ಬೇಲೂರಿನ ಸನ್ಯಾಸಿಹಳ್ಳಿ ಗ್ರಾಮದಲ್ಲಿ ಜೋಳದ ಬೆಳೆ ಹಾನಿ
ಮೂಲ ಮಾಲೀಕರ ಹೆಸರಿನಲ್ಲಿ ಭೂಮಿಯ ಪಹಣಿ ಇನ್ನಿತರ ದಾಖಲೆಗಳಿದ್ದರೂ, ಸರಕಾರದಿಂದ ನನಗೆ ಭೂಮಿ ಮಂಜೂರಾಗಿದೆ ಎಂದು ಹೇಳಿ ಮೂಲ ಭೂ ಮಾಲೀಕ ಬೆಳೆದಿದ್ದ ಜೋಳದ ಬೆಳೆಯನ್ನು ಟ್ರಾಕ್ಟರ್‍ನಿಂದ ಉಳುಮೆ ಮಾಡಿ ಹಾನಿ ಮಾಡಿರುವ ಘಟನೆ ಬೇಲೂರು ತಾಲ್ಲೂಕಿನ ಸನ್ಯಾಸಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಈ ಸಂಬಂಧ ಭೂ ಮಾಲೀಕ ಮಂಜುನಾಥ್ ಪೊಲೀಸರಿಗೆ ದೂರು ನೀಡಿದ್ದಾರೆ. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ದರಖಾಸ್ತಿನ ಮೂಲಕ ಜವರಮ್ಮ ಎಂಬುವರಿಗೆ ಮಂಜೂರಾಗಿದ್ದ ಸರ್ವೆ ನಂಬರ್ 23 ರಲ್ಲಿನ 3 ಎಕರೆ ಭೂಮಿ ನನ್ನ ಹೆಸರಿಗೆ ಬಂದಿದೆ. ಈ ಜಮೀನು ನನಗೆ ಸೇರಬೇಕೆಂದು ಸಿದ್ದಯ್ಯ ಎಂಬುವರು ಎಸಿ ಕೋರ್ಟ್‍ನಲ್ಲಿ ದಾವೆ ಹೂಡಿದ್ದರು.
ಆ ಕೋರ್ಟ್‍ನಲ್ಲಿ ನನ್ನಂತೆ ಆಯಿತು. ನಂತರ ನನಗೆ ಹಾಗೂ ಕುಟುಂಬದವರಿಗೆ ಹಿಂಸೆ ನೀಡಲು ಆರಂಭಿಸಿ ಜಮೀನಿನ ಹತ್ತಿರ ನಮ್ಮ ಮಕ್ಕಳು, ಹೆಂಡತಿ ಇರುವ ಬರುವುದು, ವಿಡಿಯೋ ಮಾಡುವುದು ಕೆಲಸ ಮಾಡುತ್ತಿದ್ದಾರೆ. ನಮಗೆ ಇದೆ ರೀತಿ ಕಿರುಕುಳ ನೀಡಿದರೆ ತಹಸೀಲ್ದಾರ್ ಕಚೇರಿ ಮುಂಭಾಗ ವಿಷ ಕುಡಿದು ಸಾಯುತ್ತೇನೆಂದು ಹೇಳಿದರು.
ಮಂಜಶೆಟ್ಟಿ ಮಾತನಾಡಿ, ಭೂ ವ್ಯಾಜ್ಯದಲ್ಲಿ ತಹಸೀಲ್ದಾರ್ ಹಾಗೂ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಮಂಜುನಾಥ್ ಪರವಾಗಿ ತೀರ್ಪು ಬಂದಿದೆ. ಸಿದ್ದಯ್ಯ ಎಂಬುವರು ವಿನಾಕಾರಣ ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿದರು. ಈ ಸಂದರ್ಭ ಚಂದ್ರಮ್ಮ, ಪಲ್ಲವಿ, ಪೂಜಾ ಪುಟ್ಟರಾಜು ಇದ್ದರು.