Home ಕರಾವಳಿ Archive by category ಮಂಗಳೂರು (Page 130)

ನವೆಂಬರ್ 22 ಮಂಗಳೂರಿನಲ್ಲಿ “ಹೋಮ್ ಆರ್ಟ್ ಲೈಟ್ಸ್” ಶುಭಾರಂಭ

ಮಂಗಳೂರು: ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಯ ಜನತೆಗೊಂದು ಸಿಹಿ ಸುದ್ದಿ ಮಂಗಳೂರಿನಲ್ಲಿ ಮೊತ್ತ ಮೊದಲ ಬಾರಿಗೆ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಬ್ರಾಂಡೆಡ್ ಲೈಟಿಂಗ್ ಔಟ್ ಲೆಟ್ ಶೋ ರೂಂ ಮಳಿಗೆ ಹೋಮ್ ಆರ್ಟ್ ಲೈಟ್ಸ್ ಇದೇ ಬರುವ 2022 ನವೆಂಬರ್ 27 ರಂದು ಭಾನುವಾರ ಬೆಳಿಗ್ಗೆ 11 ಗಂಟೆಗೆ ಶುಭಾರಂಭಗೊಳ್ಳಲಿರುವುದಾಗಿ ಸಂಬಂಧಪಟ್ಟವರು ಪತ್ರಿಕಾ ಹೇಳಿಕೆಯಲ್ಲಿ

ಕೊಂಕಣಿ ಮತ್ತು ಬ್ಯಾರಿ ಅಕಾಡಮಿಗಳ ಸಂಯೋಜಿತ ಐಕ್ಯತಾ ಕಾರ್ಯಕ್ರಮ.

ಕರ್ನಾಟಕ ಕೊಂಕಣಿ ಹಾಗೂ ಬ್ಯಾರಿ ಅಕಾಡಮಿ ಗಳು ಜಂಟಿಯಾಗಿ ನಾಳೆ ನವೆಂಬರ್ 23 ಬುಧವಾರ ಕೊಂಕಣಿ ಅಕಾಡೆಮಿಯ ಸಭಾಂಗಣ ಲಾಲ್ ಬಾಗ್ ಮಹಾನಗರ ಪಾಲಿಕೆಯ ಕಛೇರಿಯ ಹಿಂದಿನಲ್ಲಿ ಸಂಜೆ ನಾಲ್ಕು ಗಂಟೆಗೆ ವಿವಿಧ ಭಾಷೆಗಳ ಹಾಗೂ ಸಂಸ್ಕೃತಿಯ ಏಕತೆಯ ಬಗ್ಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರಿಜಿಸ್ಟ್ರಾರ್ ಮನೋಹರ್ ಕಾಮತ್ ತಿಳಿಸಿದ್ದಾರೆ.ಕೊಂಕಣಿ, ಬ್ಯಾರಿ, ತುಳು,ಕನ್ನಡ, ಹವ್ಯಕ ಭಾಷೆಗಳ ನಾಮಾಂಕಿತ ಕವಿಗಳು ತಮ್ಮ ಐಕ್ಯತಾ ಪ್ರೋತ್ಸಾಹ ಕವಿತೆಗಳು ಸಾಧರ ಪಡಿಸುವರು.ಕನ್ನಡ

