Home ಕರಾವಳಿ Archive by category ಬಂಟ್ವಾಳ (Page 36)

ಬಂಟ್ವಾಳದಲ್ಲಿ ಹಸಿರು ನಮನ ಹಾಗೂ ಶ್ರದ್ಧಾಂಜಲಿ ಸಭೆ

ಗದಗ ಜಿಲ್ಲೆಯ ನರಗುಂದದಲ್ಲಿ 41 ನೇ ರೈತಹುತಾತ್ಮ ದಿನಾಚರಣೆಯ ಅಂಗವಾಗಿ ಕೃಷಿ ಉಳಿಸಿ – ಪ್ರಜಾಪ್ರಭುತ್ವ ರಕ್ಷಿಸಿಸಂಕಲ್ಪ ದಿನದಂದು ದೇಶದ ರೈತರ ಸಂಕಕ್ಷಣೆ ಮತ್ತು ಪ್ರಜಾಪ್ರಭುತ್ವ ರಕ್ಷಿಸುವ ಪ್ರತಿಜ್ಞೆ ಮಾಡಿ ಹಿಂತಿರುಗುವ ಸಂದರ್ಭದಲ್ಲಿ ಚಿಕ್ಕಮಗಳೂರಿನ ಹತ್ತಿರ ಭಾರಿ ವಾಹನ ಅಪಘಾತದಲ್ಲಿ ಹುತಾತ್ಮರಾದ ಕರ್ನಾಟಕ ರಾಜ್ಯ ರೈತಸಂಘದ ಕಾರ್ಯಾಧ್ಯಕ್ಷರಾದ

ಸೊರ್ನಾಡು ಬಳಿ ಡೀಸೆಲ್ ಪೈಪ್‌ಲೈನ್‌ಗೆ ಕನ್ನ

ಬಂಟ್ವಾಳ: ಮಣ್ಣಡಿ ಹಾದು ಹೋಗಿರುವ ಪೈಪ್ ಲೈನ್ ಗೆ ಕನ್ನ ಕೊರೆದು ಡಿಸೇಲ್ ಕಳವು ನಡೆಸುತ್ತಿದ್ದ ಪ್ರಕರಣವೊಂದು ತಾಲೂಕಿನ ಅರಳ ಗ್ರಾಮದ ಸೊರ್ನಾಡು ಬಳಿ ಶುಕ್ರವಾರ ರಾತ್ರಿ ಬೆಳಕಿಗೆ ಬಂದಿದೆ. ಇಲ್ಲಿನ ಅರ್ಬಿ ಎಂಬಲ್ಲಿ ಐವನ್ ಪಿಂಟೊ ಎಂಬರಿಗೆ ಸೇರಿದ ಖಾಸಗಿ ಜಮೀನಿನಲ್ಲಿ ಮಂಗಳೂರು- ಬೆಂಗಳೂರಿಗೆ ಹಾದು ಹೋಗಿರುವ ಎಚ್ ಪಿ.ಎಸ್ ಎಲ್ ಪೆಟ್ರೊನೆಟ್ ಸಂಸ್ಥೆಗೆ ಸೇರಿದ ಪೈಪ್ ಲೈನ್ ಗೆ ಕನ್ನ ಕೊರೆದು ಡಿಸೆಲ್ ಕಳವು ನಡೆಸಲಾಗಿರುವುದಾಗಿ ತಿಳಿದು ಬಂದಿದೆ. ಪ್ರಕರಣ ಬೆಳಕಿಗೆ

