ಹೆಣ್ಣು ಭ್ರೂಣ ಹತ್ಯೆ ಪ್ರಕರಣದಲ್ಲಿ ಸಿಕ್ಕಿ ಬಿದ್ದ ವೈದ್ಯ ಸತೀಶ್ ಆತ್ಮಹತ್ಯೆ
ಹೆಣ್ಣು ಭ್ರೂಣ ಹತ್ಯೆ ಪ್ರಕರಣದಲ್ಲಿ ಗ್ರಾಮಸ್ಥರು ದೂರು ನೀಡಿರುವ ಹಿನ್ನೆಲೆಯಲ್ಲಿ ಆಯುರ್ವೇದ ವೈದ್ಯ 47ರ ಡಾ. ಸತೀಶ್ ತಾಕೊಲೆ ಮಾಡಿಕೊಂಡಿದ್ದಾರೆ. ಅವರ ಮೃತ ಶರೀರವು ಕುಶಾಲನಗರ ತಾಲೂಕಿನ ಆನೆಕಾಡು ಬಳಿ ಹೆದ್ದಾರಿಯಲ್ಲಿ ಕಾರಿನಲ್ಲಿ ಪತ್ತೆಯಾಗಿದೆ.
ಮಂಡ್ಯದ ಶಿವಳ್ಳಿಯಲ್ಲಿ ಇವರು ವೆಂಕಟೇಶ್ವರ ಕ್ಲಿನಿಕ್ ನಡೆಸುತ್ತಿದ್ದರು. ಅಲ್ಲಿ ಅಕ್ರಮ ಭ್ರೂಣ ಹತ್ಯೆ ಮತ್ತಿತರ ಅಕ್ರಮಗಳಲ್ಲಿ ತೊಡಗಿದ್ದರು ಎಂದು ಊರವರು ಸರಕಾರಕ್ಕೆ ಮತ್ತು ಆರೋಗ್ಯ ಸಚಿವರಿಗೆ ದೂರು ನೀಡಿದ್ದರು.
ಸಚಿವ ದಿನೇಶ್ ಗುಂಡೂರಾವ್ ಈ ಬಗೆಗೆ ತನಿಖೆಗೆ ಆದೇಶಿಸಿದ್ದರು. ಹಣಸೂರು ತಾಲೂಕಿನ ಕೊಣನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸರಕಾರಿ ವೈದ್ಯರಾಗಿ ಕೆಲಸ ಮಾಡುತ್ತಿದ್ದರೂ ಸ್ಥಳೀಯ ಜನರಿಗೆ ಲಭ್ಯರಿರಲಿಲ್ಲ ಎಂದೂ ಅಲ್ಲಿನ ಜನರು ದೂರು ನೀಡಿದ್ದರು. ಮಂಡ್ಯ ಜಿಲ್ಲೆಯ ಪಾಂಡವಪುg ತಾಲೂಕಿನ ಹರಳಹಳ್ಳಿ ಗ್ರಾಮದ ಈ ವೈದ್ಯ ಹಲವು ದೂರುಗಳ ಭಾರದಿಂದ ಬಳಲಿ, ತಾನೇ ಸೂಜಿ ಮದ್ದು ಚುಚ್ಚಿಕೊಂಡು ಸಾವು ತಂದುಕೊಂಡಿದ್ದಾನೆ ಎಂದು ಹೇಳಲಾಗಿದೆ. ಡಾ. ಸತೀಶ್ 900 ಭ್ರೂಣ ಹತ್ಯೆಗೆ ಕಾರಣನಾಗಿರುವ ಎಂದು ಹೇಳಲಾಗಿದೆ.