ಮಂಗಳೂರು ದಕ್ಷಿಣ: ಕಾಂಗ್ರೆಸ್ ಟಿಕೆಟ್‍ಗಾಗಿ ವಿಶ್ವಾಸ್ ಕುಮಾರ್ ದಾಸ್ ಅರ್ಜಿ ಸಲ್ಲಿಕೆ

ಮುಂಬರುವ ವಿಧಾನಸಭಾ ಚುನಾವಣೆಗೆ ಮಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ನೀಡುವಂತೆ ಮನವಿ ಮಾಡಿ ಕಾಂಗ್ರೆಸ್ ಮುಖಂಡ ಹಾಗೂ ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾ ಅಧ್ಯಕ್ಷ ವಿಶ್ವಾಸ್‍ಕುಮಾರ್ ದಾಸ್ ಬೆಂಗಳೂರು ಕೆಪಿಸಿಸಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದರು. ಪಕ್ಷದ ಕಾರ್ಯಕರ್ತರ ಒತ್ತಾಸೆಯಂತೆ ನಾನು ಅರ್ಜಿ ಸಲ್ಲಿಸಿದ್ದೇನೆ. ಜಿಲ್ಲೆಯಲ್ಲಿ ಹಿಂದುಳಿದ ವರ್ಗದ ಅಭ್ಯರ್ಥಿಯೊಬ್ಬರನ್ನು ಕಣಕ್ಕಿಳಿಸುವಂತೆ ಪಕ್ಷದ ಕಾರ್ಯಕರ್ತರ ಆಶಯಕೂಡ

ಕನ್ನಡಿಗಾಸ್ ಫೆಡರೇಷನ್ ಸಂಚಾಲಕ ಹಿದಾಯತ್ ಅಡ್ಡೂರಿಗೆ ‘ಅಂತಾರಾಷ್ಟ್ರೀಯ ವಿಶ್ವ ಮಾನ್ಯ’ ಪ್ರಶಸ್ತಿಯ ಗೌರವ!

ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ದುಬೈನ ಶೇಕ್ ರಶೀದ್ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವ ಕನ್ನಡ ಹಬ್ಬ ಕಾರ್ಯಕ್ರಮ ಕನ್ನಡಿಗರು ದುಬೈ ಸಹಯೋಗದೊಂದಿಗೆ ನವೆಂಬರ್ 19ರಂದು ಬಹಳಾ ವಿಜ್ರಂಭಣೆಯಿಂದ ನಡೆಯಿತು. ಅಂತಾರಾಷ್ಟ್ರೀಯ ಕನ್ನಡಿಗಾಸ್ ಫೆಡರೇಷನ್ ಸಂಚಾಲಕರಾಗಿರುವ ಹಿದಾಯತ್ ಅಡ್ಡೂರ ಕೋವಿಡ್ ಸಂದರ್ಭದಲ್ಲಿ ದುಬೈನಲ್ಲಿ ಕೋವಿಡ್ ವಾರಿಯರ್ ಆಗಿ ಮುಂಚೂಣಿಯಲ್ಲಿ ನಡೆಸಿದ ಸೇವೆಯನ್ನು ಹಾಗೂ ಕನ್ನಡ ಪರ ಸೇವೆಯನ್ನು ಗುರುತಿಸಿ ‘ಅಂತಾರಾಷ್ಟ್ರೀಯ ವಿಶ್ವ

ಕೇವಲ 30 ರೂಪಾಯಿಗೆ ಕೊಲೆ

ಮಂಗಳೂರು: ಹಣತೆ ವ್ಯಾಪಾರಕ್ಕಾಗಿ ಮಂಗಳೂರು ನಗರಕ್ಕೆ ಬಂದಿದ್ದ ತಮಿಳುನಾಡಿನ ಸೇಲಂ ನಿವಾಸಿ ಮಾಯವೇಳ್ ಪೆರಿಯಸಾಮಿ (52) ಎಂಬವರನ್ನು ಹಣದಾಸೆಗೆ ಕೊಲೆಗೈದ ಪ್ರಕರಣ ತಡವಾಗಿ ಬಂದಿದ್ದು, ಈ ಸಂಬಂಧ ಆರೋಪಿ ಹೂವಿನ ಹಡಗಲಿ ನಿವಾಸಿ ರವಿ ಯಾನೆ ವಕೀಲ್ ನಾಯ್ಕ್ (42) ಎಂಬಾತನನ್ನು ಬಂದರು ಪೊಲೀಸರು ಬಂಧಿಸಿದ್ದಾರೆ.ಕೊಲೆಯಾದ ಮಾಯವೇಳ್ ಪೆರಿಯಸಾಮಿ ಅವರ ಮೃತ ದೇಹದ ಅವಶೇಷಗಳಾದ ತಲೆಬುರುಡೆ, ಮೂಳೆ ಇತ್ಯಾದಿಗಳು ಕೂಳೂರು ಮೈದಾನದ ಬಳಿ ಪತ್ತೆಯಾಗಿವೆ. ಹಣತೆಯನ್ನು ಮಾಯಾವೇಳ್‌

