ಸೆ.4ರಂದು ಕುಂದಾಪುರದ ರಂಗ ಅಧ್ಯಯನ ಕೇಂದ್ರದಲ್ಲಿ “ಅಮೃತಭಾರತಿಗೆ ಸಂಗೀತದಾರತಿ” ಕಾರ್ಯಕ್ರಮ

ಸಂಗೀತ ಭಾರತಿ ಟ್ರಸ್ಟ್ (ರಿ.) ಕುಂದಾಪುರ ಮತ್ತು ಚಿರಂತನ ಚ್ಯಾರಿಟೇಬಲ್ ಟ್ರಸ್ಟ್, ಸುರತ್ಕಲ್ ಇವರ ಸಂಯುಕ್ತ ಆಶ್ರಯದಲ್ಲಿ ಸೆಪ್ಟೆಂಬರ್ 04, ಬೆಳಗ್ಗೆ 09:30ರಿಂದ ಸಂಜೆ 07:00 ರವರೆಗೆ ಹಿಂದುಸ್ಥಾನಿ ಯುವ ಶಾಸ್ತ್ರೀಯ ಸಂಗೀತೋತ್ಸವ “ಅಮೃತಭಾರತಿಗೆ ಸಂಗೀತದಾರತಿ” ಕಾರ್ಯಕ್ರಮ ಕುಂದಾಪುರದ ರಂಗ ಅಧ್ಯಯನ ಕೇಂದ್ರದಲ್ಲಿ ನಡೆಯಲಿದೆ.
ಉದಯೋನ್ಮುಖ ಸಂಗೀತ ಕಲಾವಿದರಿಗೆ ಹಾಗೂ ಕಲೆ, ಸಂಸ್ಕೃತಿ, ಸಂಗೀತಕ್ಕೆ ಹೆಚ್ಚಿನ ಉತ್ತೇಜನ ನೀಡಲೆಂದು ರೂಪಿಸಿದ ಈ ಕಾರ್ಯಕ್ರಮದಲ್ಲಿ ಯುವ ಗಾಯಕರಾದ ಅನುರಾಧ ಭಟ್ ಉಡುಪಿ, ಬಸವರಾಜ ವಂದಲಿ ಧಾರವಾಡ, ವಿಭಾ ಹೆಗಡೆ ಯಲ್ಲಾಪುರ, ರವಿ ಕಟ್ಟಿ ಧಾರವಾಡ ಇವರಿಂದ ಗಾಯನ, ಸಮರ್ಥ ಹೆಗಡೆ ತಂಗಾರಮನೆ ಇವರಿಂದ ಬಾನ್ಸುರಿ ವಾದನ. ತಬಲಾ ವಾದಕರಾದ ಶಮಂತ ದೇಸಾಯಿ ಧಾರವಾಡ, ಪಂಚಮ ಉಪಾಧ್ಯಾಯ ಧಾರವಾಡ ಇವರಿಂದ ಜುಗಲ್ಬಂದಿ ಹಾಗೂ ಅಭಿಷೇಕ್ ಪ್ರಭು, ಮುಂಬೈ ಇವರಿಂದ ಗಿಟಾರ್ ವಾದನ ನಡೆಯಲಿದೆ.
