Home Articles posted by v4news (Page 170)

V4news ವಾಹಿನಿಯಲ್ಲಿ ಕೊರೊನಾ ವಾರಿಯರ್ಸ್ ಗಳನ್ನು ಸನ್ಮಾನಿಸಿದ ಶಾಸಕ ಡಾ.ಭರತ್ ಶೆಟ್ಟಿ

V4 ವಾಹಿನಿ ಆರಂಭವಾಗಿ 16 ವರ್ಷಗಳು ಸಂದಿರುವ ಇವತ್ತು ಯೆಯ್ಯಾಡಿಯಲ್ಲಿರುವ ಚಾನೆಲ್ ನ ಸ್ಟುಡಿಯೋದಲ್ಲಿ ಕೊರೊನಾ ವಾರಿಯರ್ಸ್ ಗಳಾಗಿ ಸೇವೆ ಸಲ್ಲಿಸುತ್ತಿರುವ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರನ್ನು ಚಾನೆಲ್ ಪರವಾಗಿ ಮಂಗಳೂರು ನಗರ ಉತ್ತರ ಶಾಸಕರಾದ ಡಾ.ವೈ ಭರತ್ ಶೆಟ್ಟಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ವಿ4 ನ್ಯೂಸ್ ವಾಹಿನಿಯ ಆಡಳಿತ ನಿರ್ದೇಶಕರಾದ ಲಕ್ಷ್ಮಣ್

‘ಸ್ವಾಸ್ಥ್ಯಕ್ಕಾಗಿ ಯೋಗ’ ಎಂಬುದು ಈ ಬಾರಿಯ ಯೋಗ ದಿನದ ವಸ್ತುವಿಷಯ:ಪ್ರಧಾನಿ ನರೇಂದ್ರ ಮೋದಿ

‘ಇಡೀ ಜಗತ್ತು ಕೋವಿಡ್‌ ವಿರುದ್ಧ ಹೋರಾಡುತ್ತಿರುವ ಈ ಹೊತ್ತಿನಲ್ಲಿ ಯೋಗ ಭರವಸೆಯ ಅಶಾಕಿರಣವಾಗಿದೆ. ಸಾಂಕ್ರಾಮಿಕ ಅವಧಿಯಲ್ಲಿ ಯೋಗ ಕಡೆಗಿನ ಜನರ ಉತ್ಸಾಹ ಕಡಿಮೆಯಾಗಿಲ್ಲ. ಕೋವಿಡ್‌ ವಿರುದ್ಧದ ರಕ್ಷಣೆಗಾಗಿ ವೈದ್ಯರೂ ಯೋಗದ ಮೊರೆ ಹೋಗಿದ್ದಾರೆ,’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇಂದು ವಿಶ್ವ ಯೋಗ ದಿನ. ‘ಸ್ವಾಸ್ಥ್ಯಕ್ಕಾಗಿ ಯೋಗ’ ಎಂಬುದು ಈ ಬಾರಿಯ ಯೋಗ ದಿನದ ವಸ್ತುವಿಷಯ. ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಮಾತನಾಡಿರುವ

ದ.ಕ. ಜಿಲ್ಲೆಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಮಧಾಹ್ನ 1ರ ವರೆಗೆ ಅವಕಾಶ: ಜಿಲ್ಲಾಧಿಕಾರಿ

ದ.ಕ.ಜಿಲ್ಲೆಯಲ್ಲಿ ಸೋಮವಾರದಿಂದ ಲಾಕ್‌ಡೌನ್ ಸಡಿಲಿಕೆ ಮಾಡಲು ಜಿಲ್ಲಾಡಳಿತ ನಿರ್ಧಾರ ಕೈಗೊಂಡಿದೆ. ನಾಳೆಯಿಂದ ಬೆಳಗ್ಗೆ 7ರಿಂದ ಮಧ್ಯಾಹ್ನ 1ರವರೆಗೆ ಅಗತ್ಯ ಸಾಮಗ್ರಿ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ದ.ಕ.ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ. ದ.ಕ ಜಿಲ್ಲೆಯಲ್ಲಿ ಬೆಳಗ್ಗೆ 7 ರಿಂದ ಮಧ್ಯಾಹ್ನ 1ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದ್ದು, ಅನ್‍ಲಾಕ್ 1.0 ಭಾಗವಾಗಿ ಅಗತ್ಯವಸ್ತುಗಳ ಖರೀದಿಗೆ ಅವಧಿ ವಿಸ್ತರಣೆ

