ಪ್ರಜ್ವಲ್ ಅಶ್ಲೀಲ ವೀಡಿಯೋ ಪ್ರಕರಣ; ಬಿಜೆಪಿಯವರದೇ ದೊಡ್ಡ ಕಿತಾಪತಿ; ಮಾಜೀ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ

ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವೀಡಿಯೋ ಪ್ರಕರಣದಲ್ಲಿ ಬಿಜೆಪಿಯ ಒಂದಿಬ್ಬರ ಕೈವಾಡವಿದೆ ಎಂದು ಮಾಜೀ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿಯವರು ಗಂಭೀರ ಆರೋಪ ಮಾಡಿದರು.
ಬಿಜೆಪಿಗೆ ಹಾಸನದಲ್ಲಿ ಸ್ಥಳವಿಲ್ಲ ಮತ್ತು ಗೆಲುವು ಅಸಾಧ್ಯ ಎಂದು ತಿಳಿದ ಬಳಿಕ ಮಾಜೀ ಪ್ರಧಾನಿ ದೇವೇಗೌಡರ ಕುಟುಂಬದ ಹೆಸರನ್ನು ಕೆಡಿಸಲು ಈ ಸಂಚು ಮಾಡಲಾಗಿದೆ. ಪೆನ್ ಡ್ರಯ್ವ್ ತಯಾರಿಸಿ ಹಂಚುವ ಮೂಲಕ ದೇವೇಗೌಡರ ಕುಟುಂಬಕ್ಕೆ ಕಳಂಕ ಹಚ್ಚಲು ಭಾರೀ ತೆರೆಯ ಮರೆಯ ಸಂಚು ನಡೆದಿದೆ ಎಂದು ಕುಮಾರಸ್ವಾಮಿಯವರು ಸುದ್ದಿ ಸಂಸ್ಥೆಯೊಂದರ ಜೊತೆಗೆ ಮಾತನಾಡುತ್ತ ಹೇಳಿದರು. ಒಬ್ಬರು ಹಿರಿಯ ಮಂತ್ರಿ ಸೇರಿ ಇಬ್ಬರು ಸಚಿವರು ಅದರಲ್ಲೂ ಹಾಸನ ಜಿಲ್ಲೆಯ ಹಲವಾರು ಬಿಜೆಪಿ ನಾಯಕರು ಈ ಪೆನ್ ಡ್ರಯ್ವ್ ನಾಟಕದ ಹಿಂದೆ ಇದ್ದಾರೆ ಎಂದು ಕುಮಾರಸ್ವಾಮಿಯವರು ಆರೋಪ ಮಾಡಿದ್ದಾರೆ.
