Home ಕರಾವಳಿ Archive by category ಉಳ್ಳಾಳ (Page 36)

ಉಳ್ಳಾಲದಲ್ಲಿ ಉಚಿತ ರಕ್ತದಾನ ಶಿಬಿರ

ಟೀಮ್ ಬಿ-ಹ್ಯೂಮನ್ ಹಾಗೂ ಮುಕ್ಕಚ್ಚೇರಿ ಫ್ರೆಂಡ್ಸ್ ಸರ್ಕಲ್ ಇದರ ಜಂಟಿ ಆಶ್ರಯದಲ್ಲಿ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಇದರ ಸಹಯೋಗದೊಂದಿಗೆ ಉಚಿತ ರಕ್ತದಾನ ಶಿಬಿರವು ಉಳ್ಳಾಲದ ಟಿಪ್ಪು ಸುಲ್ತಾನ್ ಕಾಲೇಜು ಅವರಣದಲ್ಲಿ ನಡೆಯಿತು. ಅವಿರತ ಬಿರುಗಾಳಿ ಹಾಗೂ ನಿರಂತರ ಸುರಿಯುತ್ತಿರುವ ಮಳೆಯ ನಡುವೆಯೂ ಸ್ಥಳೀಯ ಯುವಕರು ಅತ್ಯುತ್ಸಾಹದಿಂದ ಪಾಲ್ಗೊಂಡು ಸುಮಾರು 100

ಬೆಂಕಿ ಅವಘಡ : ಎಸೆಸೆಲ್ಸಿ ವಿದ್ಯಾರ್ಥಿಗಳು ಸ್ಥಳಾಂತರ

ಎಸೆಸೆಲ್ಸಿ ಪರೀಕ್ಷೆ ನಡೆಯುತ್ತಿದ್ದ ಕೊಠಡಿಯ ಸಮೀಪವೆ ಇದ್ದ ಲ್ಯಾಬ್‍ನಲ್ಲಿ ಬೆಂಕಿ ಅವಘಡ ಸಂಭವಿಸಿ ಇಡೀ ಲ್ಯಾಬ್ ಹೊತ್ತಿ ಉರಿದ ಘಟನೆ ಬಬ್ಬುಕಟ್ಟೆಯ ಖಾಸಗಿ ಮಹಿಳಾ ಕಾಲೇಜಿನಲ್ಲಿ ನಡೆದಿದೆ. ಬೆಂಕಿ ಅವಘಡ ಸಂಭವಿಸಿದ ಲ್ಯಾಬ್ ಇದ್ದ ಕಟ್ಟಡದಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಎಸೆಸೆಲ್ಸಿ ಪರೀಕ್ಷೆ ಬರೆಯುತ್ತಿದ್ದು, ಅವರನ್ನೆಲ್ಲಾ ಡ್ಯುಟಿಯಲ್ಲಿದ್ದ ಶಿಕ್ಷಕರು ಮತ್ತು ಸಿಬ್ಬಂದಿಗಳು ಸುರಕ್ಷಿತವಾಗಿ ಮತ್ತೊಂದು ಕಟ್ಟಡಕ್ಕೆ ಸ್ಥಳಾಂತರಿಸಿದ್ದಾರೆ. ಸರ್ವಿಸ್

ಕೋವಿಡ್ ಹಿನ್ನೆಲೆ ತಲಪಾಡಿ ಗಡಿಭಾಗದಲ್ಲಿ ತೀವ್ರಗೊಂಡ ತಪಾಸಣೆ

ಕೇರಳದಲ್ಲಿ ಹೆಚ್ಚುತ್ತಿರುವ ಕೋವಿಡ್ ಹಿನ್ನಲೆಯಲ್ಲಿ ಕೊಣಾಜೆ ಮತ್ತು ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಗಡಿಭಾಗದಲ್ಲಿ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಕಾಸರಗೋಡಿನಿಂದ ಮಂಗಳೂರು ಪ್ರವೇಶಿಸುವ ಎಲ್ಲರ ನೆಗೆಟಿವ್ ವರದಿ ಕಡ್ಡಾಯ ಮಾಡುತ್ತಿದ್ದು, ಸ್ಥಳದಲ್ಲಿ ಆರ್‌ಟಿಪಿಸಿಆರ್ ಪರೀಕ್ಷೆಗೆ ವ್ಯವಸ್ಥೆ ಮಾಡಿದ್ದು ತಲಪಾಡಿ ಗಡಿಭಾಗದಲ್ಲೂ ಕಟ್ಟು ನಿಟ್ಟಿನ ಕ್ರಮ ಕೊಂಡಿದ್ದಾರೆ. ಮಂಗಳೂರು ಕಮಿಷನರೇಟ್ ಒಳಪಡುವ ಕೊಣಾಜೆ, ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ

ಉಳ್ಳಾಲ ಮತ್ತು ಸೋಮೇಶ್ವರ ಸಮುದ್ರದಲ್ಲಿ ಹೆಚ್ಚಾದ ಅಬ್ಬರ: ಅಪಾರ ಹಾನಿ

ಉಳ್ಳಾಲ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಗಾಳಿ ಮಳೆಗೆ ಉಳ್ಳಾಲ ಮತ್ತು ಸೋಮೇಶ್ವರದಲ್ಲಿ ಸಮುದ್ರದ ಅಬ್ಬರ ಹೆಚ್ಚಾಗಿದ್ದು, ಸೋಮೇಶ್ವರ ಉಚ್ಚಿಲ ಬಟ್ಟಪ್ಪಾಡಿಯಲ್ಲಿ ಒಳರಸ್ತೆ ಸಮುದ್ರದ ಅಲೆಗಳ ಪಾಲಾದರೆ, ಉಳ್ಳಾಲ ಮತ್ತು ಸುತ್ತಮುತ್ತಲಿ ವ್ಯಾಪ್ತಿಯಲ್ಲಿ ಕಂಪೌಂಡ್ ಕುಸಿತ ಸೇರಿದಂತೆ ಸಣ್ಣಪುಟ್ಟ ಅವಘಡಗಳು ಸಂಭವಿಸಿದೆ. ಸೋಮೇಶ್ವರ ಬೀಚ್ ರಸ್ತೆ ಬಟ್ಟಪ್ಪಾಡಿ ಬಳಿ ಹಾನಿಗೀಡಾಗಿದ್ದು ಸಂಚಾರ ಅಸ್ತವ್ಯಸ್ತವಾಗಿದೆ. ಉಚ್ಚಿಲದಲ್ಲಿ ತಗ್ಗು ಪ್ರದೇಶ ಜಲಾವೃತಗೊಂಡಿದ್ದು

ಉಚ್ಚಿಲದಲ್ಲಿ ಹಠಾತ್ತನೇ ನಿಂತ ಬಸ್ಸಿನ ಹಿಂಬದಿಗೆ ಬೈಕ್ ಡಿಕ್ಕಿ: ಬೈಕ್ ಸವಾರರಿಗೆ ಗಂಭೀರ ಗಾಯ

ಉಳ್ಳಾಲ: ಬಸ್ ಹಿಂಬದಿಗೆ ಬೈಕ್ ಢಿಕ್ಕಿ ಹೊಡೆದು ತಲಪಾಡಿ ಟೋಲ್ ಸಿಬ್ಬಂದಿ ಗಂಭೀರ ಗಾಯಗೊಂಡಿರುವ ಘಟನೆ ಉಚ್ಚಿಲ ರಾ.ಹೆ 66ರಲ್ಲಿ ಸಂಭವಿಸಿದೆ. ಬೈಕ್ ಸವಾರ ಆಂಧ್ರ ಪ್ರದೇಶದ ಮೂಲದ ಶಶಿಧರ್ ರೆಡ್ಡಿ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಂಧ್ರ ಮೂಲದ ಶಶಿಧರ್ ರೆಡ್ಡಿ (23) ಮತ್ತು ಶಾನು ಭಾಝ್ (31) ಎಂಬವರು ತಲಪಾಡಿ ಟೋಲ್ ಪ್ಲಾಝಾದ ಸಿಬ್ಬಂದಿಗಳಾಗಿದ್ದು ಕರ್ತವ್ಯಕ್ಕೆ ತೆರಳುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಉಚ್ಚಿಲದಲ್ಲಿ ಖಾಸಗಿ ಸಿಟಿ

