ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗದಿನಾಚರಣೆ

ವಿಟ್ಲ: ಜೀವ-ದೇವನ ಸಂಬಂಧ ಯೋಗದಲ್ಲಿದೆ. ಬದುಕನ್ನು ಹೇಗೆ ರೂಪಿಸಬೇಕು ಎನ್ನುವುದನ್ನು ನಾವು ತಿಳಿದುಕೊಳ್ಳುವುದುಅಗತ್ಯವಿದೆ. ಶಿಸ್ತು ಸ್ವಚ್ಛತೆ ಇದ್ದಲ್ಲಿ ಸದಾಚಾರ ಸಂಪನ್ನತೆಯಾಗುತ್ತದೆ. ಮನಸ್ಸಿನ ಸ್ವಾಸ್ಥ್ಯ ಕ್ಕೆ ಯೋಗ ಅಗತ್ಯ. ಬಾಲವಿಕಾಸ ವಿದ್ಯಾಸಂಸ್ಥೆ ವ್ಯಕ್ತಿ ವಿಕಾಸದ ಜೊತೆಗೆ ರಾಷ್ಟ್ರ ವಿಕಾಸಕ್ಕೆ ನಾಂದಿಯಾಗಲಿದೆ. ಸತ್ಪ್ರಜೆ ಎನ್ನುವ ನಾಣ್ಯ ಚಲಾವಣೆ ಯಾಗಲು ಪೋಷಕರು ಹಾಗೂ ಶಿಕ್ಷಕರು ಜೊತೆಗಿರಬೇಕು ಎಂದು ಒಡಿಯೂರು ಶ್ರೀಗುರುದೇವದತ್ತಸಂಸ್ಥಾನಜ ಶ್ರೀಗುರುದೇವಾನಂದಸ್ವಾಮೀಜಿ ಯವರು ಹೇಳಿದರು.
ಅವರು ಜೂ.21ರಂದು ಮಾಣಿ ವಿದ್ಯಾನಗರ ಪಾಳ್ಯದಲ್ಲಿರು ವ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗದಿನಾಚರಣೆ ಪ್ರಯುಕ್ತ ಶಾಲೆಯ ದಿ|ಪಾಳ್ಯಅನಂತರಾಮರೈ ವೇದಿಕೆಯಲ್ಲಿ ನಡೆದ ಸಭಾಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಈಗಿನ ಕಾಲಘಟ್ಟಕ್ಕೆ ತಕ್ಕುದಾದ ಒಂದು ಸುಸಜ್ಜಿತವಾದ ವ್ಯವಸ್ಥೆ ಈ ಶಿಕ್ಷಣ ಸಂಸ್ಥೆಯಲ್ಲಿರುವುದು ಸಂತಸತಂದಿದೆ. ಪ್ರಹ್ಲಾದರಿಗೆ ರಾಷ್ಟ್ರೀಯ ಪ್ರಜ್ಞೆ ಹುಟ್ಟಿದ್ದ ರಿಂದ ಈ ಸಂಸ್ಥೆಯ ಉಗಮವಾಗಿದೆ. ಬಾಲವಿಕಾಸ ಶಿಕ್ಷಣ ಸಂಸ್ಥೆ ಇತರರಿಗೆ ಮಾದರಿಯಾಗಿದೆ. ನಾನು ಎಂಬುದನ್ನು ಬಿಟ್ಟು ನಮ್ಮದು ಎನ್ನುವುದು ನಮ್ಮಲ್ಲಿಬರಬೇಕು. ನಮ್ಮ ಮನಸ್ಸಿನಲ್ಲಿ ಶಾಂತಿ ಕಾಪಾಡುವ ಕೆಲಸವಾಗಬೇಕು. ಸಂಸ್ಥೆಯಿಂದ ಮಕ್ಕಳನ್ನು ಭಾರತದ ಸಾರಥಿಯನ್ನಾಗಿ ಮಾಡುವ ಕೆಲಸವಾಗಲಿ. ಮಕ್ಕಳಲ್ಲಿ ಸಂಸ್ಕೃತಿಯ ಬೀಜಬಿತ್ತಬೇಕು. ಆಗಸದೃಢ ಸಮಾಜ ನಿರ್ಮಾಣವಾಗಲು ಸಾಧ್ಯ. ಸರಿಯಾದ ಆಲೋಚನೆ ಇದ್ದರೆ ರಾಷ್ಟ್ರ ನಿರ್ಮಾಣ ಸಾಧ್ಯ

