ಭದ್ರಾವತಿಯ ಯುವಕನ ಪತ್ತೆಗಾಗಿ ತೀವ್ರ ಹುಡುಕಾಟ: ಡ್ರೋನ್ ಕ್ಯಾಮರಾದಿಂದ ಶೋಧ ಕಾರ್ಯ
ಬೈಂದೂರು ಸಮೀಪದ ಕೊಲ್ಲೂರಿನ ಅರಶಿನಗುಂಡಿ ಎಂಬಲ್ಲಿ ಜಲಪಾತದ ಹರಿಯುವ ನೀರಿನಲ್ಲಿ ನಾಪತ್ತೆಯಾದ ಭದ್ರಾವತಿಯ ಯುವಕನ ಪತ್ತೆಗಾಗಿ ಡ್ರೋನ್ ಕ್ಯಾಮೆರಾ ಮೂಲಕ ಶೋಧ ಕಾರ್ಯ ನಡೆಯುತ್ತಿದೆ.
ಭಾನುವಾರ ಮಧ್ಯಾಹ್ನ ಕೊಲ್ಲೂರು ಸಮೀಪದ ಅರಸಿನಗುಂಡಿ ಜಲಪಾತದಲ್ಲಿ ಕಾಲುಜಾರಿ ಬಿದ್ದು ನಾಪತ್ತೆಯಾಗಿರುವ ಭದ್ರಾವತಿ ತಾಲ್ಲೂಕಿನ ಸುಣ್ಣದ ಹಳ್ಳಿಯ ಕೆ.ಎಚ್.ನಗರದ ಯುವ ಉದ್ಯಮಿ ಶರತ್ ಕುಮಾರ್ ಅವರ ಪತ್ತೆ ಕಾರ್ಯ ನಿನ್ನ ಮತ್ತು ಇವತ್ತು ಡ್ರೋನ್ ಕ್ಯಾಮೆರಾದ ಮೂಲಕ ಹುಡುಕಾಟ ಬರದಿಂದ ಸಾಗಿದೆ. ಎಸ್‌ಡಿಆರ್‌ಎಫ್ ತಂಡ, ಪೊಲೀಸ್, ಅಗ್ನಿಶಾಮಕ ದಳ, ಅರಣ್ಯ ಇಲಾಖೆ ಹಾಗೂ ಸ್ಥಳೀಯರು ಸೇರಿದಂತೆ ಸುಮಾರು ೫೦ ಮಂದಿ ಶೋಧ ಕಾರ್ಯ ಮುಂದುವರಿಸಿದರು. ನೀರಿನ ರಭಸ ಹೆಚ್ಚಾಗಿರುವುದರಿಂದ ಕೆಲವು ಕಡೆಗಳಿಗೆ ಹೋಗಲು ಕಷ್ಟವಾಗುತ್ತದೆ ಈ ಕಾರಣಕ್ಕಾಗಿ ಕಾರ್ಯಾಚರಣೆಗೆ ಡೋನ್ ಬಳಕೆ ಮಾಡಲಾಯಿತು. ಸ್ಥಳೀಯರು ಹಾಗೂ ರಕ್ಷಣಾ ಇಲಾಖೆ ಸಿಬ್ಬಂದಿ ಸಹಕಾರದಿಂದ ನಾಪತ್ತೆಯಾದ ಯುವಕನ ಪತ್ತೆಗಾಗಿ ನಿರಂತರವಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಸಂತೋಷ್ ಕಾಯ್ಕಿಣಿ ಸರ್ಕಲ್ ಇನ್‌ಸ್ಪೆಕ್ಟರ್ ಬೈಂದೂರು ಹೇಳಿದರು.