ಬಡಾಗ್ರಾಮ ಪಂಚಾಯತ್ 11 ದಿನಗಳ ಉಚಿತ ಫೂಟ್ ಪಲ್ಸ್ ಥೆರಪಿಗೆ ಚಾಲನೆ

ಪಡುಬಿದ್ರಿ : ಉಚ್ಚಿಲ ಬಡಾಗ್ರಾಮ ಪಂಚಾಯತ್ ಮತ್ತು ಬಾಡಿಫೈ ಸಹಯೋಗದಲ್ಲಿ ೧೧ ದಿನಗಳ ಉಚಿತ ಫೂಟ್ ಪಲ್ಸ್ ಥೆರಪಿಗೆ ಪಂಚಾಯತ್ ಸಭಾಭವನದಲ್ಲಿ ಅಧ್ಯಕ್ಷರಾದ ಶಿವಕುಮಾರ್ ಮೆಂಡನ್ ದೀಪ ಬೆಳಗಿಸಿ ಚಾಲನೆಯನ್ನು ನೀಡಿ ಶುಭವನ್ನು ಹಾರೈಸಿದರು.

ಬಾಡಿ ಫೈ ಸಂಸ್ಥೆ ಮುಖ್ಯಸ್ಥ ನರೇಂದ್ರ ಕುಂದಾಪುರ ಮಾತನಾಡಿ, ಯಾವುದೇ ಔಷಧವಿಲ್ಲದೆ ರಕ್ತ ಸಂಚಾರ ಮತ್ತು ನರ ಸಂಬಂಧಿತ ಕಾಯಿಲೆಗೆ ಉಚಿತ ಥೆರಪಿ ಸಹಾಯಕ. ಈ ಥೆರಪಿಯ ಮೂಲಕ ಪಾದದಲ್ಲಿರುವ ಆಕ್ಯೂಪ್ರೆಷರ್ ಪಾಯಿಂಟ್‌ನ್ನು ಸಕ್ರಿಯಗೊಳಿಸುವ ಮೂಲಕ ೧೨೦ಕ್ಕೂ ಅಧಿಕ ಕಾಯಿಲೆಗೆ ಉಪಯುಕ್ತವಾಗಿದ್ದು, ಮುಖ್ಯವಾಗಿ ಶುಗರ್, ನಿದ್ರಾಹೀನತೆ, ಥೈರಾಯ್ಡ್, ಪಾದದ ಉರಿ, ಬೆನ್ನು ನೋವು, ಮಂಡಿ ನೋವು, ವೆರಿಕೋಸ್ ಸಮಸ್ಯೆ ಇತ್ಯಾದಿಗಳಿಗೆ ಅನುಕೂಲವಾಗಲಿದೆ ಎಂದರು.
ಈ ಸಂದರ್ಭ ಪಿಡಿಒ ಸತೀಶ್, ಲೆಕ್ಕಸಹಾಯಕಿ ನಿರ್ಮಲಾ ಶೆಟ್ಟಿ, ಗ್ರಾ.ಪಂ. ಸಿಬಂದಿಗಳಾದ ಚಂದ್ರಾವತಿ ವಿ. ಆಚಾರ್ಯ, ಮಲ್ಲಿಕಾ, ಶಶಿಕಾಂತ್, ಬಾಡಿ ಫೈ ಸಂಸ್ಥೆಯ ಸಿಬಂದಿ ಉಮೇಶ್ ಉಪಸ್ಥಿತರಿದ್ದರು.