ಪುತ್ತೂರಿನ ನವನಿರ್ಮಾಣಕ್ಕೆ ಅರುಣ್ ಕುಮಾರ್‌ನ್ನು ಗೆಲ್ಲಿಸಬೇಕು : ಪುತ್ತೂರಿನಲ್ಲಿ ಖ್ಯಾತ ವಾಗ್ಮಿ ಅಕ್ಷಯ ಗೋಖಲೆ ಹೇಳಿಕೆ
ಪುತ್ತೂರು; ಹಿಂದುತ್ವದ ಆಧಾರದಲ್ಲಿ ಪುತ್ತೂರಿನ `ನವನಿರ್ಮಾಣ’ ಆಗಬೇಕಾದರೆ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿ ದೇಶಕ್ಕೆ ಮಾದರಿಯಾದ ತಾಲೂಕು ನಿರ್ಮಾಣ ಮಾಡಬಲ್ಲ ಏಕೈಕ ನಾಯಕ ಬೇಕಾಗಿದೆ. ಮೋದಿ ಮಾದರಿ-ಯೋಗಿ ಮಾದರಿ ಗುಜರಾತ್ ಯುಪಿ ಮಾದರಿ ಆಡಳಿತ ಬಯಸುವ ನಾವು ನಮ್ಮೂರಿನಲ್ಲಿ ಈ ಮಾದರಿ ನೋಡಲು ಅರುಣ್ ಕುಮಾರ್ ಪುತ್ತಿಲರನ್ನು ವಿಧಾನಸಭೆಗೆ ಕಳುಹಿಸಬೇಕಾಗಿದೆ ಎಂದು ಖ್ಯಾತ ವಾಗ್ಮಿ ಅಕ್ಷಯ ಗೋಖಲೆ ಹೇಳಿದರು.
ಪುತ್ತುರಿನ ಮುಕ್ರಂಪಾಡಿಯ ಸುಭದ್ರಾ ಸಭಾವನದಲ್ಲಿ ನಡೆದ ಸೀತಾ ಪರಿವಾರ ನಾರೀಶಕ್ತಿ ಸಮಾವೇಶದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.ಪುತ್ತೂರಿನ ಮಹಿಳೆಯರು ಮನಸ್ಸು ಮಾಡಿದರೆ ಅರುಣೋದಯ ಸಾಧ್ಯವಿದೆ. ಇದು ಸಾಕಾರಗೊಳಿಸುವ ಮತ್ತು ಪುತ್ತ್ತೂರನ್ನು ಬದಲಿಸಲಾಯಿಸುವ ಶಕ್ತಿ ಮಹಿಳೆಯರ ಕೈಯಲ್ಲಿದೆ. ಮನಸ್ಸು ಮತ್ತು ಹೃದಯವನ್ನು ಚುನಾವಣೆಯ ತನಕ ಜಾಗೃತವಾಗಿಡುವುದು ಅತೀ ಅಗತ್ಯವಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸೀತಾಪರಿವಾರದ ಮಲ್ಲಿಕಾ ಪ್ರಸಾದ್ ಗೌಡ ಕನ್ನಾಯ, ಮುಖ್ಯ ಅತಿಥಿಗಳಾಗಿ ಡಾ.ಜೆ.ಸಿ.ಅಡಿಗ, ಉದ್ಯಮಿ ಭಾಸ್ಕರ ಆಚಾರ್ಯ ಹಿಂದಾರು, ಗ್ರಾಪಂ ಅಧ್ಯಕ್ಷೆ ಪುಷ್ಪಾ ಮುಂಡೂರು ಹಾಗೂ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ,ಸೀತಾಪರಿವಾರ ಸಂಘಟಕಿ ವಸಂತಲಕ್ಷ್ಮಿ ಉಪಸ್ಥಿತರಿದ್ದರು.