ಸಿದ್ಧಕಟ್ಟೆಯಲ್ಲಿ ಆರ್ಥಿಕ ಅರಿವು ಜಾಗೃತಿ

ಬಂಟ್ವಾಳ: ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕು ವತಿಯಿಂದ ನಬಾರ್ಡ್ ಸಹಯೋಗದೊಂದಿಗೆ “ಆರ್ಥಿಕ ಅರಿವು ಜಾಗೃತಿ” ಕಾರ್ಯಕ್ರಮ ಸಿದ್ಧಕಟ್ಟೆ ಶಾಖೆಯಲ್ಲಿ ನಡೆಯಿತು. ಸಿದ್ಧಕಟ್ಟೆ ಸಿ.ಎ.ಬ್ಯಾಂಕು ಕಾರ್ಯನಿರ್ವಹಣಾಧಿಕಾರಿ ಆರತಿ ಶೆಟ್ಟಿ ಮತ್ತು ನಿರ್ದೇಶಕಿ ಅರುಣಾ ಶೆಟ್ಟಿ ಕಾರ್ಯಾಗಾರ ಉದ್ಘಾಟಿಸಿ ಶುಭ ಹಾರೈಸಿದರು. ಸಿದ್ಧಕಟ್ಟೆ ಶಾಖಾ ವ್ಯವಸ್ಥಾಪಕಿ ಜ್ಯೋತಿ ಶರ್ಮಾ ಅಧ್ಯಕ್ಷತೆ ವಹಿಸಿದ್ದರು. ಡಿಸಿಸಿ ಬ್ಯಾಂಕು ಸಿಬ್ಬಂದಿ ರಾಜೀವ್ ಕಕ್ಯಪದವು ಬ್ಯಾಂಕ್ ಸ್ವೀಕರಿಸುತ್ತಿರುವ ಠೇವಣಿಗಳು, ಸಾಲ ಸೌಲಭ್ಯಗಳು, ಅಪಘಾತ ವಿಮಾ ಸೌಲಭ್ಯ ಹಾಗೂ ಸರಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಬ್ಯಾಂಕ್ ಸಿಬ್ಬಂದಿ ರಂಜಿತಾ ಬಿ.ಎಂ.ಸ್ಚಾಗತಿಸಿ, ಸಾಯಿನಾಥ್ ವಂದಿಸಿದರು. ಪದ್ಮನಾಭ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶಾಖಾ ಸಿಬ್ಬಂದಿಗಳು ಹಾಗೂ ನವೋದಯ ಪ್ರೇರಕರು ಸಹಕರಿಸಿದರು.

Related Posts

Leave a Reply

Your email address will not be published.