ಬಿ.ಸಿ ರೋಡ್‌ನಲ್ಲಿ ತುಳು ನಾಟಕೋತ್ಸವ-2022 ಕಾರ್ಯಕ್ರಮ

ಬಂಟ್ವಾಳದ ಬಿ.ಸಿ.ರೋಡ್‌ನ ಸ್ಪರ್ಶಾ ಕಲಾಮಂದಿರಲ್ಲಿ ತುಳು ನಾಟಕೋತ್ಸವ-2022 ನಡೆಯುತ್ತಿದ್ದು, ಆರನೇ ದಿನದಂದು ಅಭಿನಯ ಕಲಾವಿದೆರ್ ಕುಡ್ತಮುಗೇರು ಇವರಿಂದ ನನದಾದ ಒರಿಂಡ್ ನಾಟಕವು ಪ್ರದರ್ಶನಗೊಂಡಿತು.ತುಳು ನಾಟಕ ಕಲಾವಿದರ ಒಕ್ಕೂಟ ಮಂಗಳೂರು ಇದರ ಬಂಟ್ವಾಳ ಘಟಕದ ಆಯೋಜನೆಯಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು ಹಾಗೂ ಕರ್ನಾಟಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದರ ಸಹಯೋಗದೊಂದಿಗೆ ತುಳು ನಾಟಕೋತ್ಸವ 2022ನ್ನು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ನಿರ್ದೇಶಕರು ಸತೀಶ್ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು, ಹೆಚ್ಚಿನ ಕಲಾವಿದರು ನಮ್ಮ ಬಂಟ್ವಾಳದವರು ಎಂದು ಹೇಳಲು ನನಗೆ ಹೆಮ್ಮೆಯಾಗುತ್ತಿದೆ.ಈ ಕಾರ್ಯಕ್ರಮದಿಂದ ನಮ್ಮ ಕಲಾವಿದರಿಗೆ ಇನ್ನಷ್ಟು ಪ್ರೋತ್ಸಹ ಹಾಗೂ ಅವಕಾಶ ಸಿಗಲಿದೆ ಎಂದರು.

thulu natakothsava

ನoತರ ಇಂಚರ, ಕಲಾವಿದರು ಮತ್ತು ಕಲಾ ಪೋಷಕರಾದ ಸದಾಶಿವ ಡಿ.ತುಂಬೆ ಮಾತಾನಾಡಿ, ಸಮಾಜಕ್ಕೆ ಒಂದು ವಿಚಾರವನ್ನು ತಲುಪಿಸಲು ಕೇವಲ ಒಬ್ಬರಿಂದ ಸಾದ್ಯವಿಲ್ಲ. ಹಲಾವಾರು ಮನಸ್ಸು, ವಿಚಾರಗಳು ಒಟ್ಟಾದರೆ ಮಾತ್ರ ಒಂದು ಸಮಾಜಕ್ಕೆ ವಿಷಯವನ್ನು ತಲುಪಿಸಲು ಸಾಧ್ಯ ಎಂದರು.ಈ ಸಂದರ್ಭ ಕಾರ್ಯಕ್ರಮದಲ್ಲಿ ಬಂಟ್ವಾಳ ಮಾಜಿ ಪುರಸಭಾ ಸದಸ್ಯರು ಪ್ರವೀಣ್ ಜಕ್ರಿಬೆಟ್ಟು, ಬಂಟ್ವಾಳ ಪುರಸಭಾ ಸದಸ್ಯರು ಗಂಗಾಧರ್, ಮಾವಿನಕಟ್ಟೆ ಉದ್ಯಮಿಗಳು ಶರಬೇಶ್ವರ ಟ್ರೆಡರ್ಸ್ ರಾಧಕೃಷ್ಣ ರೈ, ದ.ಕ ಜಿಲ್ಲಾ ಶಾಮಿಯಾನ ಮಾಲಕರ ಸಂಘ ಕೋಶಾಧಿಕಾರಿ ಬಾಲಕೃಷ್ಣ, ಮೂಡಬಿದ್ರೆ ತುಳು ನಾಟಕ ಕಲಾವಿದರ ಒಕ್ಕೂಟ ಸಂಚಾಲಕರು ಸುಧಾಕರ್ ಶೆಟ್ಟಿ ಬೆದ್ರ, ಬಂಟ್ವಾಳ ವರ್ತಕರ ಸಹಕಾರಿ ಸಂಘ ನಿರ್ದೇಶಕರು ರಾಜೇಶ್ ಬಿ, ಬಂಟ್ವಾಳ ವರ್ತಕರ ಸಹಕಾರಿ ಸಂಘ ನಿರ್ದೇಶಕರು ರವೀಂದ್ರ ಎಂ, ಬಂಟ್ವಾಳ ವರ್ತಕರ ಸಹಕಾರಿ ಸಂಘ ಪ್ರಬಂಧಕರು ಮೋಹನ್ ಜಿ.ಮೂಲ್ಯ,ಖ್ಯಾತ ಚಲನಚಿತ್ರ ನಟ ಸತೀಶ್ ಬಂದಲೆ ಉಪಸ್ಥಿತರಿದ್ದರು.ಇದೇ ವೇಳೆ ಅಭಿನಯ ಕಲಾವಿದೆರ್ ಕುಡ್ತಮುಗೇರು ಇವರಿಂದ ನನದಾದ ಒರಿಂಡ್ ನಾಟಕವು ಪ್ರದರ್ಶನಗೊಂಡಿತು. ಇದೇ ವೇಳೆ ನಾಟಕೋತ್ಸವದ ಸಹಾಯಾರ್ಥ ಪ್ರತಿ ದಿನ ನಾಟಕ ವೀಕ್ಷಿಸುವವರಿಗೆ ಅದೃಷ್ಟ ಬಹುಮಾನ ಪಡೆಯುವ ಅವಕಾಶವಿದ್ದು, ವೀಕ್ಷಕರೊಬ್ಬರು ಅದೃಷ್ಟ ಬಹುಮಾನವನ್ನು ಪಡೆದುಕೊಂಡರು. ವಿಎನ್‌ಆರ್ ಗೋಲ್ಡ್ ಬಂಟ್ವಾಳ ಇವರಿಂದ ವೀಜೆತರಿಗೆ ಬಹುಮಾನ ವಿತರಿಸಲಾಯಿತು. ಸಮಾರೋಪದ ದಿನದಂದು ತುಳುವೆರ್ ತುಡಾರ್ ಕಲಾ ತಂಡ ಸುರತ್ಕಲ್ ಇವರಿಂದ ಮಧು ಬಂಗೇರ ವಿರಚಿತ ತುಳುನಾಟಕ ‘ಕೊಪ್ಪರಿU’ೆ ಎಂಬ ನಾಟಕವು ಪ್ರದರ್ಶನಗೊಳ್ಳಿದೆ.

Related Posts

Leave a Reply

Your email address will not be published.