ಅರುಣ್ ಕುಮಾರ್ ಪುತ್ತಿಲರಿಂದ ಪ್ರಣಾಳಿಕೆ ಬಿಡುಗಡೆ
ಪುತ್ತೂರು: ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲರಿಂದ ಹಿಂದುತ್ವದ ರಕ್ಷಣೆ ಜೊತೆಗೆ ಭ್ರಷ್ಟಾಚಾರ ರಹಿತ, ಜನಸ್ನೇಹಿ ಅಡಳಿತ ನೀಡುವ ಭರವಸೆಯ ಜೊತೆಗೆ 31 ವಿಷಯಾಧಾರಿತ ಪ್ರಣಾಳಿಕೆ ಬಿಡುಗಡೆಗೊಳಿಸಲಾಯಿತು.
ಪುತ್ತೂರು ದರ್ಬೆ ಸುಭದ್ರ ಕಲ್ಯಾಣ ಮಂಟಪದ ಬಳಿ ಪ್ರಣಾಳಿಕೆ ಬಿಡುಗಡೆಗೊಳಿಸಲಾಯಿತು. ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ, ಸುನಿಲ್ ಬೋರ್ಕರ್, ಭಾಸ್ಕರ್ ಆಚಾರ್ಯ ಇಂದಾರು, ಡಾ.ಗಣೇಶ್ ಪ್ರಸಾದ್ ಮುದ್ರಾಜೆ, ಪ್ರಸನ್ನ ಕುಮಾರ್ ಮಾರ್ತಾ, ಸ್ನೇಹ ಸಿಲ್ಕ್ ನ ಸತೀಶ್ ಕುಮಾರ್, ನಿವೃತ್ತ ತಹಸೀಲ್ದಾರ್ ಮೋನಪ್ಪ ಪುರುಷ, ನಿವೃತ್ತ ಸೇನಾನಿ ಚಂದಪ್ಪ ಮೂಲ್ಯ, ಕುಶಾಲಪ್ಪ ಗೌಡ ಬಳಕ್ಕ, ರಾಜಶೇಖರ್ ಉದ್ಯಮಿ ಬನ್ನೂರು ಉಪಸ್ಥಿತರಿದ್ದರು.