ಕೀರ್ತನೆಯ ಹರಿಕಾರ ಸಂತಶ್ರೇಷ್ಠ ಕನಕದಾಸ ಜಯಂತಿ

ಆಲೂರು:ಪಟ್ಟಣದ ಮುಖ್ಯರಸ್ತೆಯಲ್ಲಿ ಕನಕದಾಸರ ಭಾವಚಿತ್ರ ಮೆರವಣಿಗೆ ಮಾಡಿ ನಂತರ ವೇದಿಕೆ ಕಾರ್ಯಕ್ರಮವನ್ನು ತಾಲ್ಲೂಕುವಕಚೇರಿ ಆವರಣದಲ್ಲಿ ಆಯೋಜಿಸಿದ್ದು,ಕಾರ್ಯಕ್ರಮವನ್ನು ಆಲೂರು ಸಕಲೇಶಪುರ ಕಟ್ಟಾಯ ವಿಧಾನಸಭಾ ಶಾಸಕರಾದ ಸಿಮೆಂಟ್ ಮಂಜು ಅವರು ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಕನಕದಾಸರ ಜನ್ಮ ದಿನವನ್ನು ‘ಕನಕದಾಸ ಜಯಂತಿ’ಎಂದು ಆಚರಿಸಲಾಗುತ್ತದೆ. ಕತ್ತಿ ಗುರಾಣಿ ಹಿಡಿದು ರಣರಂಗದಲ್ಲಿ ಹೋರಾಡಿದ ಡಣ್ಣಾಯಕನು ಶಸ್ತ್ರತ್ಯಜಿಸಿ ಕೈಯಲ್ಲಿ ತಂಬೂರಿ ಹಿಡಿದು ಕೀರ್ತನಕಾರನಾಗಿ,ಲೇಖನಿ ಹಿಡಿದು ಕವಿಯಾಗಿ, ಅಧ್ಯಾತ್ಮ ತತ್ವ ಹೇಳಿದ ದಾರ್ಶನಿಕನಾಗಿ ಬದಲಾದ ಸೋಜಿಗವೇ ಕನಕದಾಸರೆಂಬ ದಾಸವರೇಣ್ಯನ ಜೀವನ ವೃತ್ತಾಂತವಾಗಿದೆ. ಕನಕದಾಸ ಜಯಂತಿಯಂದು ಇಂತಹ ಮಹಾನ್‌ ಕೀರ್ತನಕಾರರಾದ ಕನಕದಾಸರಿಗೆ ಗೌರವವನ್ನು ಸೂಚಿಸುತ್ತದೆ,ಅಲ್ಲದೆ ಈ ಜಯಂತಿಯನ್ನು ಪ್ರಥಮವಾಗಿ ಕಡ್ಡಾಯ ಆಚರಣೆಯನ್ನು ಮಾಡುವಂತೆ ಶ್ರೀಯುತ ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ ಹಾಗಾಗಿ ಅವರಿಗೂ ಅಭಿನಂದನೆಗಳನ್ನು ತಿಳಿಸಿದರು.

ಮುಖ್ಯ ಭಾಷಣಕಾರರು ಮತ್ತು ಸಾಹಿತಿಗಳಾದ ಸುಂದರೇಶ್.ಬಿ.ಉಡುವಾರೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಕನಕದಾಸರು ನಡೆದ ಭಕ್ತಿ ಆಂದೋಲನದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಯಾಕೆಂದರೆ ಅವರಿಗೆ ದೇವರ ಪೂಜೆಯಲ್ಲಿ, ದೇವಸ್ಥಾನಗಳ ನಿಯಮಗಳಲ್ಲಿ ಜಾತಿಗಳನ್ನು ತರುವುದು ಇಷ್ಟವಿರಲಿಲ್ಲ. ಧಾರ್ಮಿಕ ಆಚರಣೆಗಳಲ್ಲಿ ಜಾತಿ ಪದ್ಧತಿಯನ್ನು ಅವರು ತಿರಸ್ಕರಿಸಿದ್ದರು.ಕನಕದಾಸರು ಶ್ರೀಕೃಷ್ಣನ ಪರಮ ಭಕ್ತರಾದ್ದರಿಂದ ಅವರಿಗೂ ಉಡುಪಿಯ ಶ್ರೀಕೃಷ್ಣ ಮಠಕ್ಕೂ ಅವಿನಾಭಾವ ಸಂಬಂಧವಿದೆ. ಕನಕದಾಸರು ಮೂಲತಃ ಕುರುಬ ಸಮುದಾಯಕ್ಕೆ ಸೇರಿದ ವ್ಯಕ್ತಿಯಾಗಿದ್ದರು. ಅಂದಿನ ಸಮಾಜ ಜಾತಿಗೆ ಹೆಚ್ಚು ಪ್ರಾಧಾನ್ಯತೆಯನ್ನು ನೀಡುತ್ತಿದ್ದರಿಂದ ಅವರನ್ನು ದೇವಸ್ಥಾನದ ಒಳಗೆ ಪ್ರವೇಶಿಸಲು ಬಿಡಲಿಲ್ಲ. ಕನಕದಾಸರು ಶ್ರೀಕೃಷ್ಣನನ್ನು ಎಷ್ಟು ಪ್ರೀತಿಸುತ್ತಿದ್ದರೋ ಅಷ್ಟೇ ಶ್ರೀಕೃಷ್ಣನು ಅವರನ್ನು