ಗುಡ್ಡೆ ಹೋಟೆಲಿನ ಅಯ್ಯಪ್ಪ ಸ್ವಾಮಿ ಭಕ್ತವೃಂದದವರಿಂದ ಹೆಮ್ಮುಂಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾಭಿವೃದ್ಧಿಗಾಗಿ ನೆರವು
ಬೈಂದೂರು ತಾಲೂಕು
ಗುಡ್ಡೆ ಹೋಟೆಲ್ ಅಯ್ಯಪ್ಪ ಸ್ವಾಮಿ ಮಂದಿರದ ಗುರು ಸ್ವಾಮಿ ಕಾಮೇಶ್ ಹಾಗೂ ಭಕ್ತವೃಂದದವರು ಹೆಮ್ಮುಂಜೆಯ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಸಿಹಿ ತಿಂಡಿ ಹಂಚಿ ರೂಪಾಯಿ ಹತ್ತು ಸಾವಿರದ ನೂರನ್ನು ಶಾಲೆಯ ಕಂಪ್ಯೂಟರ್ ಕ್ಯಾಬಿನ್ ರಚನೆಗೆ ದೇಣಿಗೆಯಾಗಿ ನೀಡಿದರು.
ಶಾಲೆಯ ಬಗ್ಗೆ ಇರುವ ಕಾಳಜಿ, ಅಭಿಮಾನ ಹಾಗೂ ಪ್ರೋತ್ಸಾಹವನ್ನು ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ,ಎಸ್.ಎಮ್. ಡಿ .ಸಿ.ಯ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಊರಿನ ಜನತೆ ತಮ್ಮ ಪ್ರಶಂಸೆಯನ್ನು ವ್ಯಕ್ತಪಡಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಗುರುಸ್ವಾಮಿ ಕಾಮೇಶ್, ಅಯ್ಯಪ್ಪ ಭಕ್ತ ವೃಂದದವರು,ಶಾಲಾ ಮುಖ್ಯೋಪಾಧ್ಯಾಯರು,
ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.