ಬೆಳ್ತಂಗಡಿ: ತೆಕ್ಕಾರಿನಲ್ಲಿ ದೇವರ ಪುರಾತನ ಭಗ್ನ ವಿಗ್ರಹ ಪತ್ತೆ

ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದ ಭಟ್ರಭೈಲು ದೇವರ ಗುಡ್ಡೆಯಲ್ಲಿ ಬಾವಿ ನಿರ್ಮಾಣದ ವೇಳೆ 12ನೇ ಶತಮಾನದ್ದೆನ್ನಲಾದ ಶ್ರೀ ಗೋಪಾಲಕೃಷ್ಣ ದೇವರ ವಿಗ್ರಹ ಹಾಗೂ ಇನ್ನಿತರ ಪರಿಕರಗಳು ಪತ್ತೆಯಾಗಿವೆ.

ದೇವಾಲಯವಿತ್ತೆನ್ನಲಾದ ದೇವರಗುಡ್ಡೆ ಪ್ರದೇಶದಲ್ಲಿ ಬೆಳ್ತಂಗಡಿ ಶಾಸಕರ ಮುತುವರ್ಜಿಯಿಂದ ದೇವಾಲಯ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಈ ಸಂಬಂಧ 5 ದಿನಗಳ ಹಿಂದೆ ಸ್ಥಳದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳನ್ನು ನಡೆಸಲಾಗಿತ್ತು. ಜೋತಿಷಿ ವೆಂಕಟರಮಣ ಭಟ್ ಮಾಡಾವು ಅವರು ಮೊತ್ತ ಮೊದಲಾಗಿ ದೇವಾಲಯಕ್ಕೆ ಅಗತ್ಯವಿರುವ ಬಾವಿಯನ್ನು ನಿರ್ಮಿಸುವಂತೆ ಸೂಚಿಸಿ ಸ್ಥಳವನ್ನು ಗುರುತಿಸಿದ್ದರು.

ಅದರಂತೆ ಬಾವಿ ನಿರ್ಮಾಣಕ್ಕೆ ಚಾಲನೆ ನೀಡಿದಾಗ ಸುಮಾರು 15 ಅಡಿ ಆಳದಲ್ಲಿ ಶ್ರೀ ಗೋಪಾಲಕೃಷ್ಣ ದೇವರ ಭಗ್ನ ಸ್ಥಿತಿಯ ವಿಗ್ರಹ, ದೀಪದ ಕಲ್ಲು, ದೇವಾಲ ಯದ ಅಡಿಪಾಯದ ಕುರುಹು, ಪತ್ತೆಯಾಗುವ ಮೂಲಕ ಅಷ್ಟಮಂಗಲ ಪ್ರಶ್ನಾಚಿಂತನೆಯಲ್ಲಿ ಮೂಡಿಬಂದ ವಿಚಾರಗಳು ಸತ್ಯವೆಂದು ದೃಢಪಟ್ಟಿವೆ. ಇಷ್ಟೇ ಅಲ್ಲದೆ ದೇವಾಲಯದ ಸೊತ್ತುಗಳೆನ್ನಲಾದ ಬಹಳಷ್ಟು ಶಿಲಾಮಯ ವಸ್ತುಗಳು ನೇತ್ರಾವತಿ ನದಿಗೆ ಇಳಿಯುವ ಜಾಗದಲ್ಲಿ ಕಾಣಿಸಿವೆ.

Related Posts

Leave a Reply

Your email address will not be published.