ಕುಂದಾಪುರ: ಶ್ರೀ ಸಾಯಿ ಆಸ್ಪತ್ರೆಯಲ್ಲಿ24 ಗಂಟೆ ಅಪಘಾತ ಮತ್ತು ತುರ್ತು ಚಿಕಿತ್ಸಾ ಘಟಕದ ಉದ್ಘಾಟನೆ ಸಮಾರಂಭ
ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ. ಜಯಕರ ಶೆಟ್ಟಿ ಶ್ರೀ ಸಾಯಿ ಆಸ್ಪತ್ರೆಯಲ್ಲಿ ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗ, ಟ್ರಾಮಾ ಮತ್ತು ತುರ್ತು ಚಿಕಿತ್ಸಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ ಕು೦ದಾಪುರದ೦ತಹ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶಗಳಿಗೆ ತುರ್ತು ಮತ್ತು ಅಪಘಾತ ಚಿಕಿತ್ಸಾ ಸೇವೆಗಳನ್ನು ವಿಸ್ತರಿಸುವುದು ಜೀವ ರಕ್ಷಣೆಯಲ್ಲಿ ಅತ್ಯಂತ ಪ್ರಮುಖ ಹೆಜ್ಜೆ ತುರ್ತು ಪರಿಸ್ಥಿತಿಗಳಲ್ಲಿ ಸಮಯೋಚಿತ ವೈದ್ಯಕೀಯ ಪ್ರತಿಕ್ರಿಯೆ ಮತ್ತು ಉನ್ನತ ಚಿಕಿತ್ಸೆ ಲಭ್ಯತೆ ಜೀವ ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಹೇಳಿದರು.
ಶ್ರೀ ಸಾಯಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ. ರಂಜನ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೆಎಂಸಿ ಆಸ್ಪತ್ರೆಯ ತುರ್ತು ವೈದ್ಯಕೀಯ ತಂಡವನ್ನು ಸ್ವಾಗತಿಸುವುದರಲ್ಲಿ ನಾವು ಸಂತೋಷ ವ್ಯಕ್ತಪಡಿಸುತ್ತೇವೆ. ಅವರ ಪರಿಣಿತಿ ಕುಂದಾಪುರ ಮತ್ತು ಸುತ್ತಮುತ್ತಲಿನ ಜನತೆಗೆ ಅಪಾರ ಪ್ರಯೋಜನ ತರಲಿದೆ. ಸ್ಟೋಕ್, ಹೃದಯಾಘಾತ, ವಿಷಸೇವನೆ, ಮಕ್ಕಳ ತುರ್ತು ಪ್ರಕರಣಗಳು ಮತ್ತು ರಸ್ತೆ ಅಪಘಾತಗಳು ಮತ್ತು ಕ್ರಿಟಿಕಲ್ ಕೇರ್ ಯುನಿಟ್, ಐಸಿಯು, ಶಸ್ತ್ರಚಿಕಿತ್ಸಾ ಕೊಠಡಿ, ಎಕ್ಸ್-ರೇ ಮತ್ತು ಡಯನ್ನೋಸ್ಟಿಕ್ ಲ್ಯಾಬ್, ಫಿಸಿಯೋಥೆರಪಿ ವಿಭಾಗ, ಇಮೇಜಿಂಗ್ ಸೌಲಭ್ಯಗಳು, ವಿಶೇಷ ಹಾಗೂ ಡಿಲಕ್ಸ್ ವಾರ್ಡ್‌ಗಳು, ಪುರುಷ ಮತ್ತು ಮಹಿಳಾ ವಾರ್ಡ್‌ಗಳು, ಡೇ ಕೇರ್ ಯುನಿಟ್ ಮುಂತಾದ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ ಎಂದರು
ಕೆಎಂಸಿ ಆಸ್ಪತ್ರೆಯ ತುರ್ತು ವೈದ್ಯಕೀಯ ವಿಭಾಗದ ಸಲಹೆಗಾರ ಮತ್ತು ಕ್ಲಸ್ಟರ್ ಮುಖ್ಯಸ್ಥ ಡಾ. ಜೀಧು ರಾಧಾಕೃಷ್ಣನ್ ಮಾತನಾಡಿ, ಕುಂದಾಪುರ ಕೇಂದ್ರದ ಪ್ರಾರಂಭದಿಂದ ಈ ಜೀವ ರಕ್ಷಣಾ ವ್ಯವಸ್ಥೆ ಮತ್ತಷ್ಟು ಬಲವಾಗಲಿದೆ. ತುರ್ತು ಸಂದರ್ಭಗಳಲ್ಲಿ ತಕ್ಷಣದ ತ್ವರಿತ ಹಾಗೂ ನಿಪುಣ ಚಿಕಿತ್ಸೆಯಿಂದ ರೋಗಿಗಳ ಚೇತರಿಕೆ ಪ್ರಮಾಣವನ್ನು ಹೆಚ್ಚಿಸಬಹುದು. ಹೆಚ್ಚಿನ ತಜ್ಞ ಚಿಕಿತ್ಸೆಯ ಅಗತ್ಯವಿರುವ ರೋಗಿಗಳನ್ನು ಉನ್ನತ ಮಟ್ಟದ ವೈದ್ಯಕೀಯ ಆರಕೈಗೆ ವರ್ಗಾಯಿಸಲಾಗುವುದು ಮತ್ತು ಅಲ್ಲಿ ಉತ್ತಮವಾದ ಬಹು ವಿಭಾಗದ ಆರಕೈಯನ್ನು ನೀಡಲಾಗುತ್ತದೆ ಎಂದರು
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ ಶಂಕರ್ ಕೆಎಂಸಿ ಆಸ್ಪತ್ರೆ, ಮಂಗಳೂರಿನ ಮಾರ್ಕೆಟಿಂಗ್ ವಿಭಾಗದ ಸೀನಿಯರ್ ಮ್ಯಾನೇಜರ್ ರಾಕೇಶ್,ಡಾ.ಪ್ರೇಮಾನಂದ, ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ.ಬಾಲಕೃಷ್ಣ ಶೆಟ್ಟಿ IMA ಪ್ರೆಸಿಡೆಂಟ್ ಕುಂದಾಪುರ, ಸತ್ಯಭಾರತೋ ಡೆಪ್ಯೂಟಿ ರೀಜನಲ್ ಹೆಡ್ ಯೂನಿಯನ್ ಬ್ಯಾಂಕ್, ಶ್ರೀಮತಿ ಮೇಘನಾ ರಂಜನ್ ಶೆಟ್ಟಿ, ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು.
ಸುಹಾಸ ಮಲ್ಯ ಪ್ರಾರ್ಥನೆ ಮಾಡಿದರು. ಶ್ರೀ ಸಾಯಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ. ರಂಜನ್ ಶೆಟ್ಟಿ ಸ್ವಾಗತಿಸಿದರು. ಪತ್ರಕರ್ತ ರಾಜೇಶ ಕೆ.ಸಿ ಕಾರ್ಯಕ್ರಮ ನಿರ್ವಹಿಸಿದರು. ಪ್ರಕೃತಿ ವಂದಿಸಿದರು.


















