ಒಂದಾದರೂ ಸತ್ಯ ಹೇಳಿ ಮೋದಿಯವರೆ- ಮುಖ್ಯಮಂತ್ರಿ
ಒಂದಾದರೂ ಸತ್ಯ ಹೇಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಧಾನಿ ಮೋದಿಯವರಿಗೆ ಮನವಿ ಮಾಡಿದ್ದಾರೆ. ಆಳುವವರ ಸುಳ್ಳನ್ನು ಬಯಲು ಮಾಡುವುದು ಬುದ್ಧಿಜೀವಿಗಳ ಕರ್ತವ್ಯ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಾದ ಡಿ. ವೈ. ಚಂದ್ರಚೂಡ್ ಕಳೆದ ವರುಷ ಹೇಳಿದ್ದರು.
ಸರಕಾರಗಳು ಸುಳ್ಳು ಮತ್ತು ಸುಳ್ಳು ಸುದ್ದಿಗಳ ವಿರುದ್ಧ ಕಾವಲುಗಾರ ಆಗಿ ನಿಲ್ಲಬೇಕು ಎಂದೂ ಅವರು ಹೇಳಿದರು.
ಪ್ರಜಾಪ್ರಭುತ್ವ ಮತ್ತು ಸತ್ಯ ಕೈ ಕೈ ಹಿಡಿದು ಸಾಗಬೇಕು. ಆದರೆ ನಿರಂಕುಶವಾದಿ ಸರಕಾರಗಳು ಮುಖ್ಯತ್ವ ಪಡೆಯಲು ಸುಳ್ಳುಗಳ ಮೇಲೆ ಬದುಕುತ್ತವೆ ಎಂದೂ ಚಂದ್ರಚೂಡ್ ಹೇಳಿದರು.
ಸತ್ಯವು ಸಾರ್ವಜನಿಕರ ನಂಬಿಕೆ ಗಳಿಸಲು ಅಗತ್ಯ. ಸ್ವಾತಂತ್ರ್ಯ ಪಡೆದಾಗ ದೇಶವು ಸತ್ಯಕ್ಕೆ ಜಯ ಎಂದಿತು. ಈಗ ಅದು ನಶಿಸುತ್ತಿದೆ ಎಂದೂ ಅವರು ತಿಳಿಸಿದರು. ಭಾರತವು ಯಾರಿಂದ ಹೆಸರು ಪಡೆದಿದೆ, ಸನಾತನ ಎಂಬುದಕ್ಕೆ ಆಧಾರವೇನು ಇತ್ಯಾದಿ ಪ್ರಶ್ನೆಗಳನ್ನೂ ಸುಕೋ ಮುನ್ಯಾರ ಹೇಳಿಕೆಗೆ ನಾವು ಸೇರಿಸಬಹುದು.