ಮಂಗಳೂರು; KSRTC ಬಸ್ ನಿಲ್ದಾಣದಲ್ಲಿ ಅನುಮಾನಾಸ್ಪದ ಬ್ಯಾಗ್

ಮಂಗಳೂರು ನಗರದ ಬಿಜೈಯಲ್ಲಿರುವ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಅನುಮಾನಾಸ್ಪದ ಬ್ಯಾಗ್ ವೊಂದು ಆತಂಕ ಸೃಷ್ಟಿಸಿದ ಪ್ರಸಂಗ ಇಂದು ನಡೆದಿದೆ. ಬಸ್ ನಿಲ್ದಾಣದ ಅನುಮಾನಾಸ್ಪದ ಬ್ಯಾಗ್ ವಿಚಾರ ತಿಳಿಯುತ್ತಲೇ ಸ್ಥಳಕ್ಕಾಗಮಿಸಿದ ಬಾಂಬ್ ಸ್ಕ್ಯಾಡ್ , ಶ್ವಾನದಳ ಅದನ್ನು ಪರಿಶೀಲನೆ ನಡೆಸಿತು. ಈ ನಡುವೆ ಬ್ಯಾಗ್ ವಾರಸುದಾರ ಪತ್ತೆಯಾಗಿದ್ದು, ಅದು ಬಸ್ ಪ್ರಯಾಣಿಕನೊಬ್ಬನಿಗೆ ಸೇರಿದ್ದೆಂದು ತಿಳಿದುಬಂತು. ಇದರೊಂದಿಗೆ ಬಸ್ ನಿಲ್ದಾಣದಲ್ಲಿದ್ದವರು ನಿರಾಳರಾದರು.

ನಿಟ್ಟೆ ಡಾ. ಶಂಕರ್ ಅಡ್ಯಂತಾಯ ಸ್ಮಾರಕ ಪದವಿಪೂರ್ವ ಕಾಲೇಜು : ವಾರ್ಷಿಕ ಕ್ರೀಡಾಕೂಟ

ಕ್ರೀಡೆ ಮನುಷ್ಯನ ಸರ್ವತೋಮುಖ ಅಭಿವೃದ್ಧಿಯಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ. ಸ್ಪರ್ಧಾತ್ಮಕ ಮನೋಭಾವ, ನಾಯಕತ್ವದ ಗುಣ, ಹೊಂದಾಣಿಕೆ, ಒಂದು ತಂಡವಾಗಿ ದುಡಿಯುವುದು ಇವೇ ಮೊದಲಾದ ಗುಣಗಳನ್ನು ಬಾಲ್ಯದಲ್ಲೇ ಕ್ರೀಡಾ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಬೆಳೆಸಬಲ್ಲದು. ಅಲ್ಲದೆ ಆರೋಗ್ಯದ ಸ್ಥಿರತೆ ಹಾಗೂ ಏಕಾಗ್ರತೆ ವೃದ್ಧಿಗೂ ಕ್ರೀಡೆ ಪರಿಣಾಮಕಾರಿಯಾಗಬಲ್ಲದು ಎಂದು ಕ್ರೀಡಾ ಸಾಧಕ ವಿದ್ಯಾರ್ಥಿಗಳಿಗೆ ವಿದ್ಯಾಸಂಸ್ಥೆ ಸದಾ ಬೆಂಗಾವಲಾಗಿ ಪ್ರೋತ್ಸಾಹಿಸುತ್ತದೆ ಎಂದು

ಕುಕ್ಕರ್ ಸ್ಫೋಟ ಮೈಸೂರು, ಮಂಗಳೂರಿನಲ್ಲಿ ನಾಲ್ವರು ವಶಕ್ಕೆ

ನಗರದ ನಾಗುರಿಯಲ್ಲಿ ರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸಾಗಿಸುತ್ತಿದ್ದಾಗ ನಡೆದ ಸ್ಪೋಟದಲ್ಲಿ ಗಾಯಗೊಂಡು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿ ಶಾರೀಕ್ ಎಂಬುದನ್ನು ಆತನ ಕುಟುಂಬದವರು ಖಚಿತ ಪಡಿಸಿದ್ದಾರೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಮಾಹಿತಿ ನೀಡಿದರು. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ನಿವಾಸಿ ಮುಹಮ್ಮದ್ ಶಾರಿಕ್(24) ಆರೋಪಿಯಾಗಿದ್ದಾನೆ. ಈತ 2020ರಲ್ಲಿ ಮಂಗಳೂರು ನಗರದಲ್ಲಿ ಕಂಡುಬಂದ ಪ್ರಚೋದನಕಾರಿ ಗೋಡೆ ಬರಹ ಪ್ರಕರಣದ