ಪ್ರೀತಿಸುತ್ತಿದ್ದ ಕಾರಣ ಕೃಷ್ಣನ ದರ್ಶನ ಭಾಗ್ಯ ಪಡೆಯದೇ ಹತಾಶೆಯಿಂದ ದೇವಸ್ಥಾನದಿಂದ ಹೊರಡುತ್ತಿದ್ದ ಕನಕದಾಸರಿಗೆ ಶ್ರೀಕೃಷ್ಣನು ತಿರುಗಿ ಗೋಡೆಯ ಒಂದು ಕಿಂಡಿಯ ಮೂಲಕ ತನ್ನ ದರ್ಶನವನ್ನು ಕರುಣಿಸುತ್ತಾನೆ. ಇಂದಿಗೂ ಕೃಷ್ಣನ ದೇವಸ್ಥಾನದ ಮುಖ್ಯ ಬಾಗಿಲು ಶಾಶ್ವತವಾಗಿ ಮುಚ್ಚಿದ್ದು, ಶ್ರೀಕೃಷ್ಣನ ವಿಗ್ರಹವು ದೇವಸ್ಥಾನದ ಹಿಂಭಾಗಕ್ಕೆ ಮುಖ ಮಾಡಿದೆ ಎಂದು ಹೇಳಲಾಗುತ್ತದೆ. ಮೇಲಾಗಿ, ಗೋಡೆಯಲ್ಲಿನ ಬಿರುಕು ಅಂದಿನಿಂದ ಕನಕನ ಕಿಟಕಿ ಎಂಬರ್ಥದ ‘ಕನಕನ ಕಿಂಡಿ’ ಎಂದು ಹೆಸರನ್ನು ಪಡೆದುಕೊಂಡಿತು. ಇಂದಿಗೂ ಭಕ್ತರು ಈ ಕಿಟಕಿಯ ಮೂಲಕ ಶ್ರೀಕೃಷ್ಣನನ್ನು ಭೇಟಿಯಾಗಿ ದರ್ಶನವನ್ನು ಪಡೆದುಕೊಳ್ಳುತ್ತಾರೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ತಹಸಿಲ್ದಾರ್ ಮಲ್ಲಿಕಾರ್ಜುನ್ ಅವರು ಮಾತನಾಡಿ ಕನಕದಾಸರು ನಮ್ಮಿಂದ ಮರೆಯಾದರೂ ಅವರ ಕೀರ್ತನೆಗಳು, ಹಾಡುಗಳು ನಮ್ಮೊಂದಿಗೆ ಇಂದಿಗೂ ಇದೆ. ಕನಕದಾಸರು ಶ್ರೀಕೃಷ್ಣನ ಪರಮ ಭಕ್ತರಾಗಿದ್ದರಿಂದ ಅವರು ಹೆಚ್ಚಿನ ಹಾಡುಗಳನ್ನು ಶ್ರೀಕೃಷ್ಣನ ಬಗ್ಗೆಯೇ ಹಾಡಿದ್ದಾರೆ.ಕನಕದಾಸರ ಕಾವ್ಯಗಳು ಕರ್ನಾಟಕ ಶೈಲಿಯಲ್ಲಿ ರಚನೆಯಾದ ಕಾವ್ಯಗಳಾಗಿವೆ. ಅವರು ತಮ್ಮ ಎಲ್ಲಾ ಹಾಡುಗಳಿಗೆ ‘ಕಾಗಿನೆಲೆ ಆದಿಕೇಶವ’ ಎಂಬ ಕಾವ್ಯನಾಮವನ್ನು ಬಳಸಿದ್ದಾರೆ. ನಳಚರಿತ್ರೆ, ಹರಿಭಕ್ತಿಸಾರ, ನೃಸಿಂಹಸ್ತವ, ರಾಮಧಾನ್ಯಚರಿತ್ರೆ ಮತ್ತು ಮೋಹನತರಂಗಿಣಿ ಅವರ ಕೆಲವು ಪ್ರಸಿದ್ಧ ಕೃತಿಗಳು ಎಂದು ಹೇಳಿದರು. ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಅತಿಹೆಚ್ಚು ಅಂಕಪಡೆದ ಸಮುದಾಯದ ವಿಧ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು. ಈ ಸಂಧರ್ಭದಲ್ಲಿ ಕುರುಬ ಸಂಘದ ಗೌರವಾಧ್ಯಕ್ಷರಾದ ವೀರಪ್ಪ,ತಾಲ್ಲೂಕು ಅಧ್ಯಕ್ಷರಾದ ಚಿಕ್ಕೆಗೌಡ.ಪ.ಪಂ ಸದಸ್ಯರಾದ ನಿಂಗರಾಜು.ಕಾಂಗ್ರೇಸ್ ಮುಖಂಡರಾದ ರಾಜಶೇಖರ್.ದೇವರಾಜ್ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಸುಬ್ರಹ್ಮಣ್ಯ ಶರ್ಮ.ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣೇಗೌಡ.ಮುಂತಾದವರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.