Home Articles posted by v4team

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಅತ್ಯಾಧುನಿಕ ರೊಬೊಟಿಕ್ ಸರ್ಜರಿ ಸೌಲಭ್ಯದ ಉದ್ಘಾಟನೆ , ಒಲಿಂಪಿಕ್ ಚಾಂಪಿಯನ್ ಸೈನಾ ನೆಹ್ವಾಲ್ ರಿಂದ ಅನಾವರಣ

ಮಣಿಪಾಲ, ಅಕ್ಟೋಬರ್ 14, 2025: ಇಂದು ಉಡುಪಿ ಜಿಲ್ಲೆಯ ಆರೋಗ್ಯ ಕ್ಷೆತ್ರದಲ್ಲಿ ಒಂದು ಮೈಲಿಗಲ್ಲು, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲವು ಇಂದು ತನ್ನ ಸುಧಾರಿತ ರೊಬೊಟಿಕ್ ಸರ್ಜರಿ ಸೌಲಭ್ಯವನ್ನು ಉದ್ಘಾಟಿಸಿತು, ಇದು ಈ ಪ್ರದೇಶದಲ್ಲಿ ಒಂದು ಪರಿವರ್ತನಾ ಅಧ್ಯಾಯವನ್ನು ಗುರುತಿಸುತ್ತದೆ. ಈ ಅತ್ಯಾಧುನಿಕ ತಂತ್ರಜ್ಞಾನದ ಸೌಲಭ್ಯವನ್ನು ಒಲಿಂಪಿಕ್ ಬ್ಯಾಡ್ಮಿಂಟನ್

ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದಂತೆ ಇಲಾಖಾಧಿಕಾರಿಗಳ ಸಭೆ – ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭಾಗಿ

ರಾಷ್ಟ್ರೀಯ ಹೆದ್ದಾರಿಗೆ ಸಂಭಂದಿಸಿದಂತೆ ಜಿಲ್ಲಾಧಿಕಾರಿಗಳಾದ ಕೋರ್ಟ್ ಹಾಲ್ ಕಚೇರಿಯಲ್ಲಿ ಇಂದು ದಿನಾಂಕ 14-10-2025 ರಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿದರು. ಸಭೆಯಲ್ಲಿ ಕಟಪಾಡಿ ಜಂಕ್ಷನ್ ಬಳಿ ಈಗಾಗಲೇ ಓವರ್ ಪಾಸ್ ಮಂಜೂರಾಗಿ ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಶೀಘ್ರದಲ್ಲೇ ಇಲೆಕ್ಟ್ರಿಕ್

ಮಾರಿಷಸ್ ದೇಶದಲ್ಲಿ ಸುಳ್ಯದ ವಿದ್ಯಾರ್ಥಿ ಸಾವು

ಸುಳ್ಯ: ಮಾರಿಷಸ್ ದೇಶದಲ್ಲಿ ಶಿಕ್ಷಣ ಪಡೆಯುತ್ತಿರುವ ಸುಳ್ಯದ ಯುವಕನೋರ್ವ ಅಲ್ಲಿ ಜಲಪಾತ ವೀಕ್ಷಣೆಗೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಸಂಭವಿಸಿದೆ.ಸುಬ್ರಹ್ಮಣ್ಯ ಸಮೀಪದ ನಡುಗಲ್ಲು ಕಲ್ಲಾಜೆಯ ಜಯಲಕ್ಷ್ಮಿ ಎಂಬವರ ಪುತ್ರ ನಂದನ ಎಸ್. ಭಟ್ (25) ಮೃತರು. ನಂದನ ಅವರು ಮಾರಿಷಸ್ ದೇಶದಲ್ಲಿ ವಿದ್ಯಾರ್ಥಿ ವೀಸಾದಲ್ಲಿದ್ದು ಅಲ್ಲಿ ಜಲಪಾತ ವೀಕ್ಷಣೆಗೆ ಹೋಗಿದ್ದ ವೇಳೆ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಮೃತದೇಹವನ್ನು ಅಲ್ಲಿನ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಹೈಡ್ರೋಫೋನಿಕ್‌ ಗಾಂಜಾ ಸಾಗಾಟ: ಆರೋಪಿಯ ಬಂಧನ

ಮಂಗಳೂರು:ಮುಂಬೈನಿಂದ ವಿಮಾನದ ಮೂಲಕ ಹೈಡ್ರೋಪೋನಿಕ್ ಗಾಂಜಾ ಸಾಗಿಸುತ್ತಿದ್ದ ಓರ್ವನನ್ನು ಸಿಐಎಸ್ಎಫ್ ಜವಾನರು ವಶಕ್ಕೆ ಪಡೆದು‌ ಬಜ್ಪೆ‌ ಪೊಲೀಸರಿಗೆ ಒಪ್ಪಿಸಿದ್ದಾರೆ‌.‌ ಬಂಧಿತನನ್ನು ಶಂಕರ್ ನಾರಾಯಣ್ ಪೊದ್ದಾರ್ ಎಂದು ತಿಳಿದು ಬಂದಿದೆ. ಈತ ಸೋಮವಾರ ಸಂಜೆ 6:30ಕ್ಕೆ ಮುಂಬೈನಿಂದ ಮಂಗಳೂರಿಗೆ ಬಂದ ಇಂಡಿಗೋ‌ ವಿಮಾನದಲ್ಲಿ ಹೈಡ್ರೋಪೋನಿಕ್ ಗಾಂಜಾ ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ‌ ಬಂದ ಹಿನ್ನೆಲೆ ವಿಮಾನ‌ ನಿಲ್ದಾಣ ಸಿಬ್ಬಂದಿ ಆಧರಿಸಿ ವಿಮಾನ‌ ನಿಲ್ದಾಣದ

