ಬೈಕಂಪಾಡಿ : ವಲಸೆ ಕೂಲಿ ಕಾರ್ಮಿಕನ ನಿಗೂಢ ಸಾವು
ಬಹು ಕಾಲದಿಂದ ಮಂಗಳೂರು ಬೈಕಂಪಾಡಿಯಲ್ಲಿರುವ ಎಪಿಎಂಸಿ ಯಾರ್ಡ್‍ನಲ್ಲಿ ಕೂಲಿಕಾರ್ಮಿಕನಾಗಿದ್ದ ಒಡಿಶಾ ಮೂಲದ ವ್ಯಕ್ತಿಯ ಮೃತ ದೇಹವು ಅನುಮಾನಾಸ್ಪದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮೃತ ವ್ಯಕ್ತಿಯು ಒಡಿಶಾ ರಾಜ್ಯದ ಜಾವಪುರ ಜಿಲ್ಲೆಯ 44ರ ವಲಸೆ ಕಾರ್ಮಿಕ ರಶಿಂರಂಜನ್ ಎಂದು ತಿಳಿದುಬಂದಿದೆ. ಕಾಲಿನ ಮಂಡಿ ಬಳಿ ಗಾಯದ ಗುರುತುಗಳಿದ್ದು ಲಘು ವಾಹನ ಗುದ್ದಿ ಸಾವು ಉಂಟಾಗಿರಬಹುದು ಎಂದು ಅನುಮಾನಾಸ್ಪದ ಪ್ರಕರಣವನ್ನು ದಾಖಲಿಸಲಾಗಿದೆ.
ಪಣಂಬೂರು ಮತ್ತು ಮಂಗಳೂರು ಸಂಚಾರ ಉತ್ತರ ಠಾಣೆಗಳ ಪೋಲೀಸರು ಸ್ಥಳ ಮಹಜರು ನಡೆಸಿ ತನಿಖೆ ಆರಂಭಿಸಿದ್ದಾರೆ.