ಪಂಜಾಬ್ : ಅರ್ಜುನ ಪ್ರಶಸ್ತಿ ವಿಜೇತ ಪೊಲೀಸ್ ಅಧಿಕಾರಿ ಶವವಾಗಿ ಪತ್ತೆ

ಅರ್ಜುನ ಪ್ರಶಸ್ತಿ ಪುರಸ್ಕೃತರಾಗಿದ್ದ ಪಂಜಾಬಿನ ಡಿಎಸ್‌ಪಿ- ಉಪ ಪೊಲೀಸ್ ವರಿಷ್ಠಾಧಿಕಾರಿ ದಲ್ಬೀರ್ ಸಿಂಗ್ ಡಿಯೋಲ್ ಅವರು ಜಲಂಧರಿನಲ್ಲಿ ಮರ್ಮಮಯ ರೀತಿಯಲ್ಲಿ ಸಾವನ್ನಪ್ಪಿರುವುದು ಸೋಮವಾರ ಬೆಳಕಿಗೆ ಬಂದಿದೆ.
ಹೊಸ ವರುಷದ ದಿನವೇ ಈ ದುರಂತ ಬೆಳಕಿಗೆ ಬಂದಿದೆ. ರಾತ್ರಿ ಹೊಸ ವರುಷಾಚರಣೆ ಸಂಬಂಧ ದಲ್ಬೀರ್ ಸಿಂಗ್ ಹೋದವರು ಮನೆಗೆ ವಾಪಾಸು ಆಗಿಲ್ಲ. ಹಾಗಾಗಿ ಇಂದು ಮನೆಯವರು ನಾಪತ್ತೆ ದೂರು ದಾಖಲಿಸಿದ್ದರು. ಪೋಲೀಸರು ಹುಡುಕಾಟ ನಡೆಸಿದಾಗ ಜಲಂಧರ್ ಹೊರ ವಲಯದ ಬಸ್ತಿ ಬಾವಾ ಖೇಲ್ ಕಾಲುವೆಯಲ್ಲಿ ದಲ್ಬೀರ್ ಸಿಂಗ್‌ರ ಶವ ಪತ್ತೆಯಾಗಿದೆ. ದೇಹದ ಮೇಲೆ ಗಾಯದ ಗುರುತುಗಳಿರುವುದು ಎಲ್ಲರನ್ನು ಬೆಚ್ಚಿ ಬೀಳಿಸಿದೆ.
ಏಶಿಯನ್ ಕ್ರೀಡಾ ಕೂಟದ ಭಾರ ಎತ್ತುವಿಕೆಯಲ್ಲಿ ದಲ್ಬೀರ್ ಸಿಂಗ್ ಚಿನ್ನ ಗೆದ್ದಿದ್ದರು. ಅವರಿಗೆ 2000ದಲ್ಲಿ ಅರ್ಜುನ ಪ್ರಶಸ್ತಿ ನೀಡಲಾಗಿತ್ತು.