ಬಂಟ್ವಾಳ : ಸಂಚಾರಿ ಆರೋಗ್ಯ ಬಸ್ ಆರಂಭ

ಬಂಟ್ವಾಳದ ತಾಲೂಕಿನ ಜನತೆಗೆ ಉತ್ಕೃಷ್ಟ ವಾದ ಉಚಿತ ಆರೋಗ್ಯ ಸೇವೆ ಕಲ್ಪಿಸುವ ನಿಟ್ಟಿನಲ್ಲಿ ಸಂಚಾರಿ ಆರೋಗ್ಯ ಬಸ್ ಆರಂಭಿಸಲಾಗಿದೆ. ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಅವರ ಮುತುವರ್ಜಿಯಿಂದ ಸಂಚಾರಿ ಆರೋಗ್ಯ ಬಸ್ ವ್ಯವಸ್ಥೆ ಮಾಡಲಾಗಿದೆ. ಜನರ ಆರೋಗ್ಯದ ಸುರಕ್ಷತೆಯ ಜಾಗೃತಿಯ ಸಲುವಾಗಿ ನಿಟ್ಟಿನಲ್ಲಿ ಈ ವ್ಯವಸ್ಥೆಯನ್ನ ಮಾಡಲಾಗಿದೆ. ಇನ್ನು ಕಾವಳಮೂಡುರು ಗ್ರಾಮ ಪಂಚಾಯತ್ ನ ಕೆದ್ದಳಿಕೆ ಶಾಲಾ ವಠಾರಕ್ಕೆ ಸಂಚಾರಿ ಆರೋಗ್ಯ ಬಸ್ ಆಗಮಿಸಿತು. ಇದರ ಸದುಪಯೋಗವನ್ನು

ರೈಲ್ವೇ ಹಳಿಯಲ್ಲಿ ಯುವಕನ ಮೃತದೇಹ ಪತ್ತೆ

ಬಂಟ್ವಾಳ: ಕಳ್ಳಿಗೆ ಗ್ರಾಮದ ದೇವಂದಬೆಟ್ಟು ಎಂಬಲ್ಲಿನ ರೈಲ್ವೇ ಹಳಿಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ. ಸ್ಥಳೀಯ ನಿವಾಸಿ ಲಕ್ಷ್ಮಣ ಎಂಬವರ ಮಗ ಕಾರ್ತಿಕ್ ಎಂಬಾತನ ಮೃತದೇಹವಿದಾಗಿದ್ದು ಸಾವಿನ ಬಗ್ಗೆ ಸಂಶಯ ವ್ಯಕ್ತವಾಗಿದೆ. ಸಂಜೆಯ ವೇಳೆ ಮನೆಯಿಂದ ಹೊರಟ ಕಾರ್ತಿಕ್ ತಡರಾತ್ರಿಯಾದರೂ ಮನೆಗೆ ಬಾರದ ಹಿನ್ನಲೆಯಲ್ಲಿ ಮನೆಮಂದಿ ಹುಡುಕಾಟ ಆರಂಭಿಸಿದ್ದರು. ಇಂದು ಮುಂಜಾನೆ ೩ ಗಂಟೆಯ ವೇಳೆಗೆ ಮೃತದೇಹ ಪತ್ತೆಯಾಗಿದ್ದು ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ

ಬಂಟ್ವಾಳ: ಸೇತುವೆಯಲ್ಲಿ ಬೈಕನ್ನು ಚಾಲನೆ ಸ್ಥಿತಿಯಲ್ಲಿಯೇ ಇಟ್ಟು ಯವಕ ನಾಪತ್ತೆ

ಬೆಂಗಳೂರು ಮೂಲದ ಯುವಕನೋರ್ವ ಪಾಣೆಮಂಗಳೂರಿನ ಹೊಸ ಸೇತುವೆಯಲ್ಲಿ ಬೈಕನ್ನು ಚಾಲನೆ ಸ್ಥಿತಿಯಲ್ಲಿಯೇ ಇಟ್ಟು ನಾಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರಿನ ದಾಸರಹಳ್ಳಿ ನಿವಾಸಿ ಸತ್ಯವೇಲು(29) ನಾಪತ್ತೆಯಾದ ಯವಕನಾಗಿದ್ದು ಬಂಟ್ವಾಳ ಪೊಲೀಸರು ಬೈಕನ್ನ ವಶಕ್ಕೆ ಪಡೆದುಕೊಂಡು ಯುವಕನಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ. ಈತ ಎರಡು ವಾರಗಳ ಹಿಂದೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಬೆಂಗಳೂರಿನಿಂದ ಪಾಣೆಮಂಗಳೂರಿಗೆ ಬಂದಿದ್ದ. ಆದರೆ ಸ್ಥಳೀಯರು

