ಪಡುಬಿದ್ರಿ: ಶಾಲಾ ಸೆಕ್ಯೂರಿಟಿ ಗಾರ್ಡ್ ಬಾವಿಗೆ ಹಾರಿ ಆತ್ಮಹತ್ಯೆ

ಎರ್ಮಾಳು ಬಡಾ ದೇವಸ್ಥಾನ ಬಳಿಯ ನಿವಾಸಿ ಅದಮಾರು ವಿದ್ಯಾಸಂಸ್ಥೆಯ ಸೆಕ್ಯೂರಿಟಿ ಗಾರ್ಡ್ ಆಗಿ ಕಾರ್ಯನಿರ್ವಾಹಿಸುತ್ತಿದ್ದ ವ್ಯಕ್ತಿ ಇಂದು ಮುಂಜಾನೆ ಕುಂಜೂರಿನ ಮನೆಯೊಂದರ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  

ಆತ್ಮಹತ್ಯೆ ಮಾಡಿಕೊಂಡವರು ನವೀನ್ ಬಂಗೇರ (53), ಅವಿವಾಹಿತರಾಗಿದ್ದ ಇವರು ಮನೆಯಲ್ಲಿ ಏಕಾಂಗಿಯಾಗಿ ವಾಸವಾಗಿದ್ದು ಕಳೆದ ಸುಮಾರು ಮೂರು ವರ್ಷಗಳಿಂದ ಅದಮಾರು ವಿದ್ಯಾಸಂಸ್ಥೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕರ್ತವ್ಯ ನಿರ್ವಾಹಿಸುತ್ತಿದ್ದು, ರಾತ್ರಿ ಹೊತ್ತಲ್ಲಿ ಕರ್ತವ್ಯದಲ್ಲಿದ್ದು ಮುಂಜಾನೆ ನಾಲ್ಕು ಗಂಟೆಯ ಸುಮಾರಿಗೆ ಶಾಲಾ ಅಡುಗೆಯವರನ್ನು ಗೇಟ್ ತೆಗೆದು ಒಳ ಬಿಟ್ಟಿದ್ದರು.  ಕುಡಿತದ ಛಟ ಹೊಂದಿದ್ದ ಇವರು ಸುಮಾರು ಐದು ಮೂವತ್ತರ ಸುಮಾರಿಗೆ ಶಾಲೆಗೆ ಸಮೀಪದ ಕುಂಜೂರು ಪ್ರದೇಶದಲ್ಲಿ ಬೊಬ್ಬೆ ಹಾಕಿಕೊಂಡು ಒಡಾಟ ನಡೆಸಿದ ಅವರು ಕೈಯಲ್ಲಿದ್ದ ಕತ್ತಿ ಪರ್ಸ್‌ನ್ನು ಕುಂಜೂರಿನ ಪದ್ಮಾವತಿ ಎಂಬರ ಮನೆಯ ಬಾವಿಯ ದಂಡೆಯಲ್ಲಿಟ್ಟು ಮರೆಯಾಗಿದ್ದರು. ಸ್ಥಳಕ್ಕೆ ಬಂದ ಪಡುಬಿದ್ರಿ ಪೊಲೀಸರು ಸುತ್ತಲ ಪ್ರದೇಶದಲ್ಲಿ ಹುಡುಕಾಟ ನಡೆಸಿದಾಗ ಪಕ್ಕದ ಹಾಡಿಯಲ್ಲಿ ಮೊಬೈಲ್ ಪತ್ತೆಯಾಗಿದೆ. ಸಂಶಯಗೊಂಡ ಪೊಲೀಸರು ಉಡುಪಿ ಅಗ್ನಿಶಾಮಕ ದಳಕ್ಕೆ ಕರೆಮಾಡಿ ಅವರನ್ನು ಕರೆಯಿಸಿ ಹುಡುಕಾಟ ನಡೆಸಿದಾಗ ಕತ್ತಿ ಪರ್ಸ್‌ಗಳಿದ್ದ  ದಂಡೆಯ ಬಾವಿಯಲ್ಲಿ ಶವ ಪತ್ತೆಯಾಗಿದೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಗಿದೆ.    

Related Posts

Leave a Reply

Your email address will not be published.