎಚ್ಚರಿಸಿದ್ದಾರೆ.
ಕಬಕದಲ್ಲಿ ಸ್ವಾತಂತ್ರ್ಯ ರಥವನ್ನು ತಡೆದು ವೀರ ಸಾವರ್ಕರ್ ಫೋಟೋ ತೆಗೆದು ಮತಾಂಧ ಟಿಪ್ಪು ಫೋಟೋ ಹಾಕಬೇಕೆಂಬ ಎಸ್ ಡಿ ಪಿ ಐ ಕಾರ್ಯಕರ್ತರ ಕಾನೂನು ಭಂಜಕ ಕೃತ್ಯವನ್ನು ಸಹಿಸುವುದಿಲ್ಲ.ದೇಶದಲ್ಲಿ ಕಾನೂನು,ಪಾಲಿಸಿ ಅದನ್ನು ಗೌರವಿಸಿ ಬದುಕಬೇಕು.
ಅಫ್ಘಾನಿಸ್ತಾನ್ ತಾಲಿಬಾನಿಗಳ ವಶವಾದ ಕೂಡಲೇ ವಿಜಯೋತ್ಸವ ಮಾಡಿರುವ ವವರನ್ನು ದೇಶದ್ರೋಹಿಗಳೆಂದು ಹೇಳದೆ ಏನನ್ನಬೇಕು.ಇಂತಹ ಕೃತ್ಯಗಳನ್ನು ಮಟ್ಟ ಹಾಕಲು ನಮ್ಮ ಸರ್ಕಾರ ಬದ್ಧವಾಗಿದೆ.ಎಂದು ಭರತ್ ಶೆಟ್ಟಿ ಹೇಳಿದ್ದಾರೆ.ತಾಲಿಬಾನ್ ತರ ಯೋಚಿಸಿದರೆ ,ಮಟ್ಟ ಹಾಕುವುದಕ್ಕೂ ಗೊತ್ತಿದೆ: ಭರತ್ ಶೆಟ್ಟಿ ವೈ


















