ಬ್ರಹ್ಮಾವರ : 7ನೇ ದಿನಕ್ಕೆ ಕಾಲಿಟ್ಟ ಕಟ್ಟಡ ಸಾಮಾಗ್ರಿಗಳ ಸಾಗಾಟ ವಾಹನದ ಮಾಲಕರ ಮುಷ್ಕರ
ಉಡುಪಿ ಜಿಲ್ಲೆಯ ಕಟ್ಟಡ ಸಾಮಗ್ರಿಗಳ ಸಾಗಾಟ ವಾಹನಗಳ ಮಾಲಕರು ಮತ್ತು ಕಾರ್ಮಿಕರು ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಮುಷ್ಕರ ನಡೆಸುತ್ತಿದ್ದು, 7ನೇ ದಿನವೂ ಮುಷ್ಕರವನ್ನು ಮುಂದುವರಿಸಿದ್ದಾರೆ.
ಮುಷ್ಕರ ನಿರತರು ಮಹಾತ್ಮಾ ಗಾಂಧಿ ಮತ್ತು ಲಾಲ್ ಬಹುದ್ದೂರು ಶಾಸ್ತ್ರಿ ಅವರ ಜಯಂತಿ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಬಳಿಕ ಕೋಟದಲ್ಲಿ ಜಿಲ್ಲಾ ಮಟ್ಟದ ಸಭೆ ನಡೆಸಿ ಮುಂದಿನ ಹೋರಾಟದ ಮಾತುಕತೆ ನಡೆಸಿದರು. ಟಿಪ್ಪರ್ ಮಾಲಕರ ಸಂಘದ ವಿಜಯ ಕುಮಾರ್, ಸುಧಾಕರ ಶೆಟ್ಟಿ, ಮಟಪಾಡಿ ವಿಶ್ವನಾಥ್ ಶೆಟ್ಟಿ , ಸುಮತಿ ಸಂತೋಷ್ ಬಿರ್ತಿ ಮೊದಲಾದವರು ಪಾಲ್ಗೊಂಡಿದ್ದರು,