ವಿಟ್ಲದಲ್ಲಿ ಚಿರತೆಗಳ ಕಾಟ: ಬೇಸತ್ತ ಸಾರ್ವಜನಿಕರಿಂದ ಬೋನು ಅಳವಡಿಕೆ

ಬಂಟ್ವಾಳ ತಾಲೂಕಿನ ವಿಟ್ಲದ ಕೊಳ್ನಾಡು ಗ್ರಾಮದ ಮದಕ, ಪಡಾರು, ಮಾದಕಟ್ಟೆ, ಬಾರೆಬೆಟ್ಟು, ಮುಂಡತ್ತಜೆ ಮತ್ತು ತಾಳಿತ್ತನೂಜಿ ಸುತ್ತಮುತ್ತ ಕಳೆದ ಎರಡು ತಿಂಗಳಿಂದ ಮಿತಿಮೀರಿದ ಚಿರತೆಗಳ ಕಾಟದಿಂದ ಬೇಸತ್ತ ಸಾರ್ವಜನಿಕರು ಬೋನು ಅಳವಡಿಸಿದ್ದಾರೆ. ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದರೂ ಒಂದು ಬಾರಿ ಮಾತ್ರ ಸ್ಥಳಕ್ಕಾಗಮಿಸಿ ಹರಕೆ ತೀರಿಸಿದ್ದಾರೆ. ಬೋನು ತಂದಿಟ್ಟು ಚಿರತೆ ಹಿಡಿಯುವಂತೆ ಸ್ಥಳೀಯರು ಅಂಗಲಾಚಿದ್ದರೂ  ತಂದಿರಿಸುತ್ತೇವೆಂದು ತಿಳಿಸಿದ್ದರು. ಅದಾದ ಬಳಿಕ

ಜಕ್ರಿಬೆಟ್ಟು ಹೊಸ್ಮಾರ್ ಪೈಪ್‌ಲೈನ್ ಕಾಮಗಾರಿ: ಕೆಲಸ ಪೂರ್ಣಗೊಳಿಸಲು ಮುಂದಾದ ಸಂಸ್ಥೆ

ಬಂಟ್ವಾಳ: ಬಿ.ಸಿ.ರೋಡು- ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗಾಗಿ ಬಂಟ್ವಾಳ ಬೈಪಾಸ್ ಜಂಕ್ಷನ್ ಬಳಿಯಿಂದ ಜಕ್ರಿಬೆಟ್ಟುವರೆಗೆ ಎಂಆರ್‌ಪಿಎಲ್ ಸಂಸ್ಥೆಗೆ ನೀರು ಸರಬರಾಜಾಗುವ ಪೈಪ್‌ಲೈನ್ ಸ್ಥಳಾಂತರ ಕಾಮಗಾರಿ ವೇಳೆ ನಡೆದಿದ್ದ ಅಪೂರ್ಣ ಕೆಲಸವನ್ನು ಸಂಸ್ಥೆ ಪೂರ್ಣಗೊಳಿಸಲು ಮುಂದಾಗಿದೆ. ಕಳೆದ ಮೂರು ದಿನದ ಹಿಂದೆ ಈ ಸಮಸ್ಯೆಯ ಬಗ್ಗೆ ವಿ೪ ನ್ಯೂಸ್‌ನಲ್ಲಿ ಸಮಗ್ರ ವರದಿಯನ್ನು ಬಿತ್ತರಿಲಾಗಿತ್ತು. ಜಕ್ರಿಬೆಟ್ಟು ಹೊಸ್ಮಾರ್ ಎಂಬಲ್ಲಿ ರಸ್ತೆ ಬದಿ ಪೈಪ್

