ಮೂಡುಬಿದಿರೆ : ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಶಿಕ್ಷಕರ ದಿನಾಚರಣೆ

ನಮ್ಮ ದೇಶ ಹಾಗೂ ಸದೃಢವಾದ ಸಮಾಜ ಕಟ್ಟಬಲ್ಲಂತ ಸಾಮರ್ಥ್ಯವಿರುವ ಏಕೈಕ ಸಮರ್ಥ ಕ್ಷೇತ್ರವೆಂದರೆ ಅದು ಶಿಕ್ಷಣ ಕ್ಷೇತ್ರಕ್ಕೆ ಮಾತ್ರ. ಮಕ್ಕಳಿಗೆ ಪಠ್ಯಪುಸ್ತಕದಲ್ಲಿ ಇರುವುದನ್ನು ಮಾತ್ರ ಹೇಳುವುದಲ್ಲದೆ, ಅವರ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಮುಖ್ಯ ಅತಿಥಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ ಹೇಳಿದರು.
ಅವರು ಇಲ್ಲಿನ ಕನ್ನಡ ಭವನದಲ್ಲಿ ದ.ಕ. ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ (ರಿ.) ವಿವಿಧ ವಿಷಯವಾರು ಉಪನ್ಯಾಸಕರ ಸಂಘಗಳು, ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘ, ಮಂಗಳೂರು ದ.ಕ.ಹಾಗೂಆಳ್ವಾಸ್ ಪದವಿ ಪೂರ್ವ ಕಾಲೇಜು ಮೂಡುಬಿದಿರೆ, ದ.ಕ. ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಶಿಕ್ಷಕರ ದಿನಾಚರಣೆ ಹಾಗೂ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.”ಬದುಕಿನಲ್ಲಿ ಶಿಕ್ಷಕರು ತರಗತಿಯ ಒಳಗೆ ಕಲಿಸುವುದಾದರೆ ಮತ್ತು ಇನ್ನು ಕೆಲ ಜನರು ಹೊರಗಡೆ ಕಲಿಸಿಕೊಡುತ್ತಾರೆ ಆದರೆ ಕಲಿಯುವ ಆಸಕ್ತಿ ತೆರೆದ ಮನಸ್ಸು ನಮ್ಮದಾಗಿರಬೇಕು” ಎಂದರು.
ಇನ್ನೊರ್ವ ಮುಖ್ಯ ಅತಿಥಿ ವಿಧಾನ ಪರಿಷತ್ ಸದಸ್ಯ ಎಸ್. ಎಲ್ ಭೋಜೇ ಗೌಡ ಮಾತನಾಡಿ ಮಕ್ಕಳಿಗೆ ಶಿಕ್ಷಣದಲ್ಲಿ ಜೊತೆಗೆ ನೈತಿಕತೆ ಪಾಠ ಕೂಡ ಕಲಿಸಬೇಕು ಶಿಕ್ಷಣ ಕ್ಷೇತ್ರದಲ್ಲಿ ಪಿಹೆಚ್ ಡಿ ಪಡೆದುಕೊಂಡ ವಿದ್ಯಾರ್ಥಿ ತಂದೆ ತಾಯಿಗಳನ್ನು ವೃದ್ರಾಶ್ರಮಕ್ಕೆ ಸೇರಿಸುವುದು ಸರಿಯಲ್ಲ ಹಾಗಾಗಿ ಶೈಕ್ಷಣಿಕದ ಜೊತೆಗೆ ಜೀವನದ ಶಿಕ್ಷಣ ಕೂಡ ಮುಖ್ಯ. ಮಾಡುವ ಕೆಲಸದಲ್ಲಿ ಫಲಪೇಕ್ಷೆಯ ಚಿಂತೆ ಮಾಡದೆ, ಪ್ರಾಮಾಣಿಕವಾಗಿ ಮಾಡಿದರೆ ಗೆಲುವು ನಮ್ಮದಾಗುತ್ತದೆ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ ಅಧ್ಯಕ್ಷತೆ ವಹಿಸಿ ಮಾತನಾಡಿ ಪದವಿ ಪೂರ್ವ ಎನ್ನುವುದು ವಿದ್ಯಾರ್ಥಿಯ ಜೀವನದಲ್ಲಿ ಒಂದು ಅರ್ಥಪೂರ್ಣವಾದ ಘಟ್ಟ. ಹಾಗಾಗಿ ಅವರಿಗೆ ಗುಣಮಟ್ಟದ ಶಿಕ್ಷಣ ಕೊಡುವುದು ನಮ್ಮ ಕರ್ತವ್ಯ. ಪ್ರಸ್ತುತ ಕಾಲಘಟ್ಟಗಳಲ್ಲಿ ಸರ್ಕಾರಿ ಶಾಲೆಗಳು ಸೋತರೆ ಅದು ಶ್ರೀಸಾಮಾನ್ಯನ, ಗ್ರಾಮೀಣ ಸಂಸ್ಕೃತಿಯ ಸೋಲು. ನಾವು ಯಾವುದೇ ಸರ್ಕಾರಿ ಶಾಲೆ ಸೋಲದಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ಶಿಕ್ಷಕರು, ಸರ್ಕಾರಿ ಇಲಾಖೆಗಳು ಹೊಸತನದನ್ನು ಕಲಿತು ಕಾಲ ಕಾಲಕ್ಕೆ ಬದಲಾವಣೆಗಳನ್ನು ಸ್ವಾಗತಿಸುವುದು ಆಗುವುದು ಮುಖ್ಯ. ವ್ಯಾಪಾರಿಕರಣವಾದ ವಿದ್ಯಾ ಸಂಸ್ಥೆಗಳು ಕಡೆಗೆ ಸರ್ಕಾರ ಗಮನಹರಿಸಿ, ಗ್ರಾಮೀಣ ಮಕ್ಕಳಿಗೆ ಬಾಳಿಗೆ ಶಿಕ್ಷಣ ಸಂಸ್ಥೆಗಳು ದಾರಿ ದೀಪವಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಅನುದಾನಿತ ರಹಿತ ಶಾಲೆಯ ಶಿಕ್ಷಕರಾದ ಡಿ. ಎದುಪದಿ ಗೌಡ, ಸಂದ್ಯಾ .ಪಿ, ಹರೀಶ್ ಶಾಸ್ತ್ರಿ, ಅನುದಾನಿತ ಶಾಲೆಯ ಶಿಕ್ಷಕ ಡಾ. ಪ್ರದೀಪ.ಎಂ ಹಾಗೂ ಸರಕಾರಿ ಶಾಲೆಯ ಸಜೇಶ್ ಸೇರಿ ಒಟ್ಟು 5 ಶಿಕ್ಷಕರಿಗೆ “ಉತ್ತಮ ಶಿಕ್ಷಕ” ಪ್ರಶಸ್ತಿ, 5 ಸಾವಿರ ನಗದು ಮತ್ತು ವಂಡರ್ಲಾ 5 ಸಾವಿರ ಟಿಕೆಟ್ ನೀಡಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಎಸ್.ಎನ್ ಅಧೀನ ಕಾರ್ಯದರ್ಶಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಸಿ.ಡಿ. ಪದ್ಮಿನಿ, ಪದವಿ ಪೂರ್ವ ಶಿಕ್ಷಣ ಇಲಾಖೆ,ದ.ಕ ಜಿಲ್ಲೆ, ಉಪನಿರ್ದೇಶಕ ಜಯಣ್ಣ , ಉಪನಿರ್ದೇಶಕರು ಆನಂದ್ ಪಿ , ಪದವಿ ಪೂರ್ವ ಶಿಕ್ಷಣ ಇಲಾಖೆ ದ.ಕ ಇದರ ಶಾಖಾಧಿಕಾರಿ ನಿತಿನ್ ಬಿ.ಟಿ, ದ.ಕ ಪದವಿ ಪೂರ್ವ ಪ್ರಾಚಾರ್ಯ ಸಂಘದ ಅಧ್ಯಕ್ಷ
ಗಂಗಾಧರ ಆಳ್ವ ಉಪಾಧ್ಯಕ್ಷರುಗಳಾದ ಯೂಸುಫ್, ವಿಠಲ್ ಕೋಶಾಧಿಕಾರಿ ಕವಿತಾ, ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೋಫೆಸರ್. ಮೊಹಮ್ಮದ್ ಸದಾಖತ್, ಉಪಾಧ್ಯಕ್ಷರುಗಳಾದ ಸುಧೀರ್ ಕುಮಾರ್, ವಿನಾಯಕ್ ಬಿ.ಜಿ, ಜೊತೆ ಕಾರ್ಯದರ್ಶಿಗಳಾದ ಪ್ರವೀಣ್ ಎ, ಮಹಮ್ಮದ್ ಇಸಾಕ್ ಉಪಸ್ಥಿತರಿದ್ದರು.