ಉಳ್ಳಾಲದಲ್ಲೊಂದು ಸೌಹಾರ್ದ ಕಂಕಣಭಾಗ್ಯ

ಉಳ್ಳಾಲವನ್ನು ‘ಪಾಕಿಸ್ಥಾನ’ಕ್ಕೆ ಹೋಲಿಸಿ ಭಾಷಣ ಮಾಡಿ ನಗೆಪಾಟಲಿಗೀಡಾಗಿದ್ದ ಘಟನೆ ಸಲ್ಪ ಸಮಯದ ಹಿಂದೆ ನಡೆದಿತ್ತು. ಇದೀಗ ಇದೇ ಉಳ್ಳಾಲದಲ್ಲಿ ಭಾನುವಾರ ನಡೆದ ಸೌಹಾರ್ದ ಮದುವೆ ಉಳ್ಳಾಲದ ಮೂಲಕ ಮತ್ತೊಮ್ಮೆ ಸಾಮರಸ್ಯದ ಸಂದೇಶ ರವಾನಿಸಿದೆ. ದಿವಂಗತ ಕೇಶವ ಕರ್ಕೇರಾ ಅವರ ಪತ್ನಿ ಗೀತಾ ಅವರು ತನ್ನ ಮಗಳು ಕವನ ಅವರೊಂದಿಗೆ ಉಳ್ಳಾಲ ಮಂಚಿಲದ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದರು. ಈ ಮೊದಲು ಈ ಕುಟುಂಬ ಮಂಗಳೂರಿನ ಶಕ್ತಿನಗರದಲ್ಲಿ ವಾಸವಿದ್ದರು. ಕೇಶವ

ಕೊಲ್ಯದಲ್ಲಿ ಎರಡು ಮನೆಗಳಿಂದ ಕಳವಿಗೆ ಯತ್ನ

ಉಳ್ಳಾಲ: ಎರಡು ಮನೆಗಳಿಗೆ ಬಾಗಿಲು ಮುರಿದು ನುಗ್ಗಿದ ಕಳ್ಳರ ತಂಡ, ಮನೆಯೊಳಗಿದ್ದ ಸೊತ್ತುಗಳನ್ನು ಹಾನಿಗೈದು ಒಂದು ಮನೆಯಿಂದ ವಾಚ್ ಕಳವುಗೈದು ಪರಾರಿಯಾಗಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕೊಲ್ಯ ಮೂಕಾಂಬಿಕಾ ದೇವಸ್ಥಾನ ಬಳಿ ವೇಳೆ ನಡೆದಿದೆ. ವಿದೇಶದಲ್ಲಿ ನೆಲೆಸಿರುವ ಸುರೇಶ್ ಎಂಬವರಿಗೆ ಸೇರಿದ ಮನೆಯ ಬಾಗಿಲು ಒಡೆದು ಒಳನುಗ್ಗಿರುವ ಕಳ್ಳರು ಕಪಾಟು ಪುಡಿಗೈದು, ಮನೆಯೊಳಗಿನ ಸಾಮಗ್ರಿಗಳನ್ನು ಚೆಲ್ಲಾಪಿಲ್ಲಿಗೈದು ಹಣ ಹಾಗೂ ಒಡವೆಗಾಗಿ ಹುಡುಕಾಡಿ ಏನೂ ಸಿಗದೇ

