ಉಡುಪಿ : ಎಡೆಬಿಡದ ಮಳೆಗೆ ಮತ್ತೊಂದು ಸಾವು
ಉಡುಪಿ : ಉಡುಪಿ ಜಿಲ್ಲೆಯಲ್ಲಿ ಮಹಾಮಳೆಗೆ ಮತ್ತೊಂದು ಸಾವು ಸಂಭವಿಸಿದೆ. ತಡರಾತ್ರಿ ಉಡುಪಿ ಜಿಲ್ಲೆಯ ಬೆಳ್ಮಣ್ ಪೇಟೆ ಬಳಿಯಲ್ಲಿ, ಬೈಕ್ ಸವಾರನ ಮೇಲೆ ಭಾರೀ ಗಾತ್ರದ ಮರ ಉರುಳಿ ಬಿದ್ದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಪಿಲಾರುಕಾನದ ಪ್ರವೀಣ್ ಆಚಾರ್ಯ (30), ಕಾರ್ಕಳದಿಂದ ತನ್ನ ಮನೆಯತ್ತ ತೆರಳುತ್ತಿದ್ದಾಗ ಏಕಾಏಕಿ ಉರುಳಿಬಿದ್ದ ಬೃಹತ್ ಮರದಡಿ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.