ಸೆ.2-6 ಆಳ್ವಾಸ್ ನಲ್ಲಿ ನಾಯಿಮರಿ ನಾಟಕ ಪ್ರದರ್ಶನ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ.) ಮೂಡುಬಿದಿರೆ ಇದರ ಆಶ್ರಯದಲ್ಲಿ ಸೆ.02 ರಿಂದ ಸೆ.06 ರ ವರೆಗೆ ವಿದ್ಯಾಗಿರಿಯ ಕೃಷಿ ಸಿರಿ ವೇದಿಕೆಯಲ್ಲಿ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಅಭಿನಯಿಸುವ, ಡಾ| ಜೀವನ್ ರಾಂ ಸುಳ್ಯ ನಿರ್ದೇಶನದ ನಾಯಿಮರಿ ನಾಟಕದ ಪ್ರದರ್ಶನವನ್ನು ಏರ್ಪಡಿಸಲಾಗಿದೆ.

ಶ್ರೀಮತಿ ವೈದೇಹಿ ರಚಿಸಿರುವ ಈ ನಾಟಕವು ಈಗಾಗಲೇ ರಾಜ್ಯದ ಅನೇಕ ಕಡೆಗಳಲ್ಲಿ ಯಶಸ್ವೀ ಪ್ರದರ್ಶನಗೊಂಡ ಅತ್ಯುತ್ತಮ ಮಕ್ಕಳ ನಾಟಕವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಸರಳವಾದ ಅಷ್ಟೇ ರಂಜನೀಯ ಅಂಶಗಳಿಂದ ಕೂಡಿದ ಈ ನಾಯಿಮರಿ ನಾಟಕವು ಸಮರ್ಥ ನಿರ್ದೇಶನ, ನವಿರು ಹಾಸ್ಯ, ಪರಿಣಾಮಕಾರಿ ಅಭಿನಯ, ಸುಶ್ರಾವ್ಯ ಸಂಗೀತ, ಉತ್ತಮ ರಂಗ ಸಜ್ಜಿಕೆ ಮತ್ತು ಬೆಳಕು ಸಂಯೋಜನೆಯೊಂದಿಗೆ ಪ್ರೇಕ್ಷಕರನ್ನು ಪ್ರತಿಕ್ಷಣವೂ ಹಿಡಿದಿಟ್ಟುಕೊಳ್ಳುವ ಪ್ರಯೋಗವಾಗಿದೆ. ಪ್ರತಿ ದಿನ ನಾಟಕವು ಸಂಜೆ 6.45 ಕ್ಕೇ ಆರಂಭವಾಗಲಿದ್ದು, ನಾಟಕ ನೋಡಲು ಪ್ರವೇಶ ಉಚಿತವಾಗಿರುತ್ತದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಡಾ.ಎಂ.ಮೋಹನ ಆಳ್ವ ತಿಳಿಸಿದ್ದಾರೆ.

Related Posts

Leave a Reply

Your email address will not be published.