ವಿಟ್ಲ:ಮನೆಗೊಂದು ಸಸಿ ಪರಿಸರ ಜಾಗೃತಿ ಕಾರ್ಯಕ್ರಮ

ವಿಟ್ಲ: ನವಭಾರತ್ ಯುವಕ ಸಂಘ ಅನಂತಾಡಿ ವತಿಯಿಂದ ಪರಿಸರ ಸಂರಕ್ಷಣಾ ಪ್ರಯುಕ್ತ ಮನೆಗೊಂದು ಸಸಿ ಪರಿಸರ ಜಾಗೃತಿ ಕಾರ್ಯಕ್ರಮ ನಡೆಯಿತು. ಅನಂತಾಡಿ ಗ್ರಾಮದ ಸುತ್ತ ಮುತ್ತಲಿನ ಹಲವಾರು ಮನೆಗಳಿಗೆ ಆರ್ಯುವೇದಿಕ್ ಸಂಬಧಿಸಿದ ಸಸಿಗಳನ್ನು ನೀಡಿದರು.ಈ ಕಾರ್ಯ ಕ್ರಮದಲ್ಲಿ ನವಭಾರತ್ ಅಧ್ಯಕ್ಷ ಪವನ್ ಕುಮಾರ್ ಅನಂತಾಡಿ, ಸಂಘದ ಎಲ್ಲಾ ಪದಾಧಿಕಾರಿಗಳು ಪಾಲ್ಗೊಂಡಿದ್ದರು.‌

ನಾಸ್ಡಾಕ್ ದುಬೈನ ಖಾಸಗಿ ಮಾರುಕಟ್ಟೆ ಪ್ರವೇಶಿಸಿದ ಮಲಬಾರ್ ಗೋಲ್ಡ್ & ಡೈಮಂಡ್ಸ್

ಬೆಂಗಳೂರು: ಜಗತ್ತಿನ ಅತಿ ದೊಡ್ಡ ಜ್ಯುವೆಲ್ಲರಿ ರೀಟೇಲರ್‌ಗಳಲ್ಲಿ ಒಂದಾಗಿರುವ ಮಲಬಾರ್ ಗೋಲ್ಡ್ & ಡೈಮಂಡ್ಸ್‌ನ ಅಂತಾರಾಷ್ಟ್ರೀಯ ಹೂಡಿಕೆ ಅಂಗಸಂಸ್ಥೆಯಾಗಿರುವ ಮಲಬಾರ್ ಇನ್ವೆಸ್ಟ್‌ಮೆಂಟ್ಸ್ ದುಬೈ ಇಂಟರ್‌ನ್ಯಾ?ನಲ್ ಫೈನಾನ್ಷಿಯಲ್ ಸೆಂಟರ್(ಡಿಐಎಫ್‌ಸಿ) ಅನ್ನು ಪ್ರವೇಶಿಸಿದೆ. ಮತ್ತು ನಾಸ್ಡಾಕ್ ದುಬೈನ ಸೆಂಟ್ರಲ್ ಸೆಕ್ಯೂರಿಟೀಸ್ ಡೆಪೋಸಿಟರಿ(ಸಿಎಸ್‌ಡಿ)ಯಲ್ಲಿ ತನ್ನ ಷೇರುಗಳನ್ನು ನೋಂದಣಿ ಮಾಡಿದೆ. ಇದರ ಮೂಲಕ ಮಲಬಾರ್ ಗ್ರೂಪ್ ಮಹತ್ವದ ಹೆಜ್ಜೆ ಇಟ್ಟಿದೆ. ಈ

