ಮೂಡುಬಿದಿರೆ:ಮುಖ್ಯಮಂತ್ರಿ ಕಪ್ ವೇಟ್‌ಲಿಫ್ಟಿಂಗ್: ಆಳ್ವಾಸ್‌ಗೆ ಸಮಗ್ರ ಪ್ರಶಸ್ತಿ

ಮೂಡುಬಿದಿರೆ: ಮೈಸೂರು ದಸರಾ ಮುಖ್ಯಮಂತ್ರಿ ಕಪ್ ವೇಟ್‌ಲಿಫ್ಟಿಂಗ್ ಚಾಂಪಿಯಶಿಪ್‌ನಲ್ಲಿ ಆಳ್ವಾಸ್ ಕಾಲೇಜಿನ ಪುರುಷರ ಮತ್ತು ಮಹಿಳಾ ತಂಡಗಳು ಸಮಗ್ರ ಪ್ರಶಸ್ತಿ ಪಡೆದಿದೆ.

ಪುರುಷರ ವಿಭಾಗದಲ್ಲಿ ಒಟ್ಟು 6 ಚಿನ್ನ 3 ಬೆಳ್ಳಿ, ಒಂದು ಕಂಚಿನ ಪದಕ ಪಡೆದರೆ, ಮಹಿಳಾ ವಿಭಾಗದಲ್ಲಿ ಒಟ್ಟು 5 ಚಿನ್ನ, 5 ಬೆಳ್ಳಿ ಪಡೆದು ತಂಡ ಪ್ರಶಸ್ತಿ ಪಡೆದುಕೊಂಡಿದೆ.

ಆಳ್ವಾಸ್‌ನ ಉಷಾ ಎಸ್.ಆರ್ 87 ಕೆ.ಜಿ ದೇಹತೂಕ ವಿಭಾಗದಲ್ಲಿ ಬೆಸ್ಟ್ ಲಿಫ್ಟರ್ ಪ್ರಶಸ್ತಿಗೆ ಭಾಜನರಾದರು. ಕ್ರೀಡಾಪಟುಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ

Related Posts

Leave a Reply

Your email address will not be published.