ಆದರ್ಶರಾಷ್ಟ್ರ ನಿರ್ಮಾಣದಲ್ಲಿ ನಮ್ಮಪಾತ್ರವೇನು ಎನ್ನುವುದನ್ನು ಅರಿಯುವ ಕೆಲಸವಾಗಬೇಕು. ಮನುಷ್ಯನ ಮನಸ್ಸಿನಲ್ಲಿ ಸ್ವಚ್ಛತೆಯ ಅಗತ್ಯವಿದೆ. ವಿಕಾಸ ಎನ್ನುವುದು ಅದ್ಭುತಶಬ್ದ. ಸಂಸ್ಥೆಇನ್ನಷ್ಟುವಿಕಾಸಗೊಳ್ಳಲಿಎಂದರು. ಬಾಲವಿಕಾಸ ಟ್ರಸ್ಟ್ನ ಅಧ್ಯಕ್ಷರಾದ ಪ್ರಹ್ಲಾದ್ಜೆ. ಶೆಟ್ಟಿರವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ ಗುರುವಿನ ಸಂದೇಶದಿಂದ ವಿದ್ಯಾರ್ಥಿಗಳ ಬಾಳುಬೆಳಗಲಿ. ಶಿಸ್ತು-ಸಂಯಮ ಇದ್ದಲ್ಲಿ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮವ್ಯಕ್ತಿಯಾಗಲುಸಾಧ್ಯ. ಸಂಸ್ಥೆವಿದ್ಯಾರ್ಥಿಗಳ ಜೀವನಕ್ಕೆ ದಾರಿದೀಪವಾಗಲಿ. ವಿದ್ಯಾರ್ಥಿಗಳ ಕನಸು ನನಸಾಗುವದಿನ ಈ ಯೋಗ ದಿನವಾಗಲಿ ಎಂದರು.

ಟ್ರಸ್ಟ್ನ ಉಪಾಧ್ಯಕ್ಷರಾದ ಯತಿರಾಜ್‍ಎನ್., ಕಾರ್ಯದರ್ಶಿ ಮಹೇಶ್ ಜೆ ಶೆಟ್ಟಿ, ಶಾಲೆಯ ಶಿಕ್ಷಕರಕ್ಷಕ ಸಂಘದ ಅಧ್ಯಕ್ಷರಾದ ಕಸ್ತೂರಿಪಿ. ಶೆಟ್ಟಿ, ವೈದ್ಯರಾದಮನೋಹರರೈ, ಸಂಸ್ಥೆಯ ಹಿತೈಷಿ ಉಗ್ಗಪ್ಪಶೆಟ್ಟಿ ಕೊಂಬಿಲ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಮಕ್ಕಳು ಪ್ರಾರ್ಥಿಸಿದರು. ಬಾಲವಿಕಾಸ ಟ್ರಸ್ಟ್ನ ಅಧ್ಯಕ್ಷರಾದ ಪ್ರಹ್ಲಾದ್ಜೆ. ಶೆಟ್ಟಿ ಹಾಗೂ ಅವರ ಪತ್ನಿ ಸುಜಯಪಿ.ಶೆಟ್ಟಿರವರು ಸ್ವಾಮೀಜಿಗೆ ಫಲಪುಷ್ಪ ನೀಡಿ ಗೌರವಿಸಿದರು.ಶಾಲಾ ಆಡಳಿತಾಧಿಕಾರಿ ರವೀಂದ್ರದರ್ಬೆ, ಸ್ವಾಗತಿಸಿದರು. ಸಹಶಿಕ್ಷಕಿಯರಾದ ಸುಧಾಎನ್.ರಾವ್ಹಾಗೂಸುಪ್ರಿಯಾಡಿ.ಕಾರ್ಯಕ್ರಮ ನಿರೂಪಿಸಿದರು.ಶಾಲಾಮುಖ್ಯಶಿಕ್ಷಕಿ ವಿಜಯಲಕ್ಷ್ಮಿವಿ. ಶೆಟ್ಟಿವಂದಿಸಿದರು.