ಕಟೀಲ್ ಆಡಿಯೋ ವಿವಾದ: ಪಕ್ಷ ಸಂಘಟನೆ ಸಹಿಸಲಾಗದೆ ಆಡಿಯೋ ಕ್ರಿಯೇಟ್: ಹರಿಕೃಷ್ಣ ಬಂಟ್ವಾಳ್

ನಳಿನ್ ಕುಮಾರ್ ಕಟೀಲ್ ಅವರದ್ದು ಎನ್ನಲಾದ ಅನ್ನುವ ಆಡಿಯೋಗು ನಮ್ಮ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಕಿಯೋನಿಕ್ಸ್ ಅಧ್ಯಕ್ಷರಾದ ಹರಿಕೃಷ್ಣ ಬಂಟ್ವಾಳ್ ಹೇಳಿದರು. ಅವರು ಬೆಳ್ತಂಗಡಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಈಗಾಗಲೇ ಸಚಿವರಾದ ಈಶ್ವರಪ್ಪನವರು ಹೇಳಿಕೆಯನ್ನು ನೀಡಿದ್ದಾರೆ. ಆ ಆಡಿಯೋ ನಳಿನ್ ಕುಮಾರ್ ಕಟೀಲ್ ಅವರದ್ದಲ್ಲ, ಯಾರೋ ಬೇಕಂತಲೇ ಕ್ರಿಯೇಟ್ ಮಾಡಿದ್ದಾರೆ ಎಂದು ಹೇಳಿದ್ದಾರೆ. ಕಟೀಲ್‌ರವರು ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡುವುದನ್ನು ಸಹಿಸದೆ

ಹಡೀಲು ಭೂಮಿಯಲ್ಲಿ ಕೃಷಿಕ್ರಾಂತಿ:ಅಮ್ಮುಂಜೆಯಲ್ಲಿ ಶಾಸಕ ರಾಜೇಶ್ ನಾಯಕ್‌ ರಿಂದ ಚಾಲನೆ

ಬಂಟ್ವಾಳ: ಹಡಿಲು ಭೂಮಿಯಲ್ಲಿ ಕೃಷಿಕ್ರಾಂತಿ ಎಂಬ ಬಂಟ್ವಾಳ ಶಾಸಕರ ಯೋಜನೆಯಂತೆ ಬಿಜೆಪಿ ಯುವಮೋರ್ಚಾ ತಂಡದ ವತಿಯಿಂದ ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿಯವರ ಮುಂದಾಳತ್ವದಲ್ಲಿ ಅಮ್ಮುಂಜೆ ಪರಿಸರದ ಸುಮಾರು 5 ಎಕರೆ ಹಡಿಲು ಭೂಮಿಯಲ್ಲಿ ಕೃಷಿ ಚಟುವಟಿಕೆಗೆ ಬಂಟ್ವಾಳ ಶಾಸಕ ರಾಜೇಶ್ ನಾಕ್ ಭಾನುವಾರ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಯುವ ಸಮುದಾಯ ಕೃಷಿಯತ್ತ ಒಲವು ತೋರಿದರೆ ಈ ದೇಶದಲ್ಲಿ ಕೃಷಿಯಲ್ಲಿ ಮಹತ್ತರವಾದ ಬದಲಾವಣೆ ಸಾಧ್ಯ ಎಂದು

ಆಲಂಪುರಿ ರಸ್ತೆ ಬದಿಯ ಗುಡ್ಡ ಕುಸಿತ: ಅಡಿಕೆ ಮರಗಳು ಧರಶಾಹಿ

ಬಂಟ್ವಾಳ: ಶುಕ್ರವಾರ ರಾತ್ರಿಯಿಂದಲೇ ಸುರಿದ ಭಾರೀ ಮಳೆಗೆ ಬಿ.ಸಿ.ರೋಡು ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿ ಕೆಳಗಿನ ವಗ್ಗ ಬಳಿಯ ಆಲಂಪುರಿ ಎಂಬಲ್ಲಿ ರಸ್ತೆ ಬದಿಯ ಗುಡ್ಡ ಕುಸಿದು ಸ್ಟ್ಯಾನಿ ಲೋಬೋ ಎಂಬವರಿಗೆ ಸೇರಿದ ತೋಟದ ೫೦ಕ್ಕೂ ಅಧಿಕ ಅಡಿಕೆ ಮರಗಳು ಧರಶಾಹಿಯಾಗಿದೆ. ಬಿ.ಸಿ. ರೋಡು ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ವೇಳೆ ಅವೈಜ್ಞಾನಿಕವಾಗಿ ರಸ್ತೆ ಬದಿಯ ಗುಡ್ಡವನ್ನು ಅಗೆದಿರುವ ಪರಿಣಾಮ ಗುಡ್ಡ ಕುಸಿಯಲು ಕಾರಣ ಎಂದು ಆರೋಪಿಸಲಾಗಿದೆ.