ಉಡುಪಿ: ಆರ್‌ಟಿಓ ಅಧಿಕಾರಿ ಮನೆಗೆ ಲೋಕಾಯುಕ್ತ ದಾಳಿ: ದಾಖಲೆಗಳ ಪರಿಶೀಲನೆ

ಉಡುಪಿ ಜಿಲ್ಲಾ ರಸ್ತೆ ಸಾರಿಗೆ ಕಚೇರಿಯ ಅಧಿಕಾರಿ ಲಕ್ಷ್ಮೀನಾರಾಯಣ ಪಿ. ನಾಯಕ್ ಅವರ ಮನೆಗೆ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಬೆಳಗ್ಗೆ ದಾಳಿ ನಡೆಸಿದ್ದಾರೆ. ಲಕ್ಷ್ಮೀನಾರಾಯಣ ಪಿ. ನಾಯಕ್ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾದವರಾಗಿದ್ದು, ಪ್ರಸ್ತುತ ಉಡುಪಿಯಲ್ಲಿಆರ್‌ಟಿಓ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾರ್ವಜನಿಕರಿಂದ ಬಂದ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಅವರ ಮನೆ ಮತ್ತು ಸಂಬಂಧಿಕರ ನಿವಾಸಗಳಲ್ಲಿ ಶೋಧ ನಡೆಸಿದ್ದಾರೆ

ರಾಜ್ಯ ಮಟ್ಟದ ವೇಯ್ಟ್ ಲಿಫ್ಟಿಂಗ್ ಸ್ಪರ್ಧೆ:ಆಳ್ವಾಸ್ ಶಾಲೆಯ ಐವರು ಕ್ರೀಡಾಪಟುಗಳು ರಾಷ್ಟ್ರಮಟ್ಟಕ್ಕೆ

ಮೂಡುಬಿದಿರೆ: ಹುಬ್ಬಳ್ಳಿಯ ಸೇಂಟ್ ಪೌಲ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ರಾಜ್ಯ ಮಟ್ಟದ 17 ವಯೋಮಿತಿಯ ಬಾಲಕ ಬಾಲಕಿಯರ ವೇಯ್ಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಆಳ್ವಾಸ್ ಶಾಲೆಯ ಕ್ರೀಡಾಪಟುಗಳು ಐದು ಚಿನ್ನ ಹಾಗೂ ಒಂದು ಬೆಳ್ಳಿ ಪದಕದೊಂದಿಗೆ ಒಟ್ಟು ಆರು ಪದಕಗಳನ್ನು ಪಡೆದು ದಕ್ಷಿಣ ಕನ್ನಡ ಜಿಲ್ಲೆ ಸಮಗ್ರ ಪ್ರಶಸ್ತಿಯನ್ನು ಪಡೆಯುವಲ್ಲಿ ಮಹತ್ವದ ಕೊಡುಗೆ ನೀಡಿದರು.ಫಲಿತಾಂಶ : 58 ಕೆಜಿ ವಿಭಾಗದಲ್ಲಿ – ಸ್ಪೂರ್ತಿ (ದ್ವಿತೀಯ), 77 ಕೆಜಿ ವಿಭಾಗದಲ್ಲಿ

ಮೂಡುಬಿದಿರೆ : ಗ್ಯಾಂಗ್ ರೇಪ್ ನಿಂದ ಇಬ್ಬರು ಯುವತಿಯರನ್ನು ರಕ್ಷಿಸಿದ ಪೊಲೀಸರು

ಮೂಡುಬಿದಿರೆ : ನಿಡ್ಡೋಡಿಯ ಮನೆಯೊಂದರಲ್ಲಿ ನಾಲ್ಕು ಮಂದಿ ಯುವಕರೊಂದಿಗೆ ಇಬ್ಬರು ಅಪ್ರಾಪ್ತ ಬಾಲಕಿಯರಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ ಮತ್ತು ಅವರ ತಂಡವು ದಾಳಿ ನಡೆಸಿ ಸಂಭಾವ್ಯ ಗ್ಯಾಂಗ್ ರೇಪ್ ನಿಂದ ಬಾಲಕಿಯರನ್ನು ರಕ್ಷಿಸಿದ ಘಟನೆ ಸೋಮವಾರ ನಡೆದಿದೆ. ಈ ಪ್ರಕರಣದ ಆರೋಪಿಗಳಾಗಿರುವ ನಿಡ್ಡೋಡಿಯ ಮಹೇಶ, ಕಟೀಲು ಪರಿಸರದ ಯಜ್ಞೇಶ್,ದಿಲೀಪ್ ಹಾಗೂ ಶ್ರೀಕಾಂತ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಕಾರ್ಕಳ ಮಾಜಿ ಶಾಸಕ ದಿ. ಗೋಪಾಲ ಭಂಡಾರಿ ಅವರ ಪುತ್ರ ಸುದೀಪ್ ಭಂಡಾರಿ ಆತ್ಮಹತ್ಯೆಗೆ ಶರಣು

