ಅಬುಧಾಬಿ: ಸೆಪ್ಟಂಬರ್ 1ರಂದು ರಕ್ತದಾನ ಶಿಬಿರ-ಪೋಸ್ಟರ್ ಬಿಡುಗಡೆ

ಎಸ್‌ಕೆಎಸ್‌ಎಸ್‌ಎಫ್ ಅಬುಧಾಬಿ ಕರ್ನಾಟಕ ವತಿಯಿಂದ ಬೃಹತ್ ಕರ್ನಾಟಕ ಮೀಲಾದ್ ಕಾನ್ಪ್‌ರೆನ್ಸ್ ಇದರ ಪ್ರಚಾರದ ಭಾಗವಾಗಿ, ಸೆಪ್ಟಂಬರ್ 1 ರಂದು ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ನ ಅಬುಧಾಬಿ ಖಾಲಿದಿಯ್ಯ ಬ್ಲಡ್ ಬ್ಯಾಂಕ್‌ನಲ್ಲಿ ನಡೆಯಲಿರುವ ರಕ್ತದಾನ ಶಿಬಿರ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಸಮಾರಂಭ ನಡೆಯಿತು.

ಕಾರ್ಯಕ್ರಮವು ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಸಂಸ್ಥೆಯ ವ್ಯವಸ್ಥಾಪಕರೂ, ಎಸ್‌ಕೆಎಸ್‌ಎಸ್‌ಎಫ್ ಅಬುಧಾಬಿ ಕರ್ನಾಟಕ ಸಮಿತಿಯ ರಕ್ತದಾನ ಶಿಬಿರದ ನೂತನ ಉಸ್ತುವಾರಿ ಸಿರಾಜ್ ಪರ್ಲಡ್ಕ ರವರ ನಿವಾಸದಲ್ಲಿ ನಡೆಯಿತು.
ಅಬುಧಾಬಿ ಸುನ್ನಿ ಸೆಂಟರ್ ಅಧ್ಯಕ್ಷರಾದ ಬಹು| ಸಯ್ಯದ್ ಅಬ್ದುಲ್ ರಹ್ಮಾನ್ ತಂಙಳ್ ರವರು ಸಿರಾಜ್ ರವರಿಗೆ ಪೋಸ್ಟರ್ ಹಸ್ತಾಂತರ ಮಾಡುವ ಮೂಲಕ ಕಾರ್ಯಕ್ರಮವನ್ನು ಉಧ್ಟಾಟಿಸಿದರು.

ಎಸ್‌ಕೆಎಸ್‌ಎಸ್‌ಎಫ್ ಅಬುಧಾಬಿ ಕರ್ನಾಟಕ ಸಮಿತಿಯ ಅಧ್ಯಕ್ಷರಾದ ಶಹೀರ್ ಹುದವಿ ಉಸ್ತಾದ್, ಉಪಾಧ್ಯಕ್ಷರಾದ ಹಾಫಿಲ್ ಝೈನ್ ಸಖಾಫಿ ಉಸ್ತಾದ್, ಗೌರವಾಧ್ಯಕ್ಷರಾದ ಹನೀಫ್ ಅರಿಯಮೂಲೆ ಮತ್ತು ಹಸನ್ ದಾರಿಮಿ ಉಸ್ತಾದ್ ರವರು ಶುಭಹಾರೈಕಗಳ ಮಾತಗಳನ್ನಾಡಿದರು. ಸಿರಾಜ್ ಪರ್ಲಡ್ಕ ರವರು ಕಾರ್ಯಕ್ರಮದ ರೂಪುರೇಷಗಳ ಬಗ್ಗೆ ವಿವರಿಸಿದರು. ಕಾರ್ಯಕ್ರಮದಲ್ಲಿ ಸಯ್ಯದ್ ಅಹ್ಮದ್ ಮಲಪ್ಪುರಂ, ಶಾಫಿ ಪೆರುವಾಯಿ,ಅಬೂಬಕ್ಕರ್ ಸಕಲೇಶ್ ಪುರ,ಬಶೀರ್ ಚೆರಂಭಾಣೆ, ಜಾಫರ್ ಉಪ್ಪಿನಂಗಡಿ, ಸಫ್ವಾನ್ ಉಳ್ಳಾಲ, ಉಪಸ್ಥಿತರಿದ್ದರು. ಸದಸ್ಯರಾದ ಯಹ್ಯಾ ಕೊಡ್ಲಿಪೇಟೆ ಸ್ವಾಗತಿಸಿ ತ್ವಾಹ ಉಪ್ಪಿನಂಗಡಿ ಧನ್ಯವಾದ ಸಮರ್ಪಿಸಿದರು.