16 ದಿನದ ಅವಳಿ ಶಿಶುಗಳನ್ನು ಕತ್ತು ಹಿಸುಕಿ ಕೊಂದ ತಾಯಿ

ಭೋಪಾಲ್: ಅತ್ತೆಯೊಂದಿಗೆ ಜಗಳ ಮಾಡಿಕೊಂಡು ಮಹಿಳೆಯೊಬ್ಬರು ತನ್ನ 16 ದಿನಗಳ ಅವಳಿ ಮಕ್ಕಳನ್ನು ಕತ್ತು ಹಿಸುಕಿ ಕೊಂದಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಸಪ್ನಾ ಧಾಕಡ್ ತನ್ನ ಮಕ್ಕಳನ್ನು ಕೊಂದ ಆರೋಪಿ. ಮಕ್ಕಳನ್ನು ಹತ್ಯೆ ಮಾಡಿ ನಿರ್ಜನ ಪ್ರದೇಶದಲ್ಲಿ ಎಸೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈಕೆಯ ಪತಿ ಮದ್ಯವ್ಯಸನಿ ಹಾಗೂ ಕೆಲಸವಿಲ್ಲದವನೆಂದು ಅತ್ತೆ ನಿಂದಿಸುತ್ತಿದ್ದರು ಎನ್ನಲಾಗಿದೆ. ಮನೆಯಲ್ಲಿ ಮಕ್ಕಳು ಇಲ್ಲದಿರುವ ಬಗ್ಗೆ ಸಪ್ನಾಳ ಪತಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ನಂತರ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ. ವಿಚಾರಣೆಯ ವೇಳೆ ಮಹಿಳೆಯು ಸೆಪ್ಟೆಂಬರ್ 23 ರಂದು ಶಿಶುಗಳನ್ನು ಕತ್ತು ಹಿಸುಕಿ ಕೊಂದು ಹಬೀಬ್‌ಗಂಜ್ ಪ್ರದೇಶದ ನಿರ್ಜನ ಸ್ಥಳದಲ್ಲಿ ಶವಗಳನ್ನು ಎಸೆದಿರುವುದಾಗಿ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಅವಳಿ ಮಕ್ಕಳ ಶವಗಳನ್ನು ಪೊಲೀಸರು ಹೊರತೆಗೆದಿದ್ದಾರೆ.

Related Posts

Leave a Reply

Your email address will not be published.