ಕುತ್ತಾರ್ ನಲ್ಲಿ ತೈಲ ಬೆಲೆಯೇರಿಕೆ ಖಂಡಿಸಿ ಪ್ರತಿಭಟನೆ

ತೈಲ ಬೆಲೆಯೇರಿಕೆಯನ್ನು ಖಂಡಿಸಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ, ಕುತ್ತಾರ್ ನಲ್ಲಿರುವ ಇಂಡಿಯನ್ ಪೆಟ್ರೋಲ್ ಪಂಪ್ ಮುಂಭಾಗ ಲಾಕ್ ಡೌನ್ ನಡುವೆಯೇ ಸಾಂಕೇತಿಕವಾಗಿ ಡಿವೈಎಫ್ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಡಿವೈಎಫ್ಐ ಉಳ್ಳಾಲ ವಲಯ ಸಮಿತಿಯ ಅಧ್ಯಕ್ಷ ಅಶ್ರಫ್ ಕೆಸಿ ರೋಡ್, ಜಿಲ್ಲಾ ಸಮಿತಿ ಸದಸ್ಯ ಆಡ್ವಕೇಟ್ ನಿತಿನ್ ಕುತ್ತಾರ್, ಸಿಐಟಿಯು ನಾಯಕರಾದ ಜಯಂತ್ ನಾಯ್ಕ್, ಇಬ್ರಾಹಿಂ ಮದಕ, ಡಿವೈಎಫ್ಐ ಮುಖಂಡರಾದ ರಝಾಕ್ ಮುಡಿಪು, ಸಂಕೇತ್

ತೌಕ್ತೆ ಚಂಡಮಾರುತದಿಂದ ಅಪಾಯದಲ್ಲಿರುವ ಮನೆಗಳು: ಮನೆ ಸಂರಕ್ಷಿಸುವ ಕಾರ್ಯ ಸರ್ಕಾರ ಮಾಡಬೇಕಿದೆ: ಶಾಸಕ ಖಾದರ್

ಉಳ್ಳಾಲ: ಕಡಲ್ಕೊರೆತ ಸಂಬಂಧ ಪಟ್ಟ ಹಾಗೆ ತೌಕ್ತೆ ಚಂಡಮಾರುತ ದಿಂದ ಸೋಮೇಶ್ವರ, ಉಳ್ಳಾಲ, ಕೋಟೆಪುರ, ಭಟ್ಟಂಪಾಡಿಯಲ್ಲಿ ಮನೆಗಳಿಗೆ ವ್ಯಾಪಕವಾಗಿ ಹಾನಿಯಾಗಿದೆ. ಮೊಗವೀರ ಪಟ್ನದಿಂದ ಸೋಲಾರ್ ಕ್ಲಬ್ ವರೆಗೆ ಹಾಗೂ ಪೆರಿಬೈಲ್ ರೋಹಿತ್ ಮಾಸ್ಟರ್ ಮನೆ ಕೋಟೆಬಾಗಿಲು, ನಾಗೇಶ್, ಬೆಟ್ಟಂಪಾಡಿಯವರ ಮನೆ ಅಪಾಯದಲ್ಲಿದೆ, ಇದನ್ನು ಸಂರಕ್ಷಿಸುವ ಕಾರ್ಯ ಸರಕಾರ ಮಾಡಬೇಕಿದೆ ಎಂದು ಶಾಸಕ ಯು.ಟಿ. ಖಾದರ್ ಹೇಳಿದರು. ಅವರು ಕೊಣಾಜೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಈವರೆಗೆ

ಮೊಬೈಲ್ ನಲ್ಲಿ ಮಾತನಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಮನೆ ಬಿಟ್ಟ ಬಾಲಕಿ

ಕೊಣಾಜೆ : ಹೆಚ್ಚಾಗಿ ಮೊಬೈಲಿನಲ್ಲಿ ಮಾತನಾಡುತ್ತಿರುವುದನ್ನು ತಾಯಿ ಪ್ರಶ್ನಿಸಿದಕ್ಕೆ ಬಾಲಕಿಯೋರ್ವಳು ಮನೆ ಬಿಟ್ಟು ನಾಪತ್ತೆಯಾಗಿರುವ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಬಾಳೆಪುಣಿಯಲ್ಲಿ ನಡೆದಿದೆ.ಈ ಕುರಿತು ತಾಯಿ ಮೀನಾಕ್ಷಿ ಕೊಣಾಜೆ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ. ಜು.6 ರಂದು ಮೀನಾಕ್ಷಿ ಅವರು ಮುಡಿಪು ಪೇಟೆಗೆ ಮಗನ ಜೊತೆಗೆ ಬೆಳಿಗ್ಗೆ 7.30 ರ ಸುಮಾರಿಗೆ ತೆರಳಿದ್ದರು. ಈ ವೇಳೆ ಬಾಳೆಪುಣಿ ಗ್ರಾಮದ ಕುಕ್ಕುದಕಟ್ಟೆ ಸೈಟ್ ನಲ್ಲಿದ್ದ