ಮಂಗಳೂರು: ಬಿಎಂಆರ್ ಗ್ರೂಪ್ ನಿಂದ ಲಕ್ಕಿ ಡ್ರಾ: ವಿಜೇತರಿಗೆ ಕಾರು, ಚಿನ್ನದ ಉಂಗುರು, ಸರ್ಪ್ರೈಸ್ ಗಿಫ್ಟ್
ಮಂಗಳೂರು : ಬಿಎಂಆರ್ ಗ್ರೂಪ್ ವತಿಯಿಂದ ಪ್ರತಿ ತಿಂಗಳು ಗೋಲ್ಡ್ ಸ್ಕಿಮ್ ನಡೆಯುತ್ತಿದ್ದು, ಇದಿಗ ಸೀಸನ್ 4 ರ ಹಂತದಲ್ಲಿ ಮೂರನೇ ತಿಂಗಳ ಡ್ರಾ ಕಾರ್ಯಕ್ರಮ ನಡೆಯಿತು.
ಗ್ರಾಹಕರಿಗೆ ಪ್ರತಿ ತಿಂಗಳಿನಲ್ಲಿ ಬೇರೆ ಬೇರೆ ರೀತಿಯ ಸರ್ಪ್ರೈಸ್ ಗಿಫ್ಟ್, ಉಂಗುರ ಮತ್ತು ಹೊಸ ವರುಷದ ಪ್ರಯುಕ್ತ ಬಂಪರ್ ಪ್ರೈಸ್ ಆಗಿ ಲಕ್ಕಿ ಡ್ರಾ ದಲ್ಲಿ ಗ್ರಾಹಕರಿಗೆ ಆಲ್ಟೊ ಕಾರ್ ನ್ನು ಉಡುಗೊರೆಯಾಗಿ ನೀಡಿದ್ದಾರೆ. ಮೂರನೇ ಹಂತದ ಲಕ್ಕಿ ಡ್ರಾ ದಲ್ಲಿ ಆಲ್ಟೊ ಕಾರನ್ನು ಅಂಟೋನಿ ರೋಷನ್ ಅವರು ಪಡೆದುಕೊಂಡಿದ್ದಾರೆ. ಜೊತೆಗೆ ಹಲವು ಗ್ರಾಹಕರು ಉಂಗುರ ಮತ್ತು ಸರ್ಪ್ರೈಸ್ ಗಿಫ್ಟ್ ನ್ನು ಈ ತಿಂಗಳು ಪಡೆದುಕೊಂಡಿದ್ದಾರೆ.
ಈ ಕಾರ್ಯಕ್ರಮದಲ್ಲಿ ಬಿಎಂ ಆರ್ ಗ್ರೂಪ್ ನ ಮ್ಯಾನೇಜಿಂಗ್ ಡೈರೆಕ್ಟ್ ರ್ ದಾವೂದ್ ಹಕೀಮ್, ಉರ್ವದ ಯುಎಫ್ ಸಿ ಎ ಅಧ್ಯಕ್ಷರಾದ ಕಮಲಾಕ್ಷ, ಸೆಕ್ರೆಟರಿ ಲತೀಶ್, ಸಮಾಜ ಸೇವಕರಾದ ಕಮಲ್, ಯುಎಫ್ ಸಿಎ ಉರ್ವದ ಕ್ರೀಡಾ ಕಾರ್ಯದರ್ಶಿ ಪ್ರವೀಣ್, ಬಿಎಂಆರ್ ಮ್ಯಾನೇಜರ್ ಹನೀಫ್ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಿಜೆ ಡಿಕ್ಸನ್ ನಿರೂಪಿಸಿದರು.