ಹೆಬ್ರಿ,ಅ,14: ಮಾಜಿ ಶಾಸಕ ದಿ.ಗೋಪಾಲ ಭಂಡಾರಿಯವರ ಪುತ್ರ ಸುದೀಪ್ ಭಂಡಾರಿ (48) ಬ್ರಹ್ಮಾವರ ಸಮೀಪದ ಬಾರ್ಕೂರು ಬಳಿ ರೈಲು ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ. ಸುದೀಪ್ ಭಂಡಾರಿಯವರು ಜೀವನ ನಿರ್ವಹಣೆಗೆ ಹೆಬ್ರಿಯಲ್ಲಿ ವೈನ್ಸ್‌ ಶಾಪ್ ನಡೆಸಿಕೊಂಡಿದ್ದರು. ಅತ್ಯಂತ ಸರಳ ವ್ಯಕ್ತಿತ್ವದ ಸುದೀಪ್ ಭಂಡಾರಿಯವರ ಆತ್ಮಹತ್ಯೆ ಸುದ್ದಿ ಕೇಳಿ ಹೆಬ್ರಿ ಪರಿಸರದ ಜನರ

ರಾಜ್ಯ ಮಟ್ಟದ 17 ವಯೋಮಿತಿಯ ಬಾಲಕ ಬಾಲಕಿಯರ ವೇಯ್ಟ್ ಲಿಫ್ಟಿಂಗ್ ಸ್ಪರ್ಧೆ 2025-26 ಆಳ್ವಾಸ್ ಶಾಲೆಯ ಐವರು ಕ್ರೀಡಾಪಟುಗಳು ರಾಷ್ಟ್ರಮಟ್ಟಕ್ಕೆ

ಮೂಡುಬಿದಿರೆ: ಹುಬ್ಬಳ್ಳಿಯ ಸೇಂಟ್ ಪೌಲ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ರಾಜ್ಯ ಮಟ್ಟದ 17 ವಯೋಮಿತಿಯ ಬಾಲಕ ಬಾಲಕಿಯರ ವೇಯ್ಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಆಳ್ವಾಸ್ ಶಾಲೆಯ ಕ್ರೀಡಾಪಟುಗಳು ಐದು ಚಿನ್ನ ಹಾಗೂ ಒಂದು ಬೆಳ್ಳಿ ಪದಕದೊಂದಿಗೆ ಒಟ್ಟು ಆರು ಪದಕಗಳನ್ನು ಪಡೆದು ದಕ್ಷಿಣ ಕನ್ನಡ ಜಿಲ್ಲೆ ಸಮಗ್ರ ಪ್ರಶಸ್ತಿಯನ್ನು ಪಡೆಯುವಲ್ಲಿ ಮಹತ್ವದ ಕೊಡುಗೆ ನೀಡಿದರು. ಫಲಿತಾಂಶ : 58 ಕೆಜಿ ವಿಭಾಗದಲ್ಲಿ – ಸ್ಪೂರ್ತಿ (ದ್ವಿತೀಯ), 77 ಕೆಜಿ ವಿಭಾಗದಲ್ಲಿ

ಯುವ ವಾಹಿನಿ ಪಡುಬಿದ್ರಿ ಘಟಕ ಬಿಲ್ಲವ “ಮಹಿಳಾ ಕ್ರಿಕೆಟ್ ಪ್ರೀಮಿಯರ್ ಲೀಗ್” ಪೋಸ್ಟರ್ ಬಿಡುಗಡೆ

ಪಡುಬಿದ್ರಿ:ಯುವ ವಾಹಿನಿ ಪಡುಬಿದ್ರಿ ಘಟಕದ ಸಾರಥ್ಯದಲ್ಲಿ 2026ರ ಜನವರಿ 31ಹಾಗೂ ಫೆಬ್ರವರಿ 01ನೇ ತಾರೀಕು ಅಂತರ್ ರಾಷ್ಟ್ರೀಯ ಮಟ್ಟದ ಬಿಲ್ಲವ ಮಹಿಳಾ ಕ್ರಿಕೆಟ್ ಪ್ರೀಮಿಯರ್ ಲೀಗ್ ಹೆಜಮಾಡಿಯ ರಾಜೀವಗಾಂಧಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಅದರ ಪೂರ್ವಬಾವಿಯಾಗಿ ಅದರ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಪಡುಬಿದ್ರಿ ಬಿಲ್ಲವರ ಸಂಘದ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕ್ರಿಕೆಟ್ ತರಬೇತುದಾರರಾದ ವೈ.ಉದಯ ಕುಮಾರ್