ಕೆಮ್ಮಾರ: ಇಲಿಪಾಷಾಣ ತಿಂದು ಎರಡೂವರೇ ವರ್ಷದ ಹೆಣ್ಣು ಮಗು ಸಾವು

ಇಲಿ ಪಾಷಾಣ ತಿಂದು ಎರಡೂವರೇ ವರ್ಷದ ಹೆಣ್ಣು ಮಗುವೊಂದು ಮೃತಪಟ್ಟ ಘಟನೆ ಬಜತ್ತೂರು ಗ್ರಾಮದ ಕೆಮ್ಮಾರದಲ್ಲಿ ನಡೆದಿದೆ. ಕೆಮ್ಮಾರ ನಿವಾಸಿ, ನಿವೃತ್ತ ಸೈನಿಕ ಸೈಜು ಎಂಬವರ ಪುತ್ರಿ, ಎರಡೂವರೇ ವರ್ಷದ ಶ್ರೇಯಾ ಮೃತಪಟ್ಟ ಮಗು. ಜೂ.19ರಂದು ಬೆಳಿಗ್ಗೆ ಮಗುವಿನ ತಂದೆ, ತಾಯಿ ನಾಯಿ ಗೂಡಿನ ಮೇಲಿದ್ದ ಪಿವಿಎಸ್ ಪೈಪು ಸೇರಿದಂತೆ ಇನ್ನಿತರ ಸಾಮಾಗ್ರಿಗಳನ್ನು ಕ್ಲೀನ್ ಮಾಡಿದ್ದು ಇದರಲ್ಲಿ ಎರಡು-ಮೂರು ತಿಂಗಳ ಹಿಂದೆ ತಂದಿದ್ದ ಇಲಿ ಪಾಷಾಣದ ಟ್ಯೂಬ್ ಸಹ ಇತ್ತು. ಮನೆಯವರು ಕೆಲಸ

ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಮದುವೆ: ಎಸಿ ಮದನ್ ಮೋಹನ್ ನೇತೃತ್ವದಲ್ಲಿ ದಾಳಿ

ನಗರದ ಮಂಗಳಾದೇವಿ ದೇವಸ್ಥಾನದ ಸಮೀಪದ ವೇದಿಕೆಯಲ್ಲಿ ಏಕಕಾಲದಲ್ಲಿ ನಾಲ್ಕು ಮದುವೆ ಕಾರ್ಯಕ್ರಮಗಳು ನಡೆಸುತ್ತಿದ್ದ ಸಂದರ್ಭ ಎಸಿ ಮದನ್ ಮೋಹನ್ ನೇತೃತ್ವದ ತಂಡ ದಾಳಿ ನಡೆಸಿ, ಕೇಸು ದಾಖಲಿಸಿದೆ. ನಿಯಮಬಾಹಿರವಾಗಿ ಮದುವೆ ಸಮಾರಂಭ ಆಯೋಜಿಸಿರುವುದಾಗಿ ಬಂದ ದೂರಿನ ಹಿನ್ನೆಲೆ ಈ ದಾಳಿ ನಡೆದಿದೆ. ಪಕ್ಷದ ನಾಯಕರೊಬ್ಬರ ಪುತ್ರಿಯ ಮದುವೆ ಸೇರಿದಂತೆ ಇನ್ನೂ ಮೂರು ವಿವಾಹಗಳು ನಡೆಯುತ್ತಿದ್ದವೆನ್ನಲಾಗಿದೆ. ಮದುವೆ ನೂರಕ್ಕೂ ಹೆಚ್ಚು ಜನರ ಗುಂಪುಗೂಡಿದ್ದರು ಎಂದು

ಸವಣೂರಿನಲ್ಲಿ ಕೋವಿಡ್ ಕಾರ್ಯಪಡೆಯ ಸಭೆ

ಸವಣೂರು: ಕೋವಿಡ್ ಪಾಸಿಟಿವ್ ಬಂದವರನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್‌ಗೆ ಸೇರಿಸಬೇಕು.ಹೋಂ ಐಸೋಲೇಶನ್ ನಿಂದ ಇತರರಿಗೆ ಹರಡುವ ಸಾಧ್ಯತೆ ಜಾಸ್ತಿ.ಆದ್ದರಿಂದ ಕಡ್ಡಾಯವಾಗಿ ಪಾಸಿಟಿವ್ ಬಂದವರನ್ನೂ ಕೇರ್ ಸೆಂಟರ್ ಗೆ ಸೇರಿಸಬೇಕು. ಕುರಿತು ಎಲ್ಲರೂ ಗಮನಹರಿಸಬೇಕೆಂದು ಸಚಿವ ಎಸ್.ಅಂಗಾರ ಸೂಚನೆ ನೀಡಿದರು. ಅವರು ಸವಣೂರು ಗ್ರಾ.ಪಂ.ನಲ್ಲಿ ಕೋವಿಡ್ ಕಾರ್ಯಪಡೆಯ ವರದಿ ಪರಿಶೀಲನೆ ನಡೆಸಿ ಮಾತನಾಡಿದರು. ಸಾರ್ವಜನಿಕರ ಹಿತದೃಷ್ಟಿಯಿಂದ ಕೋವಿಡ್ ಕೇರ್ ಸೆಂಟರ್ ಗೆ