ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ 9 ನೇ ನೂತನ ಹವಾನಿಯಂತ್ರಿತ ಶಾಖೆ
108 ವರ್ಷ ಇತಿಹಾಸದ ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ಮಟಪಾಡಿಯ 9 ನೇ ನೂತನ ಹವಾನಿಯಂತ್ರಿತ ಶಾಖೆ ಮತ್ತು ನವರತ್ನ ಮಿನಿ ಸಭಾಂಗಣದ ಉದ್ಘಾಟನೆ ಜರುಗಿತು.
ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ| ಎಂ.ಎನ್.ರಾಜೇಂದ್ರ ಕುಮಾರ್ ಅವರು ನೂತನÀ ಶಾಖೆಯನ್ನು ಉದ್ಘಾಟಿಸಿ ಮಾತನಾಡಿ, ಸಹಕಾರಿ ಸಂಸ್ಥೆಗಳು ಸರಕಾರದ ಯಾವೂದೇ ಸೌಲಭ್ಯವನ್ನು ಬಯಸದೆ ಜನರಿಂದ ಜನರಿಗಾಗಿ ಎನ್ನುವ ದ್ಯೇಯದಲ್ಲಿ ಜನರ ವಿಸ್ವಾಸಗಳಿಸಿ ಇಂದು ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಸರಿ ಸಮಾನವಾಗಿ ಬೆಳೆದು ಜನರ ಸೇವೆಯಲ್ಲಿದೆ ಎಂದರು.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಉಡುಪಿ ಶಾಸಕ ಯಶ್‍ಪಾಲ್ ಎ. ಸುವರ್ಣ, ಮಾಜಿ ಶಾಸಕ ಕೆ. ರಘುಪತಿ ಭಟ್, ಜಯಕರ ಶೆಟ್ಟಿ ಇಂದ್ರಾಳಿ, ಡಾ| ಐ. ದೇವಿಪ್ರಸಾದ್ ಶೆಟ್ಟಿ ಬೆಳಪು, ಸಂಘದ ಅಧ್ಯಕ್ಷ ಇರ್ಮಾಡಿ ಕೆ. ತಿಮ್ಮಪ್ಪ ಹೆಗ್ಡೆ, ಬಿ.ಅಶೋಕ ಕುಮಾರ್ ಶೆಟ್ಟಿ ಮೈರ್ಮಾಡಿ, ಅಶೋಕ್ ಕುಮಾರ್ ಶೆಟ್ಟಿ ಬೆಳ್ಳಂಪಳ್ಳಿ, ರಾಜೇಶ್ ರಾವ್ ಪಾಂಗಾಳ, ಅರುಣ್‍ಕುಮಾರ್ ಎಸ್.ವಿ, ಜೀವನ್ ಕುಮಾರ್ ಶೆಟ್ಟಿ, ಶೋಭಾ ಪೂಜಾರಿ ಮತ್ತು ಸಂಘದ ಎಲ್ಲಾ ನಿರ್ದೇಶಕರುಗಳು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ನಾನಾ ಗಣ್ಯರನ್ನು ಸನ್ಮಾನಿಸಲಾಯಿತು. ಠೇವಣಿ ಪತ್ರ, ಖಾತೆ ಬಿಡುಗಡೆ, ನೂತನ ಸ್ವಸಹಾಯ ಸಂಘಕ್ಕೆ ಚಾಲನೆ ನೀಡಲಾಯಿತು.