ಬಂಟ್ವಾಳ : 170ಕ್ಕೂ ಹೆಚ್ಚು ಗಡಿಯಾರಗಳಿರುವ ಮನೆ

ಮನುಷ್ಯನ ಜೀವನದಲ್ಲಿ ಸಮಯಕ್ಕೆ ಎಷ್ಟು ಮಹತ್ವವಿದೆಯೋ, ಸಮಯವನ್ನು ಸೂಚಿಸುವ ಗಡಿಯಾರಕ್ಕೂ ಅಷ್ಟೇ ಪ್ರಾಮುಖ್ಯತೆಯಿದೆ. ಇಂದಿನ ಯುಗದಲ್ಲಿ ಕನಿಷ್ಟ ಒಂದಾದರೂ ಗಡಿಯಾರ ಇಲ್ಲದ ಮನೆ ಇರೋದು ಅಪರೂಪವೇ ಅಲ್ಲವೇ. ಆದರೆ ಈ ಮನೆಯಲ್ಲಿ ಮಾತ್ರ ಎಲ್ಲಿ ನೋಡಿದರೂ ಅಲ್ಲಿ ಗಡಿಯಾರ. 170 ಕ್ಕಿಂತಲೂ ಹೆಚ್ಚು ಗಡಿಯಾರಗಳಿರುವ ಈ ಮನೆ ಒಂದು ಗಡಿಯಾರಗಳ ಮ್ಯೂಸಿಯಂ.

ಹೌದು ಇದು ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕುಡ್ತಮುಗೇರು ಸಮೀಪದ ಶಶಿ ಭಟ್ ಪಡಾರ್ ಎಂಬವರಿಗೆ ಸೇರಿದ ಮನೆ. ಮನೆ ಅನ್ನೋದಕ್ಕಿಂತ ಇದನ್ನು ಗಡಿಯಾರಗಳ ಮ್ಯೂಸಿಯಂ ಎಂದು ಕರೆದರೆ ತಪ್ಪಿಲ್ಲ. ಹೌದು 170 ಕ್ಕೂ ಮಿಕ್ಕಿದ 150 ವರ್ಷಕ್ಕೂ ಹಳೆಯ ಆಂಟಿಕ್ ಗಡಿಯಾರಗಳ ಕಲೆಕ್ಷನ್ಸ್ ಇವರ ಬಳಿಯಿದೆ. ಕಳೆದ 15 ವರ್ಷಗಳ ಹಿಂದೆ ಹಳೆಯ ಮಾಡಲ್ ನ ಗಡಿಯಾರಗಳನ್ನು ಮನೆಯಲ್ಲಿ ಜೋಡಿಸಿಡುವ ಕಾಯಕ ಆರಂಭಿಸಿದ ಶಶಿ ಭಟ್ ಬಳಿ ಇದೀಗ ಅತೀ ಅಪರೂಪದ 170 ಕ್ಕೂ ಮಿಕ್ಕಿದ ಗಡಿಯಾರಗಳಿವೆ.

7 ಅಡಿ ಉದ್ದದ ಗ್ರ್ಯಾಂಡ್ ಫಾದರ್ ಕ್ಲಾಕ್ ನಿಂದ ಹಿಡಿದು 6 ಅಡಿ ಉದ್ದದ ಮದರ್ ಕ್ಲಾಕ್ ಜೊತೆಗೆ ಅತೀ ಸಣ್ಣ ಕೂ ಕೂ ಕ್ಲಾಕ್ ತನಕದ ಪ್ರಪಂಚದೆಲ್ಲೆಡೆಯ ವೆರೈಟಿ ಗಡಿಯಾರಗಳು ಇವರ ಬಳಿಯಿದೆ. ವಾರಕ್ಕೊಮ್ಮೆ ಕೀ ಕೊಡುವ ಗಡಿಯಾರದಿಂದ ಹಿಡಿದು ವರ್ಷಕ್ಕೊಮ್ಮೆ ಕೀ ಕೊಟ್ಟು ಚಲಿಸುವ ಗಡಿಯಾರಗಳು ಇಲ್ಲಿವೆ. ಗಡಿಯಾರಗಳಲ್ಲದೆ ಅಪರೂಪದ ಪೆಟ್ರೋಮ್ಯಾಕ್ಸ್ ದೀಪ, ತಾಮ್ರ,ಹಿತ್ತಾಳೆಯ ಚಿಮಿಣಿ ದೀಪಗಳು, ಅಪರೂಪದ ಅಂಬ್ರಲ್ಲಾ ಗಣಪತಿ ವಿಗ್ರಹ, ಪೂಜೆಗೆ ಬಳಸುವ ವಿವಿಧ ಪ್ರಕಾರದ ಹಳೆಯ ಪೂಜಾ ಸಾಮಾಗ್ರಿಗಳು, ಗ್ರಾಮಾಫೆÇೀನ್, ಟೆಲಿಫೆÇೀನ್, ಪಿಯಾನೋ, ಪ್ರಾಚೀನ ಕಾಲದ ಅಡಿಗೆಗೆ ಬಳಸುವ ವಸ್ತುಗಳು ಸೇರಿದಂತೆ ಅಪಾರ ಪ್ರಮಾಣದ ಸಂಗ್ರಹಗಳು ಇವರ ಬಳಿಯಿದೆ.

Related Posts

Leave a Reply

Your email address will not be published.