ಹೆಜಮಾಡಿಯಲ್ಲಿ ಟೋಲ್ ಹೆಚ್ಚಿಸುವ ದುಸ್ಸಾಹಸ ಮಾಡಬೇಡಿ : ವಿನಯ ಕುಮಾರ್ ಸೊರಕೆ

ಸುರತ್ಕಲ್ ಅಕ್ರಮ ಟೋಲ್ ಗೇಟ್ ಮುಚ್ಚುವುದು ಸರಿಯಾದ ಕ್ರಮ. ಇದು ಜನತೆ ನಡೆಸಿದ ಅವಿರತ ಹೋರಾಟದ ಫಲ. ಆದರೆ ವಿಲೀನದ ಹೆಸರಿನಲ್ಲಿ ಹೆಜಮಾಡಿಯಲ್ಲಿ ಸುಂಕ ಹೆಚ್ಚಿಸುವ ದುಸ್ಸಾಹಸ ಮಾಡಿದರೆ ಹೋರಾಟ ಹೊಸ ತಿರುವು ಪಡೆದುಕೊಳ್ಳಲಿದೆ. ಎರಡೂ ಜಿಲ್ಲೆಯ ಜನರನ್ನು ಸಂಘಟಿಸಿ ಬಿಜೆಪಿಯ ದುರಾಡಳಿತವನ್ನು ಕೊನೆಗೊಳಿಸಲಾಗುವುದು ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು. ಅವರು ಟೋಲ್ ತೆರವಿಗೆ ಒತ್ತಾಯಿಸಿ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಧರಣಿಯ ಇಪ್ಪತ್ತ ಮೂರನೇ ದಿನದ

ಬಾಂಬ್ ಬ್ಲಾಸ್ಟ್ ಭಾರತೀಯ ಜನತಾ ಪಕ್ಷದ ಚುನಾವಣಾ ತಂತ್ರ : ಹಿಂದೂ ಮಹಾಸಭಾ ವ್ಯಂಗ್ಯ

2023 ರ ವಿಧಾನಸಭಾ ಚುನಾವಣೆಯಲ್ಲಿ ಸೋಲುವ ಬೀದಿಗೆ ಬೆದರಿದ ಭಾರತೀಯ ಜನತಾ ಪಕ್ಷದ ಹತಾಶೆಯ ನಡೆಯೇ ಈ ಬಾಂಬ್ ಬ್ಲಾಸ್ಟ್ ಪ್ರಕರಣ…ಅತಂಕವಾದ ಅಳಿಸಿ ..ದೇಶ ಉಳಿಸಿ ಎಂಬ ಹಿಂದೂ ಮಹಾಸಭಾ ಘೋಷ ವಾಕ್ಯವನ್ನು ಷಡ್ಯಂತ್ರದಿಂದ ತನ್ನದಾಗಿಸಿಕೊಂಡಂತಹ ಭಾರತೀಯ ಜನತಾ ಪಕ್ಷ ,ಕನಿಷ್ಠ ಪಕ್ಷ, ಆ ವಾಕ್ಯದ ಮೌಲ್ಯವನ್ನು ತಿಳಿದುಕೊಂಡಿದ್ದರೆ, ಇವತ್ತು ಈ ಘಟನೆ ಸಂಭವಿಸುತ್ತಿರಲಿಲ್ಲ. ಆಡಳಿತದಲ್ಲಿರುವ ಸರಕಾರ ದ ವೈಫಲ್ಯವೆ ಈ ಘಟನೆಗೆ ಕಾರಣ.ಭಾರತೀಯ ಜನತಾ ಪಕ್ಷದ ಹಿಂದೂ ವಿರೋಧಿ